ಭಾರೀ ಬಿರುಗಾಳಿಗೆ ಮನೆಯ ಮೇಲ್ಛಾವಣಿ ಶೀಟ್‍ಗೆ ಹಾನಿ

ಕೃಷ್ಣರಾಜಪೇಟೆ: ಏ.22: ತಾಲೂಕಿನ ಕಸಬಾ ಹೋಬಳಿಯ ಬಿಬಿ ಕಾವಲು ಗ್ರಾಮದ ಹೊರವಲಯದ ತೋಟದಲ್ಲಿ ವಾಸವಾಗಿರುವ ಕುರ್ನೇನಹಳ್ಳಿ ಗ್ರಾಮದ ಪ್ರಗತಿಪರ ರೈತರಾದ ಕೃಷ್ಣೇಗೌಡ ಅವರ ತೋಟದ ಮನೆಯು ಭಾರೀ ಬಿರುಗಾಳಿಯ ರಭಸಕ್ಕೆ ಸಂಪೂರ್ಣವಾಗಿ ಹಾನಿಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಠ ಸಂಭವಿಸಿದೆ.
ನಿನ್ನೆ ರಾತ್ರಿ ಬೀಸಿದ ಗುಡುಗು, ಮಿಂಚು ಸಹಿತವಾದ ಭಾರೀ ಬಿರುಗಾಳಿಯ ರಭಸಕ್ಕೆ ಕೃಷ್ಣೇಗೌಡರು ವಾಸವಾಗಿದ್ದ ತೋಟದ ಮನೆಯ ಮೇಲ್ಛಾವಣಿ ಹಾಗೂ ಶೀಟ್‍ಗಳು ಹಾರಿಹೋಗಿ ಒಡೆದುಹೋಗಿದ್ದು ಲಕ್ಷಾಂತರ ರೂಪಾಯಿ ನಷ್ಠ ಸಂಭವಿಸಿದೆ. ಭಾರೀ ಬಿರುಗಾಳಿಯ ರಭಸ ಹಾಗೂ ಮನೆಯ ಮೇಲ್ಛಾವಣಿಯ ಶೀಟುಗಳು ಹಾರಿಹೋಗುತ್ತಿದ್ದ ಸದ್ದಿಗೆ ಮನೆಯೊಳಗೆ ಮಲಗಿದ್ದ ಕೃಷ್ಣೇಗೌಡರ ಪತ್ನಿ ಹಾಗೂ ತೋಟದ ಕೆಲಸಗಾರರು ಮನೆಯಿಂದ ಹೊರಬಂದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ.
ಭಾರೀ ಬಿರುಗಾಳಿಯ ರಭಸಕ್ಕೆ ತಮಗಾಗಿರುವ ನಷ್ಠದ ಬಗ್ಗೆ ಕೃಷ್ಣೇಗೌಡರು ತಾಲೂಕು ಕಛೇರಿಗೆ ಹಾಗೂ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ್ದು ತಮಗಾಗಿರುವ ನಷ್ಠವನ್ನು ಸರ್ಕಾರದ ವತಿಯಿಂದ ಭರಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.