ಭಾರತ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ ಜಯಂತಿ

ನರೇಗಲ್ಲ,ಏ15: ಅನೇಕ ಮಹಾಪುರುಷರಿಗೆ ಜನ್ಮ ನೀಡಿದ ಪುಣ್ಯಭೂಮಿ ಭಾರತ ಮಹಾನ್ ಋಷಿ ಮುನಿಗಳು, ಯೋಧರು, ವಿಜ್ಞಾನಿಗಳು, ಸಮಾಜ ಸುಧಾರಕರು ಈ ಪುಣ್ಯ ಭೂಮಿಯಲ್ಲಿ ಜನ್ಮತಾಳಿದ್ದಾರೆ. 20ನೇ ಶತಮಾನದಲ್ಲಿ ಸಮಾಜಿಕ ಅಸಮಾನತೆಯನ್ನು ಮೆಟ್ಟಿ ನಿಂತು ಕ್ರಾಂತಿ ಸೂರ್ಯನಂತೆ ಸಮಾಜವನ್ನು ಸುಧಾರಿಸಿದ ಮಹಾಪುರುಷ ಅಂಬೇಡ್ಕರ್ ಎಂದು ಕರವೇ ಕಾರ್ಯದರ್ಶಿ ಹನುಮಂತಪ್ಪ ಅಬ್ಬಿಗೇರಿ ಹೇಳಿದರು.
ಅವರು ಪಟ್ಟಣದ ಬಸ್ ನಿಲ್ದಾಣದ ಬಳಿಯ ಹನಮಂತ ದೇವಾಲಯದ ಹತ್ತಿರ ಹಮ್ಮಿಕೊಂಡ ಅಂಬೇಡ್ಕರ್ ಅವರ 132 ಜಯಂತಿ ಆಚರಣೆಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ತಮಗಾದ ಎಲ್ಲ ಅಪಮಾನಗಳನ್ನು ದಿಟ್ಟವಾಗಿ ಎದುರಿಸಿದ ಬಾಬಾ ಸಾಹೇಬರು ಅರ್ಥರಾಜರಾಗಿ ನ್ಯಾಯವಾದಿಯಾಗಿ ವಕೀಲರಾಗಿ, ಸಮಾಜ ಸುಧಾರಕರಾಗಿ, ಅನೇಕ ಸಾಧನೆಗಳನ್ನು ಮಾಡಿದರು.
ನ್ಯಾಯವಾದಿಯಾಗಿ ಅಂಬೇಡ್ಕರ್ ಅವರು ಮೂಡಿಸಿದ ಸಾಮಾಜಿಕ, ಬದಲಾವಣೆಯ ಬಗ್ಗೆ ತಿಳಿಯುವುದು, ಅಗತ್ಯ ಎಂದರು.
ಈ ಸಂಧರ್ಭದಲ್ಲಿ ಆರಕ್ಷಕ ಠಾಣಾಧಿಕಾರಿ ಕಿರಣ ಕುಮಾರ್ ಎಸ್, ಶರಣಪ್ಪ ಕರಮುಡಿ, ರಮೇಶ ಕಾಟಿ, ವಿಶ್ವ ಹಳ್ಳದಮನಿ, ಭರತ ಬಳಗಾನೂರ, , ಶಿರಾಜ ಹೊಸಮನಿ, ಮಂಜುನಾಥ ಚಲವಾದಿ, ನಿಂಗಪ್ಪ ಹೊನ್ನಪೂರ, ಬಾಳಪ್ಪ ಸೋಮಗೊಂಡ,ನಡುವಲಕೇರಿ, ಯಲ್ಲಪ್ಪ ಮಣ್ಣೂಡ್ಡರ, ಮೂಕಪ್ಪ ನವಲಗುಂದ, ಮಲ್ಲೇಶ ಮಣ್ಣೂಡ್ಡರ, ಅಪ್ಪಣ್ಣ ಗೊರ್ಕಿಯವರ, ಕಾರ್ತಿಕ ಶಶಿ ಗೊರಕಿಯವರ, ಪ್ರಭು ಹಳ್ಳದಮನಿ, ಶಿವರಾಜ ಚಲವಾದಿ, ಪ್ರವೀಣ ನಡವಲಕೇರಿ ಸೇರಿದಂತೆ ಇತರರು ಇದ್ದರು.

ಸರಕಾರಿ, ಹೆಣ್ಣು ಮಕ್ಕಳ ಶಾಲೆ ನರೆಗಲ್ಲದಲ್ಲಿ ಡಾ. ಬಾಬಾಸಾಹೆಬ್ ಅಂಬೇಡ್ಕರ್ ರವರ 132ನೆ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಬಿ.ಬಿ.ಕುರಿ, ಸಹ ಶಿಕ್ಷಕರು ಬಾಚಲಾಪುರ, ವಿಶ್ವ ಹಳ್ಳದಮನಿ, ಪ್ರಭು ಹೊಂಬಳ, ವಿನೋದ್ ಬಾಚಲಾಪುರ, ಕರಣ ನಡುವಲಕೇರಿ, ಪರಶುರಾಮ ನಡುವಲಕೇರಿ, ಹಾಲಪ್ಪ ನಡವಲಕೇರಿ, ವಿಜಯ ಬಾಚಲಾಪೂರ, ಮಂಜು ಮತ್ತು ವಿದ್ಯಾರ್ಥಿಗಳು ಇದ್ದರು.