ಭಾರಿ ಮಳೆಗೆ ಬೆಳೆಹಾನಿ

ಚಿಂಚೋಳಿ ಆ 5: ತಾಲೂಕಿನ ಪೆಂಚನಪಳ್ಳಿ ಗ್ರಾಮದಲ್ಲಿ ಗುರುವಾರ ಸುರಿದ ಭಾರಿ ಮಳೆಯಿಂದ ಗ್ರಾಮದ ಹೊಲಗಳಲ್ಲಿ ಮಳೆ ನೀರು ನುಗ್ಗಿ ರೈತರ ಬೆಳೆಯು ಸಂಪೂರ್ಣ ಹಾಳಾಗಿದೆ.
ರೈತರ ಹೊಲದ ಬದಲು ಒಡೆದು ಹೊಲದ ಮಣ್ಣು ಕೂಡ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದೆ. ಇದರಿಂದ ಪೆಂಚನಪಳ್ಳಿ ಗ್ರಾಮದ ರೈತರು ಸಂಕಷ್ಟಕೀಡಾಗಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ಪರಿಹಾರ ನೀಡಬೇಕೆಂದು ಪೆಂಚನಪಳ್ಳಿ ಗ್ರಾಮದ ರೈತರು ಮನವಿ ಮಾಡಿದ್ದಾರೆ