ಭಾರತ ಸ್ಕೌಟ್ಸ್ ಗೇಟ್ಸ್ ನಿಂದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ಯಶಸ್ವಿ

ಕಲಬುರಗಿ:ಸೆ.12: ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಲಬುರ್ಗಿ ದಕ್ಷಿಣ ವಲಯ ಭಾರತ ಸ್ಕೌಟ್ಸ್ ಮತ್ತು ಕರ್ನಾಟಕ ಹಾಗೂ ವಿವೇಕಾನಂದ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ನಾಡೋಜ ಡಾ. ಗೋ .ರು .ಚನ್ನಬಸಪ್ಪನವರ ಜನ್ಮ ಶತಾಬ್ದಿಯ ನಿಮಿತ್ಯ ತಾಲೂಕು ಮಟ್ಟದ ದೇಶಭಕ್ತಿ ಗೀತ ಗಾಯನ ಸ್ಪರ್ಧೆ ದಿನಾಂಕ 11 /9/ 2023 ರಂದು ವಿವೇಕಾನಂದ ವಿಧ್ಯಾ ನಿಕೇತನ ಶಾಲೆಯ ಆವರಣ ಕಲಬುರ್ಗಿ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಶಿವಮೂರ್ತಪ್ಪ ಉದ್ಬಾಳ್ ರವರು ಆಗಮಿಸಿದ್ದರು ಅಧ್ಯಕ್ಷತೆಯನ್ನು ಸಿದ್ದಪ್ಪ ಭಗವತಿ ಪ್ರಾಚಾರ್ಯರು ವಿವೇಕಾನಂದ ವಿದ್ಯಾನಿಕೇತನ ಸಂಸ್ಥೆ ಕಲಬುರ್ಗಿ ಇವರು ವಹಿಸಿಕೊಂಡಿದ್ದರು
ಮುಖ್ಯ ಅತಿಥಿಗಳಾಗಿ ಎಸ್. ಪಿ. ಸುಳ್ಳದ ಜಿಲ್ಲಾ ಆಯುಕ್ತರು ಸ್ಕೌಟ್ ಮತ್ತು ಶ್ರೀಮತಿ ಸುವರ್ಣ ಭಗವತಿ ಅಧ್ಯಕ್ಷರು ವಿವೇಕಾನಂದ ವಿದ್ಯಾನಿಕೇತನ ಸಂಸ್ಥೆ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲಾ ಆಯುಕ್ತರು ಸ್ಕೌಟ್ ರಾಜೇಂದ್ರ ಇವರು ಆಗಮಿಸಿದ್ದರು.
ಹಾಗೂ ಗೀತ ಗಾಯನದ ತೀರ್ಪುಗಾರರಾಗಿ
ಶ್ರೀ ಬಾಬುರಾವ್ ಕೋಬಾಳ ರಾಜ್ಯೋತ್ಸವ ಪ್ರಶಸ್ತಿ ವಿಜೇತರು . ಮತ್ತು ಸಿದ್ಧಾರ್ಥ ಚಿಮ್ಮಇದ್ ಲಾಯಿ, ಜಯತೀರ್ಥ ಆದ್ಯ . ಆಗಮಿಸಿದ್ದರು
ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಅಮರೇಶ ಕೋರಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳು ಮಾತನಾಡುತ್ತಾ ಇಂದಿನ ಮಕ್ಕಳು ಇಂದಿನ ನಾಯಕರು ಮಕ್ಕಳಲ್ಲಿರುವ ದೇಶಭಕ್ತಿ, ದೇಶಪ್ರೇಮ ಮಕ್ಕಳಲ್ಲಿರುವ ಕೌಶಲ್ಯ ಗುರುತಿಸಲು ಇಂಥ ವೇದಿಕೆಗಳು ಬೇಕು ಅದಕ್ಕಾಗಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಮಕ್ಕಳಿಗಾಗಿ ಇಂಥ ವೇದಿಕೆಗಳನ್ನು ಕಲ್ಪಿಸಿಕೊಡುತ್ತಿದೆ ಎಂದು ತಿಳಿಸಿದರು ಉದ್ಘಾಟಕರಾಗಿ ಶಿವಮೂರ್ತಪ್ಪ ಇಸಿಓ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರ ಮಾತನಾಡುತ್ತಾ ಸ್ಕೌಟ್ ಮತ್ತು ಗೈಡ್ಸ್ ಮಕ್ಕಳಲ್ಲಿ ಶಿಸ್ತು ದೇಶಭಕ್ತಿ ದೇಶಪ್ರೇಮ ಮಕ್ಕಳಿಗೆ ಜೀವನ ಕೌಶಲ್ಯ ಕಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಎಸ್. ಪಿ ಸುಳ್ಳದ್ ರವರು ಮಾತನಾಡುತ್ತಾ. ಭಾರತ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕದಲ್ಲಿ ಮಕ್ಕಳಲ್ಲಿ ಮೌಲ್ಯ ಶಿಕ್ಷಣ ಶಿಸ್ತು ಮತ್ತು ಸಮಯಪ್ರಜ್ಞೆಯನ್ನು ಮೂಡಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ ಇಂದು ಮಕ್ಕಳು ಗೀತ ಗಾಯನದಲ್ಲಿ ಭಾಗವಹಿಸಿ ನಮ್ಮ ಜಿಲ್ಲೆಗೆ ಕೀರ್ತಿ ತರಲೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿವೇಕಾನಂದ ವಿದ್ಯಾನಿಕೇತನದ ಪ್ರಾಚಾರ್ಯರಾದ ಶ್ರೀ ಸಿದ್ದಪ್ಪ ಭಗವತಿಯವರು ನಮ್ಮ ಶಾಲೆಯಲ್ಲಿ ಕೂಡ ಸ್ಕೌಟ್ ಮತ್ತು ಗೈಡ್ಸ್ ಘಟಕ ಇದೆ ಇದರಿಂದ ಮಕ್ಕಳಲ್ಲಿ ಶಿಸ್ತು ದೇಶಭಕ್ತಿ ದೇಶಪ್ರೇಮ ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಸಿದರು. ಮತ್ತು ಮಕ್ಕಳು ಒಳ್ಳೆಯ ನಾಯಕರ ಜೀವನ ಚರಿತ್ರೆಯನ್ನು ಓದುವುದರ ಮೂಲಕ ಮುಂದಿನ ದಿನಗಳಲ್ಲಿ ಒಳ್ಳೆಯ ಪ್ರಜೆಗಳಾಗಲು ತಿಳಿಸಿದರು. ಸ್ವಾಗತವನ್ನು ಶ್ರೀಮತಿ ಸೀಮಾ ಭಟ್ ಗೈಡ್ ಶಿಕ್ಷಕರು ಏನ್ ವಿ ಶಿಕ್ಷಣ ಸಂಸ್ಥೆ ಇವರು ಕೋರಿದರು
ವಂದನಾರ್ಪಣೆಯನ್ನು ಶ್ರೀಮತಿ ಪ್ರಭಾವತಿ ಗೈಡ್ ಶಿಕ್ಷಕಿ ಚಂದ್ರಕಾಂತ್ ಪಾಟೀಲ್ ಆಂಗ್ಲ ಮಾಧ್ಯಮಿ ಶಾಲೆ ಇವರು ನೆರವೇರಿಸಿಕೊಟ್ಟರು.
ನಿರೂಪಣೆಯನ್ನು ಅಮರೇಶ್ ಕೋರಿ ಇವರು ಮಾಡಿದರು.ಈ ಕಾರ್ಯಕ್ರಮದಲ್ಲಿ ಕಬ್ಬ ಮತ್ತು ಬುಲ್ ಬುಲ್. ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ಸ್ ಮತ್ತು ರೇಂಜರ್ಸ್ ಮತ್ತು ಶಿಕ್ಷಕರು ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಸುಮಾರು 150 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಗೀತ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಶಾಲೆಗಳು


ಬುಲ್ ಬುಲ್ ವಿಭಾಗದಲ್ಲಿ

ಸಂತ ಜಾನ್ ಆಂಗ್ಲ ಮಾಧ್ಯಮ ಶಾಲೆ ಪ್ರಥಮ

ಗೈಡ್ ವಿಭಾಗದಲ್ಲಿ

ಸೇನ್ ಜೋಸೆಫ್ ಗಲ್ರ್ಸ್ ಹೈ ಸ್ಕೂಲ್ ಪ್ರಥಮ
ಸೇಂಟ್ ಜೋಸೆಫ್ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ
ವಿವೇಕಾನಂದ ವಿದ್ಯಾಚೇತನ ಶಾಲೆ ತೃತೀಯ

ಸ್ಕೌಟ್ ವಿಭಾಗದಲ್ಲಿ

ಅಪ್ಪ ಪಬ್ಲಿಕ್ ಶಾಲೆ, ಪ್ರಥಮ ಸ್ಥಾನ
ಕೇನ್ ಬ್ರಿಡ್ಜ್ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಸ್ಥಾನ

ರೋವರ್ಸ್ ಮತ್ತು ರೇಂಜರ್ಸ್ ವಿಭಾಗದಲ್ಲಿ

ಸರಕಾರಿ ಮಹಾವಿದ್ಯಾಲಯ ಆಟೋನಮಸ್ ಪ್ರಥಮ

ರೇಂಜರ್ ವಿಭಾಗದಲ್ಲಿ

ಸರಕಾರಿ ಮಹಿಳಾ ಮಹಾವಿದ್ಯಾಲಯ ಜೇವರ್ಗಿ ಕಾಲೋನಿ ಪ್ರಥಮ.

ಮತ್ತು ಶಿಕ್ಷಕರ ಗೀತ ಗಾಯನ ಸ್ಪರ್ಧೆಯಲ್ಲಿ
ಪ್ರಥಮ ಸ್ಥಾನ ಸುಮಾ ಭಗವತಿ ವಿವೇಕಾನಂದ ಶಾಲೆ
ರಾಜಕುಮಾರಿ ಶಿಕ್ಷಕರು ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ
ಪ್ರತಿಭಾ ಚಂದ್ರಕಾಂತ್ ಪಾಟೀಲ್ ಶಾಲೆ ತೃತೀಯ.

ವಿಜೇತರಾದ ಎಲ್ಲ ಮಕ್ಕಳಿಗೆ
ಪ್ರಶಸ್ತಿ ಪತ್ರ ಮತ್ತು ಪಾರಿತೋಷಕ ನೀಡಿ ಗೌರವಿಸಲಾಯಿತು.