ಭಾರತ ಸ್ಟೇಜ್-4 ವಾಹನಗಳ ನೋಂದಣಿಗೆ ಜ. 16ರವರೆಗೆ ಕಾಲಾವಕಾಶ

ಕಲಬುರಗಿ.ಜ.9:ಭಾರತ ಸ್ಟೇಜ್-4 ವಾಹನಗಳು ಇ-ಪೋರ್ಟಲ್‍ನಲ್ಲಿ ನಮೂದಿತವಾಗಿ 2020ರ ಮಾರ್ಚ್ 31 ರೊಳಗಾಗಿ ತಾತ್ಕಾಲಿಕವಾಗಿ ನೋಂದಣಿ ಪಡೆದಿರುವ ವಾಹನಗಳು 2021ರ ಜನವರಿ 16 ರೊಳಗಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶವಿರುತ್ತದೆ. ಕಲಬುರಗಿ ಜಿಲ್ಲೆಯ ಸಾರ್ವಜನಿಕರು ಹಾಗೂ ವಾಹನ ಅಧೀಕೃತ ಮಾರಾಟಗಾರರು ಭಾರತ್ ಸ್ಟೇಜ್-4 ವಾಹನಗಳನ್ನು ನೋಂದಣಿ ಮಾಡಿಕೊಂಡು ಇದರ ಸದುಪಯೋಗ ಪಡೆಯಬೇಕೆಂದು ಕಲಬುರಗಿ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಉಪ ಸಾರಿಗೆ ಉಪ ಆಯುಕ್ತರು ತಿಳಿಸಿದ್ದಾರೆ.