ಭಾಲ್ಕಿಯಲ್ಲಿ ಸಂಭ್ರಮದ ದೀಪಾವಳಿ ಹಬ್ಬ ಆಚರಣೆ

ಭಾಲ್ಕಿ:ನ.17: ಪಟ್ಟಣದ ಪ್ರಮುಖ ದೇವಾಲಯ, ಮನೆಗಳಲ್ಲಿ ದೀಪಾವಳಿ ಹಬ್ಬದ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು ಳಿನಲ್ಲಿಯೇ ಭಕ್ತರು ವಿವಿಧ ದೇವಾಲಯಗಳಿಗೆ ತೆರಳಿ ದೇವರ ಕೃಪೆಗೆ ಪಾತ್ರರಾದರು.

ದೀಪದ ಹಬ್ಬ ದೀಪಾವಳಿಯ ಹಿನ್ನಲೆಯಲ್ಲಿ ಪಡ್ಡಣದ ಅಂಗಡಿಗಳ ಮುಂಗಟ್ಟಿನಲ್ಲಿ ಆಕರ್ಷಕ ವಿದ್ಯುತ್ ದೀಪಗಳನ್ನು ಹಾಕುವ ಮೂಲಕ ದೀಪಾವಳಿಯ ಸಂಭ್ರಮ ವ್ಯಕ್ತ ಪಡಿಸಿದರು. ಅಲ್ಲದೇ À ಅಮವಾಸೆಯ ನಿಮಿತ್ಯ ಪಟ್ಟಣದ ಪ್ರತಿಯೊಬ್ಬರ ಮನೆಯಲ್ಲಿಯೂ ಲಕ್ಷ್ಮೀ ಮಾತೆಯ ಆಗಮನಕ್ಕಾಗಿ ವಿಷೇಶ ಪೂಜೆ ಸಲ್ಲಿಸಿದರು. ಕುಟುಂಬದ ಸರ್ವ ಸದಸ್ಯರು ಪೂಜೆಯೊಂದಿಗೆ ಪಂಚಾರತಿ, ಅಷ್ಟದೀಪಾರತಿ ಸೇರಿದಂತೆ ವಿವಿಧ ರೀತಿಯ ಪೂಜೆ ಸಲ್ಲಿಸಿ ಭಕ್ತಿ ಭಾವ ಮೆರೆದರು.

ಮನೆಯ ಮುಂದೆ ರಂಗೋಲಿ, ತಳಿರು ತೋರಣದೊಂದಿಗೆ ಮಹಿಳೆಯರು ವಿಶೇಷ ತಿನಿಸುಗಳನ್ನು ಸಿಧ್ಧ ಪಡಿಸಿ, ಹಬ್ಬದ ಸವಿ ಸವಿದರೆ, ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಹಿಂದೂ ಧರ್ಮದ ಆಚರಣೆ ಸಂಪ್ರದಾಯದಂತೆ ಕಳೆದ ಎರಡು ದಿನಗಳಿಂದ ಬೆಳಕಿನ ಹಬ್ಬ ದೀಪಾವಳಿಯನ್ನು ಪಟ್ಟಣ ಪ್ರದೇಶಗಳಲ್ಲಿ ಸಂಭ್ರಮ, ಸಡಗರದಿಂದ ಆಚರಿಸಿದ ದೃಶ್ಯ ಕಂಡು ಬಂತು. ಜನರು ಸಂಭ್ರಮದಿಂದ ತಮ್ಮ ಮನೆಯ ಮುಂದೆ ದೀಪಗಳನ್ನು ಹಚ್ಚಿ ಚಿತ್ತಾಕರ್ಷಕ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.