ಭಾರೀ ಗಾಳಿ ಮತ್ತು ಮಳೆಯಿಂದ ಮೇಲ್ಛಾವಣಿ ಹಾರಿ ಹೆಣ್ಣು ಮಗು ಸಾವು

ಆಲಮೇಲ:ಎ.29:ಬಿರುಗಾಳಿ ಸಹಿತ ಮಳೆ ಪರಿಣಾಮ ಮನೆಯ ಮೇಲ್ಛಾವಣಿ ಹಾರಿ ಹೋದ ಪರಿಣಾಮ ಮನೆಯ ಜೋಳಿಗೆಯಲ್ಲಿದ್ದ ಹೆಣ್ಣು ಮಗು ಮೃತಪಟ್ಟ ಹೃದಯ ವಿದ್ರಾವಕ ಘಟನೆ ತಾಲ್ಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಬ್ದುಲರಹೆಮಾನ್ ಕಾಶೀಮಸಾಬ್ ಕಸಾಬ್ ಎಂಬುವರ 4 ತಿಂಗಳಿ ಮಗು ಮೃತಪಟ್ಟಿದೆ ಬಿರುಗಾಳಿಯ ರಭಸಕ್ಕೆ ಮನೆಯ ಮೇಲ್ಛಾವಣಿ ಹಾರಿ ಹೋಗಿ ಕಂಬಕ್ಕೆ ಕಟ್ಟಿದ ಜೋಳಿಗೆಯಲ್ಲಿದ್ದ ಮಗು ಮೃತಪಟ್ಟಿದೆ.

ವಿದ್ಯುತ್ ಕಂಬಕ್ಕೆ ಸಿಲುಕಿ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ ಏಪ್ರಿಲ್ 27 ರಂದು ಸಾಯಂಕಾಲ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಈ ದುರ್ಘಟನೆ ಸಂಭವಿಸಿದ್ದು ಮಗುವನ್ನು ಕಳೆದಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.