
ಸಂಜೆವಾಣಿ ವಾರ್ತೆದಾವಣಗೆರೆ.ಆ.೧೬; ಭಾರತ ಸೇವಾದಳ ಜಿಲ್ಲಾ ಕಾರ್ಯಾಲಯದಲ್ಲಿ ೭೭ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾ ಅಧ್ಯಕ್ಷ ಪ್ರೊ ಚನ್ನಪ್ಪ ಎಚ್ ಪಲ್ಲಾಗಟ್ಟೆ ರಾಷ್ಟ್ರ ಧ್ವಜಾರೋಹಣ ಮಾಡಿ ಶುಭ ಹಾರೈಸಿದರು. ಜಿಲ್ಲಾ ಸಮಿತಿ ಸದಸ್ಯ ಸಿದ್ದಲಿಂಗಪ್ಪ, ವಲಯ ಸಂಘಟಕ ಅಣ್ಣಪ್ಪ ಎಂ, ತಾಲೂಕು ಸಮಿತಿ ಉಪಾಧ್ಯಕ್ಷ ಕೆ. ಆರ್. ಸಿದ್ದೇಶ್, ಕೋಶಧ್ಯಕ್ಷ ಎಸ್. ಎನ್. ರಮೇಶ್, ಸದಸ್ಯರಾದ ಬಿ. ಪಿ. ಪ್ರಸಾದ್ ಭಾಗವಹಿಸಿದ್ದರು.