ಭಾರೀ ಮೌಲ್ಯದ ಕೊಕೇನ್ ವಶ!

ರೋಮ್, ಜು.೨೨- ಇಟಲಿಯ ದಕ್ಷಿಣದಲ್ಲಿರುವ ಸಿಸಿಲಿ ಕಡಲತೀರದ ಬಳಿ ಸಮುದ್ರದ ನೀರಿನಲ್ಲಿ ತೇಲುತ್ತಿದ್ದ ಬರೊಬ್ಬರಿ ೫.೩ ಟನ್‌ಗಳಷ್ಟು ಮಾದಕ ಪದಾರ್ಥ ಕೊಕೇನ್ ಅನ್ನು ವಶಕ್ಕೆ ಪಡೆಯಲಾಗಿದ್ದು ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಇಟಲಿಯ ಅಧಿಕಾರಿಗಳು ಹೇಳಿದ್ದಾರೆ. ಕೊಕೇನ್‌ನ ಮೌಲ್ಯ ಸುಮಾರು ೬ ಸಾವಿರ ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ದಕ್ಷಿಣ ಅಮೆರಿಕಾದಿಂದ ಪ್ರಯಾಣ ಆರಂಭಿಸಿರುವ ಹಡಗು ಸಿಸಿಲಿ ಕಡಲ ತೀರ ಸಮೀಪಿಸುತ್ತಿರುವಂತೆಯೇ ಹಡಗಿನಿಂದ ಪ್ಯಾಕೆಟ್‌ಗಳನ್ನು ನೀರಿಗೆ ಎಸೆಯುತ್ತಿರುವ ಬಗ್ಗೆ ಕಣ್ಗಾವಲು ವಿಮಾನವು ಇಟಲಿ ಪೊಲೀಸರಿಗೆ ಮಾಹಿತಿ ನೀಡಿದೆ. ಅದರಂತೆ ಪೊಲೀಸರು ದೋಣಿಯಲ್ಲಿ ಆ ಸ್ಥಳದತ್ತ ಹೋದಾಗ ನೀರಿನಲ್ಲಿ ತೇಲುತ್ತಿದ್ದ ಪ್ಯಾಕೆಟ್‌ಗಳನ್ನು ಮೀನುಗಾರಿಕೆಯ ಟ್ರಾಲರ್ ಬೋಟ್ನವರು ಬಲೆ ಬಳಸಿ ಹಿಡಿಯುತ್ತಿದ್ದರು. ಈ ಪ್ಯಾಕೆಟ್‌ಗಳನ್ನು ಟ್ರಾಲರ್ ಬೋಟ್‌ನಲ್ಲಿದ್ದ ರಹಸ್ಯ ಕಂಪಾರ್ಟ್ಮೆಂಟ್‌ನಲ್ಲಿ ಇಡಲಾಗಿತ್ತು. ಇದರ ಒಟ್ಟು ಮೌಲ್ಯ ೯೪೬ ದಶಲಕ್ಷ ಡಾಲರ್‌ಗಳಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.