ಭಾರತ ಸೇವಾದಳ ಆವರಣದಲ್ಲಿ ರಾಮನವಮಿ ಆಚರಣೆ

ದಾವಣಗೆರೆ ಮಾ.31; ಶ್ರೀ ರಾಮನವಮಿ ಅಂಗವಾಗಿ   ದಾವಣಗೆರೆಯ ಭಾರತ ಸೇವಾದಳ ಸಾಂಸ್ಕೃತಿಕ ಭವನದ ಆವರಣದಲ್ಲಿ, ಭಾರತ ಸೇವಾದಳ, ಎ ಕೆ ಫೌಂಡೇಶನ್, ಕರುನಾಡು ಕನ್ನಡ ಸೇನೆ, ಫ್ಲೈಯಿಂಗ್ ಬರ್ಡ್ಸ್ ಡಾನ್ಸ್ ಸ್ಕೂಲ್ ರವರ ಸಹಯೋಗದಲ್ಲಿ  ಶ್ರೀ ರಾಮನವಮಿಯನ್ನು ಆಚರಿಸಲಾಯಿತು. ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷರಾದ ಪ್ರೊ. ಹೆಚ್. ಚನ್ನಪ್ಪ  ಪಲ್ಲಾಗಟ್ಟೆ ಮತ್ತು ಎ .ಕೆ ಫೌಂಡೇಶನ್ ಅಧ್ಯಕ್ಷರಾದ ಕೆ. ಬಿ. ಕೊಟ್ರೇಶ್ ರವರು ಹಾಗೂ  ಕರುನಾಡ ಕನ್ನಡ ಸೇನೆ ಅಧ್ಯಕ್ಷರಾದ ಗೋಪಾಲ ಗೌಡ್ರು,  ಜೈ ಭಾರತ್ ಟ್ರಸ್ಟ್ ಅಧ್ಯಕ್ಷರಾದ ಶೈಲಜಾ ಪರಶುರಾಮ್ ಕಟವ್ಕಾರ್ ರವರು ಶ್ರೀ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.  ನಂತರ ಸಾರ್ವಜನಿಕರಿಗೆ  ರಾಮ ನವಮಿಯ ವಿಶೇಷ  ಪಾನಕ ಮತ್ತು ಕೋಸಂಬರಿಯನ್ನು ವಿತರಿಸಲಾಯಿತು.  ಕಾರ್ಯಕ್ರಮದಲ್ಲಿ ತಾಲೂಕು ಸೇವಾದಳ ಅಧ್ಯಕ್ಷರಾದ ಹಾಸಭಾವಿ ಕರಿಬಸಪ್ಪ,  ಜಿಲ್ಲಾ ಸಮಿತಿ ಸದಸ್ಯರಾದ ಕುಸುಮ ಶ್ರೇಷ್ಠಿ,  ರಮಣ ಸಾಂಗ್ವಿ,  ಕೆ ಟಿ ಜಯಪ್ಪ, ಕೆ ಬಿ ಪರಮೇಶ್ವರಪ್ಪ, ನಿವೃತ್ತ ಪ್ರಾಚಾರ್ಯರ ಪರಶುರಾಮ್ ಕಟವ್ಕಾರ್ ಉಪಸ್ಥಿತರಿದ್ದರು. ಸೇವಾದಳ ವಲಯ ಸಂಘಟಕರಾದ ಅಣ್ಣಪ್ಪ ಸ್ವಾಗತಿಸಿದರು. ಕನಸು ಮಂಜು ನಿರೂಪಿಸಿದರು, ಫ್ಲೈಯಿಂಗ್ ಬರ್ಡ್ಸ್ ಸ್ಥಾಪಕ ಕೆ. ಪಿ. ಶ್ರೀಕಾಂತ್ ವಂದಿಸಿದರು.