ಭಾರೀ ಗಾಳಿಗೆ ಬಿದ್ದ ಮರ : ಮೂರು ಕಾರು ಜಖಂ

ಮೈಸೂರು,ನ.18: ರಮಾವಿಲಾಸ ರಸ್ತೆಯಲ್ಲಿ ಭಾರೀ ಗಾಳಿಗೆ ದೊಡ್ಡ ಮರವೊಂದು ಬಿದ್ದ ಪರಿಣಾಮ ಅದರಡಿಯಲ್ಲಿದ್ದ ಮೂರು ಕಾರುಗಳು ಜಖಂಗೊಂಡ ಘಟನೆ ನಡೆದಿದೆ.
ಕಾರಿನ ಮೇಲೆ ಬಿದ್ದು ಮರಬಿದ್ದು 3 ಕಾರುಗಳ ಜಖಂಗೊಂಡಿದೆ. ಹಾಳಾಗಿರುವ ಮರಗಳನ್ನು ಈ ಕೂಡಲೇ ನಗರ ಪಾಲಿಕೆ ಅಧಿಕಾರಿಗಳು ಕೂಡಲೇ ತೆರವುಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇಂದು ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಸಿಬ್ಬಂದಿಗಳು ಬಿದ್ದ ಮರವನ್ನು ತೆರವುಗೊಳಿಸಿದರು.