ಭಾರತ ಸೇವಾದಳ ಶಾಖಾ ಉದ್ಘಾಟನೆ

ಕಲಬುರಗಿ,ಸೆ.26-ತಾಲ್ಲೂಕಿನ ಹಡಗಿಲ್ ಹಾರುತಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ, ಶಾಲಾ ಶಿಕ್ಷಣ ಇಲಾಖೆ ಮತ್ತು ಭಾರತ ಸೇವಾದಳ ತಾಲೂಕ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯ9ಲಯ ದಕ್ಷಿಣ ವಲಯದ ಸಂಯುಕ್ತಾಶ್ರಯದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಭಾರತ ಸೇವಾದಳ ಶಾಖಾ ಉದ್ಘಾಟನೆಯನ್ನು ಭಾರತ ಸೇವಾ ದಳದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಬಡಿಗೇರ್ ನೆರವೇರಿಸಿದರು.
ಭಾರತ ಸೇವಾದಳ ಜಿಲ್ಲಾ ಸಮಿತಿ ರಾಜ್ಯ ಸದಸ್ಯ ಲಕ್ಷ್ಮೀಕಾಂತ, ಜಿಲ್ಲಾ ಸಂಘಟಕ ಚಂದ್ರಶೇಖರ ಜಮಾದಾರ, ತಾಲ್ಲೂಕ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಕಟ್ಟಿಮನಿ, ಕಾರ್ಯದರ್ಶಿ ಗುರಲಿಂಗಯ್ಯ ವಿಶ್ವನಾಥಮಠ, ತಾತ್ಕಾಲಿಕ ಜಿಲ್ಲಾ ಸಂಘಟಕ ಶ್ರೀನಿವಾಸ್, ಮಾಧ್ಯಮಿಕ ತರಬೇತಿದಾರರಾದ ಕು,ಮಾಣಿಕಮ್ಮ, ಶ್ರೀದೇವಿ ರಾಜಶೇಖರ್ ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿದರು.
ಪ್ರಭಾರಿ ಮುಖ್ಯೋಪಾಧ್ಯಾಯ ಚನ್ನಬಸಪ್ಪ ಬಿರಾದಾರ, ದೈಹಿಕ ಶಿಕ್ಷಕಿ ಶ್ರೀದೇವಿ ಕಟ್ಟಿಮನಿ, ಎಸ್‍ಡಿಎಂಸಿ ಅಧ್ಯಕ್ಷ ಇಕ್ಬಾಲ ಪಟೇಲ್, ಸದಸ್ಯರಾದ ನೀಲಪ್ಪ ಕಂಠೆಪ್ಪ, ಮಹೇಶ್ ಗೌಡ ಪಾಟೀಲ, ಅಂಬಾರಾಯ ಪಾಟೀಲ, ಧಮ9ರಾಯ ಮಳ್ಳಿ, ಹಡಗಿಲ ಹಾರೂತಿ ಗ್ರಾಮದ ಹಿರಿಯ ಮುಖಂಡರು ಹಾಗೂ ಸದರಿ ಶಾಲೆಯ ಶಿಕ್ಷಕ ಶಿಕ್ಷಕಿಯರು ಇನ್ನಿತರು ಉಪಸ್ಥಿತರಿದ್ದರು.