ಭಾರಿ ಮಳೆ: ಮುತ್ತಗಾ ಗ್ರಾಮದ ಬ್ರಿಡ್ಜ್ ಕಮ್ ಬ್ಯಾರೇಜ್ ಮುಳುಗಡೆ

ಕಲಬುರಗಿ,ಜು.22:ಶಹಾಬಾದ ತಾಲೂಕಿನಲ್ಲಿ ಮೂರು ದಿನಗಳಿಂದ ಸುರಿದ ಮಳೆಯಿಂದ ಹಳ್ಳ-ಕೊಳ್ಳಗಳು, ಕೆರೆ-ಕಟ್ಟೆಗಳು, ಹೊಳೆ-ನದಿಗಳು ಉಕ್ಕಿ ಹರಿಯುತ್ತಿವೆ.
ಮುತ್ತಗಾ ಗ್ರಾಮದ ಬ್ರಿಡ್ಜ್ ಕಮ್ ಬ್ಯಾರೇಜ್ ಹಾಗೂ ಶಂಕರವಾಡಿ ಬ್ರಿಡ್ಜ್ ಕಮ್ ಬ್ಯಾರೇಜ್ ಮುಳುಗಿದ್ದರಿಂದ ಸಂಚಾರ ವ್ಯವಸ್ಥೆ ಬಹುತೇಖ ಕಡಿತಗೊಂಡಿತ್ತು.ಅಲ್ಲದೇ ನದಿ ಪತ್ರದ ಹೊಲಗಳಲ್ಲಿ ನೀರು ಆವರಿಸಿಕೊಂಡಿತ್ತು. ತಗ್ಗು ಪ್ರದೇಶಗಳ ಹೊಲಗಳಲ್ಲಿ ನೀರು ಹರಿದ ಪರಿಣಾಮ ಬೆಳೆಗಳಿಗೆ ಹಾನಿಯಾಗಿದೆ. ಅಲ್ಲದೇ ಮೇಲಿಂದ ಮೇಲೆ ಮಳೆಯಾದ ಪರಿಣಾಮ ತಾಲೂಕಿನಲ್ಲಿ ಬಹುತೇಖ ಬೆಳೆ ಹಾನಿಯುಂಟಾಗಿದೆ.ಈಗ ತಾನೇ ಮೊಳಕೆಯೊಡೆದು ಹತ್ತು ದಿನಗಳಾದ ಬೆಳೆಗಳು ಅತಿವೃಷ್ಟಿಯಿಂದ ರೈತನು ಬೆಳೆದ ಬೆಳೆ ಹಾಳಾಗುತ್ತಿರುವುದನ್ನು ಕಂಡು ಕಣ್ಣೀರು ಹಾಕುವಂತಾಗಿದೆ. ಗ್ರಾಮೀಣ ಭಾಗದ ಜನರು ಸೇತುವೆ ಮುಳುಗಿದ್ದನ್ನು ಮೊಬೈಲ್ ಕ್ಯಾಮರಾಗಳನ್ನು ಹಿಡಿದು ದೃಶ್ಯವನ್ನು ಸೆರೆ ಹಿಡಿಯಲು ಹಾಗೂ ನೋಡಲು ನಗರದ ನೂರಾರು ಜನರು ಕಿಕ್ಕಿರಿದು ನಿಂತಿರುವುದು ಕಂಡು ಬಂತು.