ಭಾರಿ ಮಳೆಗೆ ತುಂಬಿ ಹರಿದ ಹಳ್ಳ ಕೊಳ್ಳಗಳು, ಕಿತ್ತುಹೋದ ರಸ್ತೆಗಳು

oppo_0

ತಾಳಿಕೋಟೆ:ಜೂ.8: ಗುರುವಾರರಂದು ರಾತ್ರಿ ಸುರಿದ ಭಾರಿ ಮಳೆಗೆ ತಾಲೂಕಿನ ಬಹುತೇಕ ಎಲ್ಲ ಹಳ್ಳ ಕೊಳ್ಳಗಳು ತುಂಬಿ ಹರಿದಿದ್ದು ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಡೋಣಿ ನಧಿಯಲ್ಲಿ ಪ್ರವಾಹವು ಏರತೊಡಗಿದೆ. ಜಿಲ್ಲೆಯ ಅತೀ ಹೆಚ್ಚು ಮಳೆ ಸುರಿದ ಪ್ರದೇಶ ತಾಳಿಕೋಟೆ ತಾಲೂಕು ಆಗಿದ್ದು 119.04 ಮೀಲಿ ಮೀಟರ್ ಮಳೆಯಾಗಿರುವ ಬಗ್ಗೆ ಮಳೆ ಮಾಪನದಲ್ಲಿ ದಾಖಲಾಗಿದೆ.
ಮಳೆಯ ಅವಾಂತರದಿಂದ ಕೆಲವು ಮನೆಗಳ ಗೋಡೆಗಳು ಕುಸಿದು ಬಿದಿದ್ದು ಪಟ್ಟಣದ ಜಾನಕಿ ಹಳ್ಳ ತುಂಬಿ ಉಕ್ಕಿ ಹರಿದಿದ್ದರಿಂದ ರಾತ್ರಿ ಹೊತ್ತು ಸುಮಾರು 4 ಗಂಟೆಕಾಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಜಾನಕಿ ಹಳ್ಳದ ಪ್ರವಾಹದಿಂದ ಬಸ್ ಘಟಕದ ರಸ್ತೆಗೆ ಅಡ್ಡಲಾಗಿ ಹರಿಯುವ ಹಳ್ಳಕ್ಕೆ ಕಟ್ಟಲಾದ ಸೇತುವೆ ಸಂಪೂರ್ಣ ಜಲಾವೃತಗೊಳ್ಳುವದರೊಂದಿಗೆ ರಸ್ತೆ ಸಂಪರ್ಕ ಕಡಿತಗೊಂಡಿತು ಇದು ಅಲ್ಲದೇ ಇದೇ ಹಳ್ಳಕ್ಕೆ ಆಸ್ರಯ ಬಡಾವಣೆಗೆ ತೆರಳುವ ಎಸ್.ಕೆ.ಕಾಲೇಜ್ ಹಿಂಭಾಗದ ರಸ್ತೆಯಲ್ಲಿ ಅಡ್ಡಲಾಗಿ ಕಟ್ಟಲಾದ ಸೇತುವೆಯ ಮೇಲೆ ನೀರು ತುಂಬಿ ಬಂದಿದ್ದರಿಂದ ರಸ್ತೆಯಲ್ಲಿಯ ಡಾಂಬರ ಕಿತ್ತುಕೊಂಡು ಹೋಗಿ ತಗ್ಗು ದಿನ್ನಿಗಳು ಬಿದ್ದಿವೆ.
ಮತ್ತು ಹುಣಸಗಿ ರಸ್ತೆಗೆ ಅಡ್ಡಲಾಗಿ ಹರಿಯುವ ಮೈಲೇಶ್ವರ ಹಳ್ಳವು ಸಹ ಉಕ್ಕಿ ಹರಿದಿದ್ದು ಸದ್ಯ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಡೋಣಿ ನಧಿಯ ಪ್ರವಾಹವು ಕೂಡಾ ಏರುತ್ತಾ ಸಾಗಿದೆ ವಿಜಯಪುರ ರಸ್ತೆಯ ಡೋಣಿ ನಧಿಗೆ ಅಡ್ಡಲಾಗಿ ನಿರ್ಮಿಸಲಾದ ಮೇಲಸೇತುವೆ ದುರಸ್ಥಿಗೆ ಬಂದು ವರ್ಷ ಕಳೆದಿದೆ ಸದರಿ ಸೇತುವೆಯ ಮೇಲೆ ವಾಹನ ಸಂಚಾರ ಜನ ಸಂಚಾರ ಸಂಪೂರ್ಣ ನಿಷೇದಿಸಲಾಗಿದೆ ಹೀಗಾಗಿ ಅದರ ಪಕ್ಕದಲ್ಲಿಯ ಕೆಳಮಟ್ಟದ ಸೇತುವೆಯ ಮೇಲೆ ವಾಹನಗಳು ಮತ್ತು ಜನ ಸಂಚಾರ ನಡೆಯುತ್ತಿದ್ದು ನಧಿಯ ಪ್ರವಾಹ ಹೆಚ್ಚಿಗೆ ಬಂದರೆ ಸೇತುವೆಯು ಸಂಪೂರ್ಣ ಜಲಾವೃತವಾಗಲಿದ್ದು ಇದರಿಂದ ಈ ರಸ್ತೆಯೂ ಕೂಡಾ ಸಂಪೂರ್ಣ ಬಂದ್ ಆಗುವ ಲಕ್ಷಣಗಳು ಗೋಚರಿಸುತ್ತಿವೆ.
ಸುರಿದ ಭಾರಿ ಮಳೆಯಿಂದ ಪಟ್ಟಣದ ಮತ್ತು ಕೆಲವು ಗ್ರಾಮೀಣ ಪ್ರದೇಶದ ಮನೆಗಳ ಗೋಡೆಗಳು ಕುಸಿದು ಬಿದ್ದ ವರದಿಯಾಗಿದ್ದು ಪಟ್ಟಣದ ಪುರಾತನ ಭಾವಿ ಭೀಮನ ಭಾವಿಯ ಎರಡು ಗೋಡೆಗಳು ಕುಸಿದು ಬಿದ್ದಿವೆ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮಳೆಯಾದ ಬಗ್ಗೆ ವರಧಿಯಾಗಿದ್ದು 119.04 ಮೀಲಿ ಮೀಟರ್ ಮಳೆ ಸುರಿದಿರುವದು ತಾಳಿಕೋಟೆ ತಾಲೂಕಿನಲ್ಲಿಯಾಗಿದ್ದು ಮಳೆಯಿಂದ ರೈತರಿಗೆ ಸಂತಸ ಪಡುತ್ತಿದ್ದರೆ ಇನ್ನು ಕೆಲವು ರೈತರ ಜಮೀನುಗಳಲ್ಲಿ ಹಾಕಲಾದ ಒಡ್ಡು ವರೆಗಳು ಒಡೆದು ಹೋಗಿವೆ ಇನ್ನೂ ನೀರಾವರಿಗೆ ಸಂಬಂದಿಸಿದ ತೋಟಗಳಲ್ಲಿಯ ಲಿಂಬೆ ಗಿಡ, ಕಬ್ಬು, ಅಲ್ಲದೇ ಇನ್ನಿತರ ಬೆಳೆಗಳು ನೆಲಕ್ಕೆ ಕಚ್ಚಿ ಬಿದ್ದಿದ್ದು ಇದರಿಂದ ಒಂದೆಡೆ ಸಂತಸ ವಿದ್ದರೆ ಇನ್ನೊಂದೆಡೆ ಚಿಂತೆಗೀಡುಮಾಡುವಂತೆ ಮಾಡಿದೆ.
ಗುಡುಗು ಸಿಡಿಲು ಅಬ್ಬರದೊಂದಿಗೆ ರಾತ್ರಿ 11 ಗಂಟೆಗೆ ಪ್ರಾರಂಭಗೊಂಡ ಮಳೆಯು ರಾತ್ರಿ 3 ಗಂಟೆಯವರೆಗೆ ಸುರಿಯುತ್ತಿತ್ತು ಮಳೆಯಿಂದ ಗಡಿಸೋಮನಾಳ ಗ್ರಾಮದ ರೈತರಾದ ಮಡುಸಾಹುಕಾರ ಬಿರಾದಾರ ಎಂಬವರ 200 ಲಿಂಬೆ ಗಿಡಗಳು ನೆಲಕ್ಕೆ ಮುರಿದು ಬಿದ್ದು ಹಾನಿ ಸಂಬವಿಸಿದೆ. ಇನ್ನೂ ವಿರೇಶ ಕಂಗಳ ಎಂಬ ರೈತರು ಮೊನ್ನೆ ಸುರಿದ ಅಲ್ಪ ಮಳೆಯಿಂದ ಜಮೀನಿನಲ್ಲಿ ಹತ್ತಿ ಬೀಜಗಳನ್ನು ಬಿತ್ತಿದ್ದರು ಗುರುವಾರ ಸುರಿದ ಮಳೆಗೆ ಬೀಜ ಸಮೇತವಾಗಿ ಮಣ್ಣು ಸಹ ಕೊಚ್ಚಿಕೊಂಡು ಹೋದ ಬಗ್ಗೆ ವರಧಿಯಾಗಿದೆ.