ಭಾರತ-ಸಮೃದ್ಧ ಭಾರತ ಜಾಗೃತಿ‌ ಸಪ್ತಾಹ ಹೊಸಪೇಟೆ ತಾಲೂಕು ಕಚೇರಿಯ ಸಿಬ್ಬಂದಿಗಳಿಗೆ ಪ್ರತಿಜ್ಞಾವಿಧಿ ಭೋಧನೆ

ಹೊಸಪೇಟೆ,ಅ.29: ಬಳ್ಳಾರಿಯ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ವತಿಯಿಂದ ಸರ್ತಕ ಭಾರತ-ಸಮೃದ್ಧ ಭಾರತ ಜಾಗೃತಿ ಸಪ್ತಾಹದ ನಿಮಿತ್ತ ಹೊಸಪೇಟೆಯ ತಾಲೂಕು ಕಚೇರಿ ಆವರಣದಲ್ಲಿ ಕಚೇರಿಯ ಸಿಬ್ಬಂದಿಗಳಿಗೆ ಜಾಗೃತಿ ಮೂಡಿಸಲಾಯಿತು.
ತಾಲೂಕು ಕಚೇರಿಯ ಸಿಬ್ಬಂದಿಗಳಿಗೆ ಬಳ್ಳಾರಿಯ ಭ್ರಷ್ಟಾಚಾರ ನಿಗ್ರಹ ದಳದ ಇನ್ಸ್‌ಪೆಕ್ಟರ್ ರವಿಕುಮಾರ್ ಅವರು ಭ್ರಷ್ಟಾಚಾರ ನಿಗ್ರಹದ ಮಹತ್ವದ ಕುರಿತು ಅರಿವು ಮೂಡಿಸುವುದರ ಜೊತೆಗೆ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು.
ಈ ಸಂದರ್ಭದಲ್ಲಿ ಎಸಿಬಿ‌ ಅಧಿಕಾರಿಗಳು, ಶಿರಸ್ತೇದಾರರಾದ ರಮೇಶ್, ಪ್ರಥಮ ದರ್ಜೆ ಸಹಾಯಕ ಪಾಪಣ್ಣ ಸೇರಿದಂತೆ ತಾಲೂಕು ಕಚೇರಿಯ ಸಿಬ್ಬಂದಿಗಳು ಇದ್ದರು.