ಭಾಲ್ಕಿಯಲ್ಲಿ ಏ. 1 ರಂದು ಶ್ರೀ ರಾಮ ನವಮಿ ಉತ್ಸವ

ಭಾಲ್ಕಿ: ಮಾ.28:ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷದ್ ಉತ್ತರ ಕರ್ನಾಟಕದ ವತಿಯಿಂದ ಏ.1 ರಂದು ಶ್ರೀ ರಾಮನವಮಿ ಉತ್ಸವ ಆಯೋಜಿಸಲಾಗಿದೆ. ಪ್ರಸ್ತುತ ಸಾಲಿನ ಉತ್ಸವದಲ್ಲಿ ಸುಮಾರು 10 ಸಾವಿರಕ್ಕಿಂತಲೂ ಜನ ಸೇರುವ ನಿರೀಕ್ಷೆ ಇದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಅಂಬರೀಶಜೀ ಯವರು ತಿಳಿಸಿದರು.
ಪಟ್ಟಣದ ರಾಮ ಮಂದಿರ ಸಭಾಭವನದಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರಸ್ತುತ ಸಾಲಿನ ರಾಮ ನವಮಿ ಉತ್ಸವವು ಅತಿ ವಿಜ್ರಂಭಣೆಯಿಂದ ಆಚರಿಸಲಾಗುವುದು. ಅಂದು ಮದ್ಯಾನ್ಹ 1 ಗಂಟೆಗೆ ಚೌಡಿಯ ವಿಠಲ ಮಂದಿರದಿಂದ ಬೈಕಿ ರ್ಯಾಲಿ ನಡೆಸಲಾಗುವುದು. ನಂತರ 2 ಗಂಟೆಗೆ ವಿಠಲ ಮಂದಿರದಿಂದ ಗಾಂಧಿ ವೃತ್ತದ ವರೆಗೆ ಬೃಹತ್ ಶೋಭಾಯಾತ್ರೆ ನಡೆಸಲಾಗುವುದು. ಸಾಯಂಕಾಲ 7 ಗಂಟೆಗೆ ಗಾಂಧಿ ವೃತ್ತದಲ್ಲಿ ಸಾರ್ವಜನಿಕ ಸಮಾವೇಶ ನಡೆಸಲಾಗುವುದು. ಶೋಭಾ ಯಾತ್ರೆಯಲ್ಲಿ ಕಟ್ಟಿಮನಿ ಹಿರೇಮಠ ಸಂಸ್ಥಾನ ಮೆಹಕರನ ಶ್ರೀ ರಾಜೇಶ್ವರ ಶಿವಾಚಾರ್ಯರು, ಹಿರೇಮಠ ಸಂಸ್ಥಾನ ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು, ಕೊಂಚೂರಿನ ಶ್ರೀ ಸವಿತಾನಂದನಾಥ ಮಹಾಸ್ವಾಮೀಜಿ, ಗೊಬ್ಬುರ ವಾಡಿಯ ಶ್ರೀ ಬಳಿರಾಮ ಮಹಾರಾಜರು, ಹಲಬರ್ಗಾದ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯರು, ಗೋರಚಿಂಚೋಳಿಯ ಶ್ರೀ ಸಿದ್ರಾಮೇಶ್ವರ ಪಟ್ಟದ್ದೇವರು, ಶ್ರೀರಾಮ ಮಂದಿರದ ಶ್ರೀ ವಾಸುದೇವ ಶರ್ಮಾ ಉಪಸ್ಥಿತರಿರುವರು. ಸಾರ್ವಜನಿಕ ಸಮಾವೇಶದಲ್ಲಿ ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಮಂತ್ರಿ ದೇವಜೀ ರಾವತ್ ಮುಖ್ಯ ವಕ್ತಾರರಾಗಿ ಮಾತನಾಡುವರು. ಶಿವಕುಮಾರ ಬೋಳಶೆಟ್ಟಿ, ಸುಭಾಷ ಕಾಂಬಳೆ, ರಾಮಕೃಷ್ಣನ್ ಸಾಳೆ, ಶಿವರಾಜ ಸಂಗೋಳಗೆ, ಸತೀಶ ನೌಬಾದೆ ಉಪಸ್ಥಿತರಿರುವರು. ಹೆಚ್ಚಿನ ಸಂಖೆಯಲ್ಲಿ ಸಾರ್ವಜನಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಲಾಭ ಪಡೆಯಬೇಕು ಎಂದು ಕೋರಿದರು.
ಶ್ರೀರಾಮ ನವಮಿ ಉತ್ಸವ ಸಮಿತಿಯ ಸ್ವಾಗತ ಸಮಿತಿ ಅಧ್ಯಕ್ಷ ಶಿವಕುಮಾರ ಲೋಖಂಡೆ ಮಾತನಾಡಿ, ಪ್ರಸ್ತುತ ಸಾಲಿನ ರಾಮ ನವಮಿ ಉತ್ಸವದಲ್ಲಿ ನಮ್ಮ ನಿರೀಕ್ಷೆಗಿಂತಲೂ ಹೆಚ್ಚಿನ ಜನ ಸೇರುವ ಸಂಭವವಿದೆ. ಈಗಾಗಲೇ ಉತ್ಸವ ನಿಮಿತ್ಯ ವಿವಿಧ ಸಮಿತಿಗಳನ್ನು ರಚಿಸಿ ಪ್ರಚಾರ ನಡೆಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಯಕಿಶನ ಬಿಯಾನಿ, ಆಕಾಶ ರಿಕ್ಕೆ, ಶೈಲೇಶ ಮಾಲಪಾನಿ, ರಾಜು ಭೊಸಲೆ, ಸಾಗರ ಮಲಾನಿ, ಸಚಿನ ಜಾಧವ, ನಾಗೇಶ ತಮಾಸಂಗೆ, ಅಮರ ಜೋಳದಪಕೆ ಉಪಸ್ಥಿತರಿದ್ದರು.