ಭಾರತ ಸಾಹಿತ್ಯದಲ್ಲಿ ಕುಮಾರವ್ಯಾಸರ ಉಲ್ಲೇಖವಿಲ್ಲ

ಸಂಜೆವಾಣಿ ನ್ಯೂಸ್
ಮೈಸೂರು: ಜ.10:- ಭಾರತೀಯ ಸಾಹಿತ್ಯವು ವ್ಯಾಸ ಮತ್ತು ವಾಲ್ಮೀಕಿಯಿಂದ ಪ್ರಾರಂಭವಾಗುತ್ತದೆ. ಕಾಳಿದಾಸ, ಪ್ರೇಮಚಂದ್, ಟ್ಯಾಗೋರ್ ಮತ್ತು ಇತರ ಅನೇಕರ ಸಾಹಿತ್ಯವನ್ನು ಗುಣಗಾನ ಮಾಡಲಾಗುತ್ತದೆ. ಆದರೆ, ಕನ್ನಡ ಸಾಹಿತ್ಯದ ಕಿರೀಟರತ್ನ ಕುಮಾರವ್ಯಾಸನನ್ನು ಎಂದಿಗೂ ಉಲ್ಲೇಖಿಸಲಾಗಿಲ್ಲ ಎಂದು ಮೈಸೂರು ವಿವಿ ಕುಲಪತಿ ಪೆÇ್ರ.ಎನ್.ಕೆ.ಲೋಕನಾಥ್ ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಇಂಗ್ಲಿಷ್ ವಿಭಾಗದ ವತಿಯಿಂದ ಎಂ.ಎ.ಸಿನಿಯರ್ ಹಾಲ್‍ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೆÇ್ರಘಿ.ಸಿ.ಎನ್.ರಾಮಚಂದ್ರನ್,ಪೆÇ್ರಘಿ.ನಾರಾಯಣ ಹೆಗ್ಗಡೆ ಅವರು ಅನುವಾದಿಸಿರುವ ¿ ಕುಮಾರವ್ಯಾಸ-ಕನ್ನಡ ಮಹಾಭಾರತ ¿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಪೆÇ್ರಘಿ.ಎನ್.ರಾಮಚಂದ್ರನ್ ಹಾಗೂ ನಾರಾಯಣ್ ಹೆಗ್ಗಡೆ ಅವರು ಇಂಗ್ಲಿಷ್ ಗೆ ಕುಮಾರವ್ಯಾಸ-ಕನ್ನಡ ಮಹಾಭಾರತ ಅನುವಾದಿಸಿರುವ ಕೃತಿಯನ್ನು ಕೃತಿಯನ್ನು ಪೆÇ್ರಘಿ.ಎಸ್.ಎನ್.ಶ್ರೀಧರ್ ತುಂಬ ಚೆನ್ನಾಗಿ ಎಡಿಟ್ ಮಾಡಿದಾರೆ. ಇದರ ಮೊದಲ ಸಂಪುಟವನ್ನು ಹಾರ್ವರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯವು ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆ? ಇಂಡಿಯಾದಲ್ಲಿ ಪ್ರಕಟಿಸಿದೆ ಎಂದರು.
ಕುಮಾರವ್ಯಾಸನ 15 ನೇ ಶತಮಾನದ ಮಹಾಕಾವ್ಯ, ಕರ್ಣಾಟ ಭಾರತ ಕಥಾ ಮಂಜರಿ, ಮಹಾಭಾರತದ ಅದ್ಭುತ ಮರು-ನಿರೂಪಣೆಯಾಗಿದೆ. ಕುಮಾರವ್ಯಾಸ ಸಾಹಿತ್ಯವನ್ನು ಇಂಗ್ಲಿಷ್‍ಗೆ ಅನುವಾದಿಸುವಾಗ ಸೊಗಸಾಗಿ ಅನುವಾದಿಸಿದ್ದಾರೆ. ಶಕ್ತಿಯುತ ಸಂಭಾಷಣೆಗಳು ಮತ್ತು ಸಂಕೀರ್ಣವಾದ ಮತ್ತು ಸ್ವಗತಗಳ ಮೂಲಕ ಕಥೆಯನ್ನು ಹೇಳಲಾಗುತ್ತದೆ. ಪ್ರತಿಯೊಂದು ಸಂಚಿಕೆಯು ಸಂಕೀರ್ಣವಾದ, ಸಾರ್ವತ್ರಿಕ ಮಾನವ ಆಸಕ್ತಿಯೊಂದಿಗೆ ಹೇಳಲಾಗಿದೆ ಎಂದು ತಿಳಿಸಿದರು.
ಈ ಭಾಷಾಂತರ ಯೋಜನೆಗೆ ಆಯ್ಕೆಯಾದ ಮೂಲ ಕನ್ನಡ ಪಠ್ಯವನ್ನು ಸಾಹಿತಿಗಳಾದ ಕುವೆಂಪು ಮತ್ತು ಮಾಸ್ತಿ ವೆಂಕಟೇಶ ಅಯ್ಯಂರ್ಗಾ ಅವರು ಸಂಪಾದಿಸಿದ್ದಾರೆ ಎಂಬುದೂ ಬಹಳ ಮಹತ್ವದ್ದಾಗಿದೆ. ಮತ್ತೆ ಈ ಕೃತಿ ಅನುವಾದಗೊಂಡಿರುವುದು ಸಂತಸದ ವಿಚಾರವಾಗಿದೆ ಎಂದು ತಿಳಿಸಿದರು.
ಇಂಗ್ಲಿಷ್ ವಿಭಾಗ ಮೈಸೂರು ವಿಶ್ವವಿದ್ಯಾನಿಲಯದ ಹೃದಯವಿದ್ದಂತೆ, ಈ ವಿಭಾಗದಲ್ಲಿ ಸಿಡಿಎನ್, ಎಚ್.ಎಚ್.ಅಣ್ಣಯ್ಯಗೌಡ, ಬಿ.ಎಂ.ಶ್ರೀಕಂಠಯ್ಯ, ಪಿ.ರಾಮಮೂರ್ತಿ, ಯು.ಆರ್.ಅನಂತಮೂರ್ತಿ, ಬಿ.ದಾಮೋದರ ರಾವ್, ಪೆÇ್ರ.ಸಿ.ಡಿ.ನರಸಿಂಹಯ್ಯ ಅನೇಕರು ಕೆಲಸ ಮಾಡಿ,ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ನಿವೃತ್ತ ಪ್ಯಾಧ್ಯಾಪಕ ಪೆÇ್ರಘಿ.ಕೃಷ್ಣಮೂರ್ತಿ ಹನೂರು ಅವರು, ರಾಮಾಯಣ ಪುನರ್ ನಿರ್ಮಾಣವಾಗಲು ಕುವೆಂಪು ಅವರಿಗೆ ಕುಮಾರವ್ಯಾಸ ಸಾಹಿತ್ಯ ಪ್ರೇರಣೆ ನೀಡಿದೆ. ಕುವೆಂಪು ಹಾಗೂ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕುಮಾರವ್ಯಾಸ ಸಾಹಿತ್ಯವನ್ನು ಚೆನ್ನಾಗಿ ತಿಳಿದಿದ್ದರು. ಕುಮಾರವ್ಯಾಸನ ಕಾವ್ಯಗಳು ಹಿಂದಿ, ಮರಾಠಿ ಜೊತೆ ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿವೆ ಎಂದರು.
ಕುಮಾರವ್ಯಾಸ-ಕನ್ನಡ ಮಹಾಭಾರತ ಕೃತಿಯನ್ನು ಪೆÇ್ರಘಿ.ಸಿ.ಎನ್. ರಾಮಚಂದ್ರನ್ ಮತ್ತು ಪೆÇ್ರಘಿ.ನಾರಾಯಣ ಹೆಗ್ಗಡೆ ಸೊಗಸಾಗಿ ಅನುವಾದಿಸಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾನಿಲಯ ಪ್ರಕಟಣೆ ಮಾಡಿರುವುದು ಸಂತಸದ ವಿಷಯವಾಗಿದೆ. ಕನ್ನಡ ಸಾಹಿತ್ಯಕ್ಕೆ ತನ್ನದೇ ಶಕ್ತಿ ಹಾಗೂ ಮಹತ್ವ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದೆಹಲಿಯ ಜವಹಲ್‍ಲಾಲ್ ನೆಹರು ವಿವಿಯ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಪೆÇ್ರಘಿ.ಎಚ್.ಎಸ್.ಶಿವಪ್ರಕಾಶ್, ಸ್ಟೇಟ್ ಯೂನಿವರ್ಸಿಟಿ ಆ? ನ್ಯೂಯಾರ್ಕ್ ಭಾಷಾಶಾಸ ಪ್ರಾಧ್ಯಾಪಕರಾದ ಪೆÇ್ರಘಿ.ಎಸ್.ಎನ್.ಶ್ರೀಧರ್, ಇಂಗ್ಲಿಷ್ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪೆÇ್ರಘಿ.ಕೆ.ಸದಾಶಿವ ಮತ್ತಿತರರು ಇದ್ದರು.