ಭಾರಿ ಮಳೆ

ಅಣ್ಣಿಗೇರಿ,ಮೇ24 : ನಗರದಲ್ಲಿ ಧಾರಾಕಾರ ಮಳೆ ಸುರಿದಿದೆ ಬಿರುಗಾಳಿ ಸಮೇತ ಮಳೆಗೆ ಮರ ಧರೆಗ ಉರುಳಿವೆ ಗಾಳಿ ಸಹಿತ ಸಿಡಿಲು ಗುಡುಗು ಮಳೆಯಿಂದ ಸಾರ್ವಜನಿಕರ ಆಸ್ತಿಪಾಸ್ತಿ ಅಪಾರ ಹಾನಿ ಉಂಟಾಗಿದೆ
ಶ್ರೀ ಅಮೃತೇಶ್ವರನ ದೇವಸ್ಥಾನದ ಪಕ್ಕದಲ್ಲಿ ಇರುವ ಎತ್ತರವಾದ ತೆಂಗಿನ ಮರಕ್ಕೆ ಸಿಡಿಲು ಬಡಿದು ಹೊತ್ತಿ ಉರಿಯಿತು. ಸಾರ್ವಜನಿಕರು ಭಯಭೀತಗೊಂಡಿದ್ದು ಅಗ್ನಿ ಹೊತ್ತಿ ಉರಿಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿದೆ.
ಸೋಮವಾರ ಸಂಜೆ ಐದು ಗಂಟೆಗೆ ಶುರುವಾದ ಮಳೆ ಒಂದು ಗಂಟೆಗೂ ಅಧಿಕ ಕಾಲ ಸುರಿಯಿತು. ಪುರಸಭೆ ಸದಸ್ಯರಾದ ನಾಗಪ್ಪ ದಳವಾಯಿ ಹಾಗೂ ಇಮಾಮ ಸಾಬ ದರವಾನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.