ದಾವಣಗೆರೆ. ಏ.೧೫; ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ದಾವಣಗೆರೆಯ ಹೊರವಲಯದಲ್ಲಿರುವ ಬಾಡ ಕ್ರಾಸಿನ . ಶ್ರೀ ಪಂಚಾಕ್ಷರಿ ಗವಾಯಿಗಳ ಅಂಧರ ಶಿಕ್ಷಣ ಸಮಿತಿಯ ಆವರಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜಯಂತಿ ಆಚರಣೆ ಮಾಡಲಾಯಿತು.ಈ ವೇಳೆ ಕರವೇ ಯುವ ಘಟಕದ ಅಧ್ಯಕ್ಷರಾದ ಗೋಪಾಲದೇವರ ಮನೆ ಹುಟ್ಟು ಹಬ್ಬದ ಆಚರಣೆಯು ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ಸಮಿತಿಯ ಕಾರ್ಯದರ್ಶಿಯಾದ ಶಿವಮೂರ್ತಿ ಸ್ವಾಮಿ ಭಾರತ ಸದೃಢವಾಗಲು ಅಂಬೇಡ್ಕರ್ ಬರೆದಿರುವ ಸಂವಿಧಾನವೇ ಸಾಕ್ಷಿಯಾಗಿದೆ. ಇಂದಿನ ಯುವಕರಿಗೆ ಸ್ಪೂರ್ತಿ ಆಗುವ ಚಿಲುಮೆಯಾಗಿ ಹೊರಹೊಮ್ಮುತ್ತಾರೆ ದೇಶದ ಯಾವುದೇ ಹಳ್ಳಿ ಹಳ್ಳಿಗಳಲ್ಲಿ ಸಹ ಹೋದರೆ ಅಂಬೇಡ್ಕರ್ ಭಾವಚಿತ್ರ ಕಾಣಲು ಸಾಧ್ಯವಾಗುತ್ತದೆ ಇದಕ್ಕೆ ಕಾರಣ ಅವರ ನೀಡಿದ ಸಂವಿಧಾನ ಮತ್ತು ಅವರ ಮಾಡಿದ ಸಾಧನೆ ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾಗಿದ್ದು ಅವರು ಪಡೆದಿರುವ ಡಾಕ್ಟರೇಟ್ ಗಳು ಅವರ ಹಾದಿಯಲ್ಲಿ ಸಾವಿರಾರು ಯುವಕರು ಅವರ ಬದುಕನ್ನ ಹಸನಾಗಿಸಿಕೊಂಡಿದ್ದಾರೆ ಅಂತ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕರವೇ ಮಾಡುತ್ತಿರುವುದು ಸಂತೋಷದ ವಿಚಾರ ಬುದ್ಧ ಬಸವ ಅಂಬೇಡ್ಕರ್ ಈ ದೇಶದ ಆಸ್ತಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಈ ಇದರ ಉದ್ದೇಶ ದೇಶದಲ್ಲಿರುವ ಎಲ್ಲಾ ಪ್ರಜೆಗಳ ಸುಖವಾಗಿ ಬಾಳಬೇಕೆಂದರು