ಗಡಿ ಅತಿಕ್ರಮಣಕ್ಕೆ ಯತ್ನ: ಚೀನಾ ವಿರುದ್ಧ ಭಾಗವತ್ ವಾಗ್ದಾಳಿ

ನವದೆಹಲಿ, ಅ 25- ಮಾರಕ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭ ದಲ್ಲಿ ದೇಶದ ಗಡಿಯನ್ನು ಅತಿಕ್ರಮಣ ಮಾಡಲು ಪ್ರಯತ್ನಿಸಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಚೀನಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದಸರಾ ಹಬ್ಬದ ಪ್ರಯುಕ್ತ ವಾರ್ಷಿಕ ಭಾಷಣ ಮಾಡಿದ ಅವರು, ಕೊರೊನಾ ಸೋಂಕು ವಿಶ್ವಕ್ಕೆ ಹಬ್ಬಿಸಿರುವ ವಿಚಾರ ಇಡೀ ವಿಶ್ವಕ್ಜೆ ಗೊತ್ತಿದೆ ಎಂದು ಅವರು ಗುಡುಗಿದ್ದಾರೆ.
ದೇಶದ ಭೂಪ್ರದೇಶಗಳನ್ನು ಅತಿಕ್ರಮಿಸಲು ಯತ್ನಿಸುತ್ತಿರುವ ಚೀನಾಕ್ಕೆ ಕೇಂದ್ರ ಸರ್ಕಾರ ಮತ್ತು ಸೇನಾ ಪಡೆಗಳು ದಿಟ್ಟ ಉತ್ತರ ನೀಡಿವೆ‌ ಎಂದು ಹೇಳಿದರು.
ಕೊರೊನಾ ಸೋಂಕಿನ ನಡುವೆ ಭಾರತ ಮತ್ತು ಚೀನಾ ದೇಶಗಳ ನಡುವೆ ಸಾಕಷ್ಟು ವಿವಾದಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಅವರು ತಿಳಿಸಿದರು.
ನಮ್ಮ ನಾಯಕರು ಸ್ವಾಭಿಮಾನದ ಭಾವನೆ ಮತ ನಮ್ಮ ನಾಗರಿಕರ ಅದಮ್ಯ ತಾಳ್ಮೆಯೊಂದಿಗೆ ಕಳುಹಿಸಿದ ಸಂದೇಶವನ್ನು ಚೀನಾ ತನ್ನ ಮನೋಭಾವವನ್ನು ಸುಧಾರಿಸಿಕೊಳ್ಳಬೇಕು ಅದನ್ಬು ಬಿಟ್ಟು ದೇಶದ ಜಾಗವನ್ನು ಅತಿಕ್ರಮಿಸಿಕೊಳ್ಳಲು ಯತ್ನಿಸುತ್ತಿದೆ ಎಂದು‌ ಕಿಡಿಕಾರಿದರು.
ನಾವು ನೆರೆ ದೇಶಗಳೊಂದಿಗೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಸಂಬಂಧಗಳನ್ನು ಭದ್ರ ಪಡಿಸಿ ಕೊಂಡು ಚೀನಾದ ಪ್ರಯತ್ನಗಳನ್ನು ವಿಫಲಗೊಳಿಸಬೇಕು ಎಂದು ಭಾಗವತ್ ತಿಳಿಸಿದರು.
ಆರ್‌ಎಸ್‌ಎಸ್ ಮುಖ್ಯಸ್ಥರು ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆಯೂ ಮಾತನಾಡಿ, ಪೌರತ್ವ (ತಿದ್ದುಪಡಿ) ಕಾಯ್ದೆ ಯಾವುದೇ ಧಾರ್ಮಿಕ ಸಮುದಾಯದ ವಿರುದ್ಧವಲ್ಲ, ಆದರೆ ಕೆಲವರು ನಮ್ಮ ಮುಸ್ಲಿಂ ಸಹೋದರರನ್ನು ತಮ್ಮ ಜನಸಂಖ್ಯೆಯನ್ನು ನಿರ್ಬಂಧಿಸುವ ಗುರಿಯನ್ನು ಹೊಂದಿದುವ ಮೂಲಕ ಕಾಯ್ದೆಯ ದಾರಿ
ತಪ್ಪಿಸಿದ್ದಾರೆ ಎಂದು ಅವರು ಹೇಳಿದರು.
ವಿಜಯದಶಮಿ ಎಂದು ಕರೆಯುವ ದಸರಾವನ್ನು ನಾಳೆ ದೇಶದಾದ್ಯಂತ ಆಚರಿಸಲಾಗುತ್ತಿದೆ. ಆದರೆ ಕೊರೊನಾ ಸೋಂಕು ತಡೆಯಲು ನಿರ್ಬಂಧ ವಿಧಿಸಿರುವುದರಿಂದ ಸರಳ ರೀತಿಯಲ್ಲಿ ಆಚರಿಸಲಾಗುತ್ತಿದೆ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದೆ ಎಂದರು.
ಆರ್ ಎಸ್ ಎಸ್ ದಸರಾವನ್ನು ಪ್ರತಿ ಬಾರಿ ಅದ್ದೂರಿಯಾಗಿ ಆಚರಿಸುತ್ತಾ‌ ಬಂದಿದೆ. ಕೋವಿಡ್ ನಿಂದಾಗಿ ಕಡಿಮೆ ಜನರು ಭಾಗವಹಿಸಿ ದಸರಾ ಆಚರಿಸಲಾಯಿತು.