ಭಾರಮ್ಮ ಭಾಗೀರಥಿ ನಾಟಕ ಪ್ರದರ್ಶನ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜು,26- ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ತಾಲೂಕಿನ ಹೊಸಯರಗುಡಿ ಅಕ್ಷಯ ಕಲಾ ಟ್ರಸ್ಟ್ ನಿಂದ ಸ್ವಾತಂತ್ರ್ಯದ  ಅಮೃತ ಮಹೋತ್ಸವದ ಅಂಗವಾಗಿ ಸುಗಮ ಸಂಗೀತ ಮತ್ತು ನಾಟಕ ಪ್ರದರ್ಶನವನ್ನು   ಮೊರಾರ್ಜಿ ವಸತಿ ಶಾಲೆಯಲ್ಲಿ (ಅಂಬೇಡ್ಕರ್ ವಸತಿ ಶಾಲೆ) ಶಾಲಾ ಆವರಣದಲ್ಲಿ ನಡೆಸಲಾಯಿತು.
ರಂಗಕರ್ಮಿ ನೇತಿ ರಘುರಾಮ್  ಕಾರ್ಯಕ್ರಮ ಉದ್ಘಾಟನೆ ಮಾಡಿ,  ಇಂದಿನ  ಯುವಪೀಳಿಗೆಗೆ ನಶಿಸಿಹೋಗುವ ಕಲೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಅಕ್ಷಯ ಕಲಾ ಟ್ರಸ್ಟ್ ನ ಅಧ್ಯಕ್ಷ ಹೆಚ್.ಜಿ.ಸುಂಕಪ್ಪ ಅಧ್ಯಕ್ಷತೆವಹಿಸಿ,   ಕಲೆ ಸಾಹಿತ್ಯ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಇಲಾಖೆಯವರು ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬೇಕೆಂದರು.
ಕಲಾವಿದರಾದ ಬಿ.ಆನಂದ, ಕಲ್ಲುಕಂಭ ಮತ್ತು ತಂಡದವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.  ಹುಲುಗಪ್ಪ.ಎಸ್.ಎಂ ಮತ್ತು ತಂಡದವರು ಬಾರಮ್ಮ ಭಾಗೀರಥಿ ನಾಟಕವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಕಲಾವಿದರಾದ ಹನುಮಯ್ಯ, ವೀರೇಶ ದಳವಾಯಿ, ಹುಸೇನಪ್ಪ, ಉಷಾ, ಹೆಚ್.ರಮೇಶ, ಎಲ್.ಕೊಟ್ರೇಶ್, ಹೇಮಂತ್, ಹೆಚ್.ಗಂಗಮ್ಮ, ಮೀರಾಬಾಯಿ, ನವೀನ್, ಸುರೇಶ, ವಿಜಯ್ ಇನ್ನು ಮುಂತಾದ ಕಲಾವಿದರು ಭಾಗವಹಿಸಿದ್ದರು.

Attachments area