ಭಾಲ್ಕಿಯಲ್ಲಿ ಪೊಲೀಸ್‍ರಿಂದ ರೂಟ್ ಮಾರ್ಚ್

ಭಾಲ್ಕಿ,ನ.19: ಕಾನೂನು ಸುವ್ಯವಸ್ಥೆ, ಕೋವಿಡ್ ಜಾಗೃತಿ ಮತ್ತು ಕಳವು ಪ್ರಕರಣಗಳಿಗೆ ಪೊಲೀಸರು ಸದಾ ಎಚ್ಚರದಲ್ಲಿರಲಿದ್ದಾರೆ. ಇದಕ್ಕೆ ಸಾರ್ವಜನಕರ ಸಹಕಾರ ಸದಾ ಇರಬೇಕು ಎಂದು ಪಟ್ಟಣದಲ್ಲಿ ಡಿವೈಎಸ್‍ಪಿ ಡಾ.ದೇವರಾಜ ನೇತೃತ್ವದಲ್ಲಿ ಮಂಗಳವಾರ ಪೊಲೀಸ್ ರೂಟ್ ಮಾರ್ಚ್ ಮೂಲಕ ಸಂದೇಶ ಸಾರಲಾಯಿತು.

ನಗರ ಮತ್ತು ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೂಟ್ ಮಾರ್ಚ್ ಮಾಡಿದರು. ಈ ಸಂದರ್ಭದಲ್ಲಿ ಭಾಲ್ಕಿ ಗ್ರಾಮೀಣ ಮತ್ತು ನಗರ ಪೊಲೀಸ್ ಠಾಣೆಯ ಪಿಎಸ್‍ಐಗಳು ಹಾಜರಿದ್ದರು.