ಭಾರತ ಸರ್ವಜನಾಂಗದ ಶಾಂತಿಯ ತೋಟ:ಪ್ರೋ.ಕಂದಗಲ್

ತಾಳಿಕೋಟೆ:ಎ.13: ಮಾನವರಾದ ನಮ್ಮಲ್ಲಿ ದೇವಭಯವೆಂಬುದಿರಬೇಕು ಇದರಿಂದ ವಿಶ್ವಕ್ಕೆ ದೇಶಕ್ಕೆ ಕೆಡುಕು ಎಂಬುದು ಉಂಟಾಗಲುಸಾಧ್ಯವಿಲ್ಲ ಕಾರಣ ನಮ್ಮ ದೇಶದ ಸಂಸ್ಕøತಿಯನ್ನು ಅಳವಡಿಸಿಕೊಂಡು ಸಾಗಬೇಕೆಂದು ಇಲಕಲದ ಶಿಕ್ಷರಾದ ಪ್ರೋ.ಲಾಲ್‍ಹುಸೇನ ಕಂದಗಲ್ ಅವರು ನುಡಿದರು.

 ಬುಧುವಾರಂದು ಪವಿತ್ರ ರಂಜಾನ ಮಾಸದ ಅಂಗವಾಗಿ ಜಮಾಅತೆ ಇಸ್ಲಾಮೀ ಹಿಂದ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಸಿರು ಸಂಪದ ಬಳಗ ಇವರ ಸಹಯೋಗದೊಂದಿಗೆ ಶ್ರೀ ವಿಠ್ಠಲಮಂದಿರದಲ್ಲಿ ಏರ್ಪಡಿಸಲಾದ 'ಸೌಹಾರ್ದ ಇಫ್ತಾರ ಕೂಟ' ಕಾರ್ಯಕ್ರಮದಲ್ಲಿ ಪ್ರವಚನಕಾರರಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಯಾವುದೇ ದುಷ್ಟ ಕಾರ್ಯಗಳನ್ನು ನಾವು ಮಾಡಿದಾಗ ಕೋಮುವಾದ, ಭ್ರಷ್ಟಾಚಾರವಾಗಿರಬಹುದು ಇಂತಹವುಗಳನ್ನು ಮನುಷ್ಯರಾದ ನಾವು ಇಲ್ಲ ಸಲ್ಲದ ಮಾತುಗಳನ್ನು ಹೇಳಿ ತಪ್ಪಿಸಿಕೊಳ್ಳಬಹುದು ಆದರೇ ದೇವರ ಕಣ್ಣಿನಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದರು. ಸೃಷ್ಟಿಕರ್ತ ಒಬ್ಬನಿದ್ದಾನೆ ಅವನು ನಮ್ಮ ನಿಮ್ಮಲ್ಲಿ ಜೊತೆಯಲ್ಲಿದ್ದಾನೆಂಬುದು ಅರಿವು ಎಲ್ಲರಿಗೂ ಬರಲಿಕ್ಕಾಗಿಯೇ ಉಪವಾಸವೆಂಬುದು ಮಾಡಬೇಕಾಗಿದೆ ಎಂದರು. ಅಕ್ಷರ ಕಲಿತವ ಭ್ರಷ್ಟನಾಗಬಹುದು ಆದರೆ ಸಂಸ್ಕಾರ ಕಲಿತವ ಭ್ರಷ್ಟನಾಗಲು ಸಾಧ್ಯವಿಲ್ಲ ಎಂದ ಅವರು ಹಸಿವಿನಿಂದ ಬಳಲುತ್ತಿರುವ ವ್ಯಕ್ತಿಯನ್ನು ಗಮನಿಸಿ ಅನ್ನಹಾಕುವ ಕಾರ್ಯವಾಗಲಿ ಹಸಿವು ಅಂದರೇನು? ಅದು ಎಂತಹದ್ದು ಎಂಬುದು ಅನುಭವಿಸಿದಾಗ ಮಾತ್ರ ಗೊತ್ತಾಗುತ್ತದೆ ಎಂದರು. ಸಮಾಜದಲ್ಲಿ ಕೆಡಕುಬಾರದಂತೆ ನೋಡಿಕೊಳ್ಳಲು ದೇವಭಯ, ದೇವಭಕ್ತಿ ಎಂಬುದು ಬರಬೇಕು ಹಸಿವು ಮತ್ತು ದಾಹದಿಂದ ತಲ್ಲಣಿಸಬೇಕೆಂಬ ಉದ್ದೇಶ ಈ ಉಪವಾಸದಲ್ಲ. ಉಪವಾಸ ಅನ್ನುವಂತಹ ಭಕ್ತಿಯ ಈ ವೃತವೆಂಬುದು ಎಲ್ಲ ಧರ್ಮಿಯರಲ್ಲಿ ಆಯಾ ಪದ್ಧತಿಗಣುಗುಣವಾಗಿ ನಡೆಯುತ್ತಿವೆ ಅದರಂತೆ ಇಸ್ಲಾಂ ತನ್ನ ಅನುಯಾಯಿಗಳಿಗೆ ಹೇಳಿದ್ದು ರಂಜಾನ ಉಪವಾಸವೆಂದು ಉಪವಾಸದಲ್ಲಿದ್ದಾಗ ಮಾಡಬೇಕಾದ ಕರ್ತವ್ಯಗಳ ಕುರಿತು ಉಪವಾಸದ ಸಮಯದಲ್ಲಿ ಎಷ್ಟು ಜಾಗೃತಿವಹಿಸಬೇಕು ಹಸಿವು ಮತ್ತು ದಾಹದಿಂದ ನಿಯಂತ್ರಿಸುವ ಬಗೆಯ ಕುರಿತು ಬಹು ಮಾರ್ಮಿಕವಾಗಿ ಕಂದಗಲ್ ಅವರು ವಿವರಿಸಿದರು.
 ಇನ್ನೋರ್ವ ಮುಖ್ಯಥಿತಿಗಳಾಗಿ ಆಗಮಿಸಿದ ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆಯವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಸಿರು ಸಂಪದ ಬಳಗ ಮತ್ತು ಜಮಾಅತೆ ಇಸ್ಲಾಮೀ ಹಿಂದ್ ಈ ಮೂರು ಸಂಘಟನೆಗಳು ಸಮಾಜಸೇವೆ ಹಾಗೂ ದೇಶಸೆವೆಯತ್ತ ದಾಪುಗಾಲು ಹಾಕುತ್ತಾ ಸಾಗಿವೆ ಈ ಸಂಘಟನೆಗಳು ಕೋಮುಸೌಹಾರ್ದತೆ ಭಾವನೆ ಮೂಡಿಸುವಂತಹವುಗಳಾಗಿವೆ ಎಂದರು. ಹಿಂದೂ ಮುಸ್ಲಿಂ ಎಂಬ ಬೇಧ ಭಾವ ಬೇಡ ಇಂತಹ ಸೌಹಾರ್ದ ಕೂಟಗಳನ್ನು ಒಂದು ಕೊಮಿನವರು ಹಾಗೂ ಮತ್ತೊಂದು ಕೊಮಿನವರು ಏರ್ಪಡಿಸುತ್ತ ಸಾಗಿ ಕೊಮುಸೌಹಾರ್ದತೆ ಭಾವನೆ ಎಂಬದು ಇನ್ನಷ್ಟು ನಮ್ಮ ತಾಳಿಕೋಟೆ ಪಟ್ಟಣದಲ್ಲಿ ಮೂಡುವಂತಹದ್ದಾಗಲಿ ಎಂದು ಹೇಳಿದ ಘೋರ್ಪಡೆಯವರು 1948ರಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಘಟಕ ಔರಂಗಾಬಾದಿನಲ್ಲಿ ಜನ್ಮ ತಾಳಿತು. ತಾಳಿಕೋಟೆ ಪಟ್ಟಣದಲ್ಲಿ 1958ರಲ್ಲಿ ಜನ್ಮ ತಾಳಿದಾಗಿನಿಂದ ತನ್ನ ಪ್ರಚಾರ ಮುಂದುವರಿಸುತ್ತಾ ಸಾಗಿ ಎಲ್ಲರೊಂದಿಗೆ ಬೇರೆತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೊಮುಸೌಹಾರ್ದತೆ ಭಾವನೆಯನ್ನು ಮೂಡಿಸುತ್ತ ಸಾಗಿದೆ ಎಂದ ಅವರು ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆದರೆ ನಮ್ಮ ಮುಂದಿನ ಪೀಳಿಗೆಗೂ ಅರ್ಥವಾಗಲಿದೆ ಎಂದರು.
  ಇನ್ನೋರ್ವ ಅಥಿತಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಆರ್.ಎಲ್.ಕೊಪ್ಪದ ಅವರು ಮಾತನಾಡಿ ಸೌಹಾರ್ದ ಭಾವನೆಯನ್ನು ಮೂಡಿಸುವಂತಹ ಕಾರ್ಯ ನಮ್ಮ ಸಂಘಟನೆಗಳು ಮಾಡುತ್ತಾ ಸಾಗಿವೆ. ಕನ್ನಡ ಸಾಹಿತ್ಯ ಪರಿಷತ್ತ ಹಾಗೂ ಹಸಿರು ಸಂಪದ ಬಳಗ, ಜಮಾಅತೆ ಇಸ್ಲಾಮೀ ಹಿಂದ್ ಈ ಮೂರು ಸಂಘಟನೆಗಳು ಎಲ್ಲರನ್ನು ಒಗ್ಗೂಡಿಸುವ ಕಾರ್ಯ ಇಂದು ನಡೆದಿರುವುದು ಸಂತಸದಾಯಕವಾಗಿದೆ ಇಂತಹ ಸೇವಾ ಕಾರ್ಯಗಳು ಮೇಲಿಂದ ಮೇಲೆ ನಡೆಯುವುದರಿಂದ ನಮ್ಮತನ ಹೇಗಿದೆ ಎಂಬುದನ್ನು ಅನ್ಯರಿಗೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದ ಕೊಪ್ಪದ ಅವರು ಉಪವಾಸ ಅನ್ನುದು ಎಲ್ಲ ಧರ್ಮಿಯರಲ್ಲಿ ಆಯಾ ತಿಥಿಮಿತಿ ಅನುಗುಣವಾಗಿ ಮಾಡುತ್ತಾ ಸಾಗಿ ಬರಲಾಗಿದೆ ಅದರಂತೆ ರಂಜಾನ ಹಬ್ಬದ ಕುರಿತು ಇಂದು ನಡೆದ ಸೌಹಾರ್ದ ಇಫ್ತಾರ ಕೂಟವು ಎಲ್ಲರನ್ನು ಒಗ್ಗೂಡಿಸಿ ಸೌಹಾರ್ದತೆಯಿಂದ ಕೂಡಿನಡೆಯುವುದನ್ನು ಕಲಿಸಿ ಕೊಟ್ಟಂತಾಗಿದೆ ಎಂದರು.
  ಅಧ್ಯಕ್ಷತೆ ವಹಿಸಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಯಚೂರಿನ ಜಮಾತೇ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯದ ಮಾಜಿ ಅದ್ಯಕ್ಷರಾಧ ಜನಾಬ ಮಹ್ಮದಬ್ದುಲ್ಲಾ ಜಾವೀದ ಅವರು ಮಾತನಾಡಿ ನಮ್ಮಲ್ಲಿ ಸೌಹಾರ್ದತೆ ಭಾವನೆ ಎಂಬುದು ಮೂಡಿಬರಬೇಕಾದರೇ ಮೋದಲು ನಮ್ಮಲ್ಲಿ ಒಳ್ಳೆಯತನವೆಂಬುದು ಬರಬೇಕು ಅಂದಾಗ ಅನ್ಯರು ನಮ್ಮನ್ನು ನೋಡಿ ಅವರು ಕೂಡ ಮಾರ್ಗದರ್ಶಕರಾಗಲು ಸಾಧ್ಯವೆಂದರು. ಜಮಾಅತೆ ಇಸ್ಲಾಮೀ ಹಿಂದ್ ಒಳ್ಳೆಯದನ್ನು ಮಾಡುವ ಹಾಗೂ ಒಳ್ಳೆಯದನ್ನೇ ಕಲಿಸುವ ಕಾರ್ಯ ಈ ಸಂಘಟನೆಯದ್ದಾಗಿದೆ. ಇಂತಹ ಮಹತ್ವದ ಮೂರು ಸಂಘಟನೆಗಳನ್ನು ಒಗ್ಗೂಡಿಸಿ ಎಲ್ಲಾ ಕೋಮಿನವರನ್ನು ಒಳಗೊಂಡು ಸೌಹಾರ್ದ ಇಫ್ತಾರ ಕೂಟ ವಿಠ್ಠಲಮಂದಿರದಲ್ಲಿ ಏರ್ಪಡಿಸಿರುವುದು ಒಳ್ಳೆಯ ಜನಮೆಚ್ಚುಗೆಗೆ ಪಾತ್ರವಾಗುವಂತಹ ಮಹತ್ವದ ಕಾರ್ಯ ಇದಾಗಿದೆ ಎಂದು ಕಾರ್ಯಕ್ರಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
  ಅಬ್ದುಗನಿ ಮಕಾಂದರ ಪ್ರಾಸ್ತಾವಿಕ ಮಾತನಾಡಿದರು.
   ಶ್ರೀ ಖಾಸ್ಗತೇಶ್ವರಮಠದ ಉಸ್ತುವಾರಿಯಾದ ಮುರುಗೇಶ ವಿರಕ್ತಮಠ ಹಾಗೂ ಧಾರ್ಮಿಕ ಮುಖಂಡ ಜನಾಬ್ ಸಯ್ಯದಶಕೀಲ ಅಹ್ಮದ ಖಾಜಿ ಅವರು ಸಾನಿಧ್ಯ ವಹಿಸಿದ್ದರು.
   ಕಾರ್ಯಕ್ರಮದಲ್ಲಿ ಹಸಿರು ಸಂಪದ ಬಳಗದ ಅಧ್ಯಕ್ಷ ಡಾ.ವಿಜಯಕುಮಾರ ಕಾರ್ಚಿ, ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷ ಜನಾಬ ಮುಜಾಹಿದ್ ನಮಾಜಕಟ್ಟಿ, ಹಾಗೂ ಮೇಲಿನ ಮೂರು ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು ಹಾಗೂ ಮಾತೆಯರು ಪಾಲ್ಗೋಂಡು ಇಫ್ತಾರ ಕೂಟದಲ್ಲಿ ಉಪವಾಸಕ್ಕೆ ಸಂಭದಿಸಿದ ಹಣ್ಣು ಹಂಪಲು ಸವಿದರು.
   ಹಾಪೀಜ ಅಬ್ದುಲಮುಬೀನ್ ಕುರಾನ ಪಠಿಸಿದರು. ಮುಜಾಹಿದ ಸ್ವಾಗತಿಸಿದರು. ಅಬ್ದುಲಗನಿ ನಿರೂಪಿಸಿದರು.ನಮಾಜಕಟ್ಟಿ ವಂದಿಸಿದರು.