ಭಾರಿ ಮಳೆಗಾಳಿಗೆ ನೆಲಕ್ಕೆ ಉರುಳಿದ ಮರ ಹಾರಾಡಿದ ಪತ್ರಾಸುಗಳು

ತಾಳಿಕೋಟೆ:ಜೂ.5: ಪಟ್ಟಣದಲ್ಲಿ ರವಿವಾರರಂದು ಸಾಯಂಕಾಲ 5 ಗಂಟೆಯಿಂದ ಪ್ರಾರಂಭಗೊಂಡ ಸಿಡಿಲು ಮಿಂಚಿನ ಅಬ್ಬರದೊಂದಿಗೆ ಬಂದ ಭಾರಿ ಮಳೆ ಗಾಳಿಗೆ ಬಸ್ಟಾಂಡ್ ಪಕ್ಕದಲ್ಲಿರುವ ಶಂಕೇಶ್ವರ ಭಾರಿ ಗಾತ್ರದ ಗಿಡವೊಂದು ಬಿದ್ದಿದ್ದು ಭಾರಿ ಅನಾಹುತ ತಪ್ಪಿದಂತಾಗಿದೆ.

ಸುಮಾರು 5 ಗಂಟೆ 15 ನಿಮಿಷಕ್ಕೆ ಸಂಪೂರ್ಣ ನೆಲದಿಂದ ಬೇರು ಸಮೇತ ಉರುಳಿದ ಮರವು ಬಸ್ಟಾಂಡ್ ಕಂಪೌಂಡ ವಾಲ್ ಮಗ್ಗಲು ನಿಂತಿರುವ ಸಾರಿಗೆ ಸಂಸ್ಥೆಯ ಬಸ್ಸಿಗೆ ಯಾವುದೇ ಅನಾಹುತವಾಗಿಲ್ಲಾ ಯಾಕೆಂದರೆ ಆ ಬಸ್ಸಿನಲ್ಲಿದ್ದ ಚಾಲಕ ಕೂಡಲೇ ಬಸ್ಸನ್ನು ಹಿಂದಕ್ಕೆ ನಿಲ್ಲಿಸಿದ್ದರಿಂದ ಗಿಡದ ಕೊಲ್ಲೆಗಳು ಸಹ ತಾಕದೇ ಬಸ್ಸಿಗೂ ಹಾಗೂ ಆ ಭಾಗದಲ್ಲಿ ದಿನನಿತ್ಯ ಕುಳಿತುಕೊಳ್ಳುವಂತಹ ಜನರಿಗೆ ಯಾವ ತೊಂದರೆಯಾಗಿಲ್ಲವೆಂಬುದು ಅಲ್ಲಿಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಗುಡುಗು ಸಿಡಿಲು ಮಿಶ್ರೀತದಿಂದ ಆಗಮಿಸಿದ ಮಳೆ ಗಾಳಿಯು ಸುಮಾರು 50 ಕೀಲೋ ಮೀಟರ್ ಮೇಲ್ಪಟ್ಟು ಸಾಗಿತ್ತೆಂಬುದು ಹೇಳಲಾಗುತ್ತಿದೆ ಈ ಗಾಳಿ ಮಳೆಯಿಂದ ಬಸ್ಟಾಂಡ್ ಪಕ್ಕದಲ್ಲಿರುವ ಕೆಲವು ಅಂಗಡಿ ಮುಗ್ಗಟ್ಟುಗಳ ಮೇಲೆ ಹಾಕಿರುವ ಪತ್ರಾಸುಗಳು ಮತ್ತು ಕೆಲವು ಮನೆಗಳ ಮೇಲೆ ಹಾಕಲಾಗಿದ್ದ ತಗಡಿನ ಪತ್ರಾಸುಗಳು ಸಹ ಹಾರಿಹೋಗಿದ್ದು ಇದರಿಂದ ಯಾವುದೇ ಹಾನಿಯಾದ ಬಗ್ಗೆ ವರಧಿಯಾಗಿಲ್ಲಾ.

ಇದು ಅಲ್ಲದೇ ಪಟ್ಟಣದ ಭಾವನಮಠದ ಹತ್ತಿರದ ಕಾಶಿರಾಯ ಮೋಹಿತೆ ಎಂಬವರ ರೈತರ ಕುಟುಂಬಕ್ಕೆ ಸೇರಿದ ಎತ್ತಿನ ಕೊಟಿಗೆಯ ಮೇಲೆ ತಗಡಿನ ಶೆಡ್ಡು ಉರುಳಿ ಬಿದ್ದಿದ್ದರಿಂದ ಕೆಳಗೆ ಕಟ್ಟಿದ್ದ ಎರಡು ಎತ್ತುಗಳು ಗಾಯವಾಗಿದ್ದು ಶೆಡ್ಡಿನಲ್ಲಿಟ್ಟಿದ್ದ ಸುಮಾರು 25 ಸಾವಿರಕ್ಕೂ ಮೇಲ್ಪಟ್ಟು ಕಣಿಕೆ, ಹೊಟ್ಟು ಹಾಳಾಗಿದ್ದಲ್ಲದೇ ಬಿತ್ತನೆಗೆ ಸಂಬಂದಿಸಿ ಸಲಕರಣೆಗಳಾದ ಕುರಿಗೆ ಕುಂಟೆ, ರಾಗೋಲು, ಒಳಗೊಂಡು ಸಾಮಾನುಗಳು ತಗಡು ಹಾಗೂ ಯಂಗಲುಗಳು ಮೇಲೆ ಬಿದ್ದಿರಿಂದ ಮುರಿದು ಹೋಗಿವೆ ಎಂದು ಪ್ರಗತಿಪರ ರೈತರಾದ ಕಾಶಿರಾಯ ಮೋಹಿತೆ ಅವರು ಪತ್ರಿಕೆಗೆ ತಿಳಿಸಿದ್ದಾರೆ.