ಭಾರಿ ಮಳೆಗೆ ಮನೆ ಕುಸಿತ: ಅತಂಕದಲ್ಲಿ ಬಡ ರೈತ!

ಔರಾದ : ಜು.14:ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ತಾಲ್ಲೂಕಿನ ಕರಂಜಿ ಕೆ ಗ್ರಾಮದ ಬಡ ರೈತನ ಮನೆ ಕುಸಿದು ಬಿದ್ದ ಕಾರಣ ಬಡ ರೈತ ಆತಂಕಕ್ಕಿಡಾಗಿದ್ದಾನೆ.

ಕಳೆದ ಒಂದು ವಾರಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ, ಮಳೆ ಹೆಚ್ಚಾಗಿ ಒಂದು ಕಡೆ ಹೊಲದಲ್ಲಿ ನೀರು ನಿಂತು ಬೆಳೆ ಹಾಳು ಮತ್ತೋಂದು ಕಡೆ ಮನೆ ಉರುಳಿ ಮನೆಯಲ್ಲಿಯೂ ನೀರು ,ಇನ್ನೊಂದು ಕಡೆ ಸಾಲದ ಸುಳಿವು ಹೀಗೆ ಈ ರೈತನ ಪರಿಸ್ಥಿತಿ ದುಸ್ತರವಾಗಿದೆ.

ಹಲವಾರು ಬಾರಿ ಪಂಚಾಯಿತಿಯಲ್ಲಿ ಮನೆಗಾಗಿ ಅರ್ಜಿ ಸಲ್ಲಿಸಿದ್ದು ಇಲ್ಲಿಯ ವರೆಗೆ ಸರ್ಕಾರದಿಂದ ಒಂದೇ ಒಂದು ಮನೆ ಕೂಡ ನನ್ನಗೆ ಮಂಜೂರು ಅಗಿಲ್ಲ, ಸ್ವಂತ ಹಣದಲ್ಲಿ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿರುವಾಗ ಈ ಅಘಾತವಾಗಿರುವುದು ನಮ್ಮಗೆ ಸಂಕಷ್ಟಕ್ಕೆ ಸಿಲುಕಿಸಿದೆ, ಶಾಸಕರು ಅಧಿಕಾರಿಗಳು ನನ್ನ ಸಮಸ್ಯೆಯನ್ನು ಅರಿತು ಇವಾಗದ್ದರು ಸರ್ಕಾರದ ಜೊತೆ ಮಾತಾನಾಡಿ ನನಗೆ ಮನೆ ಕೊಡಿಸಬೇಕೆಂದು ಮಹಾದಪ್ಪ ಸಿದ್ರಾಮಪ್ಪ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.