ಭಾರತ ಸಂವಿಧಾನ ವಿಶ್ವಕ್ಕೆ ಮಾದರಿ

ಬಂಗಾರಪೇಟೆ.ನ 28: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ದಲಿತ ಪರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಮಾಜ ಸೇನೆ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ಅವರು ಮಾತನಾಡಿ, ೨೬ ನವೆಂಬರ್ ೧೯೪೯ರಂದು ಬಾಬಾ ಸಾಹೇಬ್ ಅಂಬೇಡ್ಕರ್ ರವರು ೨ವರ್ಷ ೧೧ ತಿಂಗಳು ೧೮ ದಿನ ಸರಿ ಸುಮಾರು ಭಾರತದ ಸಂವಿಧಾನ ಯಾವ ರೀತಿ ಇರಬೇಕು. ಇತರೆ ದೇಶಗಳಿಗೆ ಮಾದರಿಯಾಗಿರಬೇಕು, ಸಮಾಜ ಕಟ್ಟಕಡೆಯ ವ್ಯಕ್ತಿಗೂ ಸಹ ಸಮಬಾಳು ಎನ್ನುವಂತಹ ಸಂವಿಧಾನವನ್ನು ರಚನೆಮಾಡಿ ೧೯೪೯ ನವೆಂಬರ್ ೨೬ರಂದು ಅಂದಿನ ಪ್ರಧಾನಿಯಾದ ಜವಾಹರ್‌ಲಾಲ್ ನೆಹರು ಅವರಿಗೆ ಭಾರತದ ಸಂವಿಧಾನ ರಚನೆ ಮಾಡಿ ಕೊಟ್ಟಿರುತ್ತಾರೆ. ಇಂದು ಸಂವಿಧಾನ ದಿನಾಚರಣೆ ಎಂದು ಆಚರಣೆ ಮಾಡುತ್ತಿದೆ. ಹಾಗೂ ಸರ್ಕಾರ ಕೂಡ ಘೋಷಣೆ ಮಾಡಿದೆ. ಭಾರತದ ದೇಶ ಇತರೆ ದೇಶಕ್ಕಿಂತ ನಮ್ಮ ದೇಶದ ಸಂವಿಧಾನ ಮಾದರಿಯಾಗಿದೆ.
ಪ್ರತಿಯೊಬ್ಬ ಮಹಿಳೆಗೂ ಯಾವ ರೀತಿ ರಕ್ಷಣೆ ನೀಡಬೇಕು, ರಿಸರ್ವ ಬ್ಯಾಂಕ್ ಆಪ್ ಇಂಡಿಯಾ ಸ್ಥಾಪನೆ ಯಾವ ರೀತಿಯ ನಡೆಸಬೇಕು, ಪ್ರತಿಯೊಬ್ಬರಿಗೂ ಕಾನೂನಾತ್ಮಕವಾಗಿ ನ್ಯಾಯ ಒದಗಿಸಬೇಕು, ತುಳಿತಕ್ಕೆ ಒಳಗಾದ ಜನಾಂಗವನ್ನು ಯಾವರೀತಿ ಮುಂದೆ ತರಬೇಕೆಂದು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿದ್ದಾರೆ. ಆದರೂ ಸಹ ದಲಿತರ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಯುತ್ತಿದೆ ಇದನ್ನು ನಾವು ಮನದಟ್ಟು ಮಾಡಿಕೊಂಡು ಬಾಬಾ ಸಾಹೇಬ್ ಅಂಬೇಡ್ಕರ್‌ರವರ ತತ್ವ ಸಿದ್ದಾಂತವನ್ನು ರೂಢಿಸಿಕೊಳ್ಳಬೇಕು, ಆಗಾಗಿ ಒಬ್ಬ ಅಂಬೇಡ್ಕರ್‌ನಿಂದ ಈ ರೀತಿಯಾದ ಬದಲಾವಣೆಯಾಯಿತು ಎಂಬುದು ಎಲ್ಲರೂ ಅರ್ಥೈಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವು ಈ ದಿನ ಸಂವಿಧಾನ ದಿನಾಚರಣೆಯನ್ನು ಮಾಡುತ್ತಿದ್ದೇವೆ ಎಂದು ಹೇಳಿದರು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಲ್ಪಟ್ಟ ಭಾರತದ ಸಂವಿಧಾನವು ಜನವರಿ ೨೬, ೧೯೫೦ರಂದು ಜಾರಿಗೆ ಬಂದಿತು. ಆದ್ದರಿಂದ ಭಾರತದಲ್ಲಿ ಪ್ರತಿವರ್ಷ ಜನವರಿ ೨೬ ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಅದೇ ರೀತಿ ನವೆಂಬರ್ ೨೬ನ್ನು ಸಂವಿಧಾನ ದಿನ ಎಂದು ಆಚರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಮಹಾನ್ ಮಾನವತಾವಾದಿ ಸಂಘಟನೆ ಜಯಂತ್, ವೆಂಕಟೇಶ್, ಆತ್ಮವಿಶ್ವಾಸ ವೇದಿಕೆಯ ಸೀಸಂದ್ರ ಎಂ.ಎನ್.ಭಾರದ್ವಾಜ್, ದೇವಗಾನಹಳ್ಳಿ ನಾಗೇಶ್, ಆಟೋ ಮಂಜು, ಅಯ್ಯಪ್ಪ, ಅಡಿಗೆ ರಮೇಶ್, ಕನ್ನಡ ಜಾಗೃತಿ ವೇದಿಕೆ ರಮೇಶ್, ಮುನಿವೆಂಕಟಪ್ಪ, ಅಯ್ಯಪ್ಪ, ಮಂಜು ಮೊದಲಾದವರು ಹಾಜರಿದ್ದರು.