ಭಾರೀ ಪ್ರಮಾಣದ ಮಾದಕ ವಸ್ತು ಸಾಗಾಟ: ಮೂವರ ಸೆರೆ 

ಕಾಸರಗೋಡು, ಸೆ.೧೨- ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಮೂವರನ್ನು ಬೇಕಲ ಡಿವೈಎಸ್ಪಿ ಸುನಿಲ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. 

ಕಳ್ನಾಡಿನ ಅರವಿಂದ ಮುರಳಿ (21), ಮಂಜೇಶ್ವರ ಕುಂಜತ್ತೂರಿನ ಅಬ್ದುಲ್ ಖಾದರ್ ಅಝೀಮ್ (32) ಮತ್ತು ಉಳಿಯತ್ತಡ್ಕದ ಮುಹಮ್ಮದ್ ಯಾಸಿನ್ ( 20 ) ಬಂಧಿತರು. ಇವರಿಂದ 50 ಗ್ರಾಂ ಗಾಂಜಾ, ಮಾದಕ ವಸ್ತು ಒಳಗೊಂಡ ಸ್ಟ್ಯಾಂಪ್ ಮೊದಲಾದವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಕಳ್ನಾಡ್‌‌ನಲ್ಲಿ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ.