ಭಾಲ್ಕಿಯಲ್ಲಿ ಏ.19 ರಿಂದ 23ರ ವರೆಗೆ ಬಸವ ಜಯಂತಿ, ಪಟ್ಟದ್ದೇವರ ಸ್ಮರಣೋತ್ಸವ

ಭಾಲ್ಕಿ:ಮಾ.19:ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ, ಡಾ.ಚನ್ನಬಸವ ಪಟ್ಟದ್ದೇವರ 24ನೆಯ ಸ್ಮರಣೋತ್ಸವ ಮತ್ತು ವಚನ ಜಾತ್ರೆ-2023ರ ನಿಮಿತ್ತ ಇಲ್ಲಿಯ ಹಿರೇಮಠ ಸಂಸ್ಥಾನದಲ್ಲಿ ಪೂರ್ವಭಾವಿ ಸಭೆ ಜರುಗಿತು.
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‍ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಶನಿವಾರ ನಡೆದ ಸಭೆಯಲ್ಲಿ ಏ.19 ರಿಂದ 23ರ ವರೆಗೆ ಪಟ್ಟಣದಲ್ಲಿ ನಡೆಯಲಿರುವ ಐದು ದಿನದ ಐತಿಹಾಸಿಕ ಸಮಾರಂಭದ ಯಶಸ್ವಿಗೆ ಗಣ್ಯರು, ಭಕ್ತರು ಸಲಹೆ, ಸೂಚನೆ ನೀಡಿದರು.
ನೇತೃತ್ವ ವಹಿಸಿದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ ಪ್ರತಿವರ್ಷ ಡಾ.ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ ಅರ್ಥಪೂರ್ಣ ಆಚರಿಸಿಕೊಂಡು ಬರಲಾಗುತ್ತಿದೆ.
ಈ ವರ್ಷ ಬಸವ ಜಯಂತಿ, ಪಟ್ಟದ್ದೇವರ ಸ್ಮರಣೋತ್ಸವ ಏಕಕಾಲಕ್ಕೆ ಬಂದಿರುವುದರಿಂದ ಏ.19 ರಿಂದ 23ರ ವರೆಗೆ ಐದು ದಿನಗಳ ಕಾಲ ವೈವಿದ್ಯಮಯ ಕಾರ್ಯಕ್ರಮಗಳು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
5 ಸಾವಿರ ಮಕ್ಕಳ ಬಾಲ ಬಸವಣ್ಣ ವೇಶಧಾರಿ, ಪ್ರವಚನ, ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮ ಸಮಾರೋಪ, ಸಾಮೂಹಿಕ ವಚನ ಸಪ್ತಾಹ, ವಿಶೇಷ ಗೋಷ್ಠಿ ಸೇರಿ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳು ಜರುಗಲಿವೆ.
ಭಕ್ತರು ಪರಿವಾರ ಸಮೇತರಾಗಿ ಆಗಮಿಸಿ ತನು, ಮನು, ಧನದಿಂದ ಸಹಕರಿಸಿ ಐದು ದಿನದ ಸಮಾರಂಭ ಐತಿಹಾಸಿಕವಾಗಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸಾನ್ನಿಧ್ಯ ವಹಿಸಿದ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಕಳೆದ 24 ವರ್ಷಗಳಿಂದ ಡಾ.ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ ಅರ್ಥಪೂರ್ಣವಾಗಿ ಆಯೋಜಿಸಿ ಅವರ ಚಿಂತನೆ, ತತ್ವಗಳು ಜನತೆಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ.
ಈ ಬಾರಿ ಬಸವ ಜಯಂತಿ ಪಟ್ಟದ್ದೇವರ ಸ್ಮರಣೋತ್ಸವ ದಿನಾಂಕಕ್ಕೆ ಹೊಂದಿಕೊಂಡು ಬಂದಿರುವುದು ಹರ್ಷ ತರಿಸಿದೆ. ಈ ಐದು ದಿನದ ಸಮಾರಂಭದಲ್ಲಿ ನಾಡಿನ ಹೆಸರಾಂತ ಸಾಹಿತಿಗಳು, ಗಣ್ಯರು, ಪ್ರಮುಖರು ಭಾಗವಹಿಸಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಸಿದ್ರಾಮಪ್ಪ ವಂಕೆ, ಬಸವರಾಜ ವಂಕೆ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಶಿವಶರಣಪ್ಪ ಛತ್ರೆ, ಸದಸ್ಯ ರಾಜಕುಮಾರ ವಂಕೆ, ತಾಲೂಕು ಜಾಗತಿಕ ಲಿಂಗಾಯತ ಮಹಾಸಭೆ ಅಧ್ಯಕ್ಷ ಬಸವರಾಜ ಮರೆ, ಶ್ರೀಕಾಂತ ಭೋರಾಳೆ, ಓಂಪ್ರಕಾಶ ರೊಟ್ಟೆ, ಪ್ರಕಾಶ ಮಾಶೆಟ್ಟೆ, ಶಶಿಧರ ಕೋಸಂಬೆ, ಜಯರಾಜ ಪಾತ್ರೆ, ಸಂಗಮೇಶ ವಾಲೆ, ಕಪಿಲ್ ಕಲ್ಯಾಣೆ, ಸೂರಜ ಮಜಗೆ, ಚಂದ್ರಶೇಖರ ಬನ್ನಾಳೆ, ಸಂಗಮೇಶ ಹುಣಜೆ, ರವೀಂದ್ರ ಚಿಡಗುಪ್ಪೆ, ಪ್ರಭು ಡಿಗ್ಗೆ, ಅಶೋಕ ಬಾವುಗೆ, ಮಹಾದೇವ ಸ್ವಾಮಿ, ಅನಿಲ ಲೋಖಂಡೆ, ಸಿದ್ದು ತುಗಶೆಟ್ಟೆ, ನೀಲಕಂಠ ಬಿರಾದಾರ್ ಸೇರಿದಂತೆ ಹಲವರು ಇದ್ದರು.ಕಿರಣ ಖಂಡ್ರೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು.

ಸ್ವಾಗತ ಸಮಿತಿ ರಚನೆ, ಸನ್ಮಾನ
ಬಸವ ಜಯಂತಿ ಮತ್ತು ಪಟ್ಟದ್ದೇವರ ಸ್ಮರಣೋತ್ಸವ ಸ್ವಾಗತ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರನ್ನಾಗಿ ಮಾಜಿ ಶಾಸಕ ಪ್ರಕಾಶ ಖಂಡ್ರೆ ಮತ್ತು ಅಧ್ಯಕ್ಷರನ್ನಾಗಿ ಶಾಸಕ ಈಶ್ವರ ಖಂಡ್ರೆ ಅವರನ್ನು ಡಾ.ಬಸವಲಿಂಗ ಪಟ್ಟದ್ದೇವರು ಸರ್ವಾನುಮತದಿಂದ ಆಯ್ಕೆ ಮಾಡಿ ಘೋಷಿಸಿದರು.

ಡಾ.ಚನ್ನಬಸವ ಪಟ್ಟದ್ದೇವರು ಸಾಮಾಜಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿ ಈ ಭಾಗವನ್ನು ಪವಿತ್ರವಾಗಿಸಿದ್ದಾರೆ. ಅಂತಹ ಪೂಜ್ಯರ ಸ್ಮರಣೋತ್ಸವ, ಬಸವ ಜಯಂತಿ ವೈಭವದಿಂದ ಆಚರಿಸಲು ಅಗತ್ಯ ಸಹಕಾರ ನೀಡುತ್ತೇನೆ.

  • ಈಶ್ವರ ಖಂಡ್ರೆ ಅಧ್ಯಕ್ಷರು ಸ್ವಾಗತ ಸಮಿತಿ. ಡಾ.ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ, ಬಸವ ಜಯಂತಿ ಏಕಕಾಲಕ್ಕೆ ಆಚರಿಸುತ್ತಿರುವುದು ಸಂತಸ ತರಿಸಿದೆ. ಈ ಹಿಂದೆ ಎರಡು ಅವಧಿಗೆ ಶಾಸಕನಾಗಿದ್ದಲೂ ಪಟ್ಟದ್ದೇವರ ಜಯಂತಿ, ಸ್ಮರಣೋತ್ಸವ ಅರ್ಥಪೂರ್ಣ ಆಚರಣೆಗೆ ಸಹಕಾರ ನೀಡುತ್ತ ಬಂದಿದ್ದೇನೆ. ಮುಂದೆಯೂ ಕೊಟ್ಟಿರುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತೇನೆ.
  • ಪ್ರಕಾಶ ಖಂಡ್ರೆ ಗೌರವಾಧ್ಯಕ್ಷ ಸ್ವಾಗತ ಸಮಿತಿ