ಭಾರತ ಸಂವಿಧಾನ ಜಗತ್ತಿನಲ್ಲೇ ಶ್ರೇಷ್ಠ

ದೇವದುರ್ಗ.ಫೆ.೦೭- ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಭಾರತದ ಸಂವಿಧಾನ ಜಗತ್ತಿನಲ್ಲೆ ಅತ್ಯಂತ ಶ್ರೇಷ್ಠವಾಗಿದೆ. ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತಕ್ಕೆ ಸಂವಿಧಾನವೇ ಧರ್ಮಗ್ರಂಥ ಎಂದು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಹೇಳಿದರು.
ತಾಲೂಕಿನ ನಾಗಡದಿನ್ನಿ ಗ್ರಾಮದಲ್ಲಿ ಜಿಲ್ಲಾಡಳಿತ. ತಾಲೂಕ ಆಡಳಿತ. ತಾ.ಪಂ. ಸ್ಥಳೀಯ ಗ್ರಾಮ ಪಂಚಾಯತ್‌ದಿಂದ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥಾ ಹಾಗೂ ಸ್ತಬ್ಧಚಿತ್ರ ರಥಕ್ಕೆ ಮಂಗಳವಾರ ಅದ್ದೂರಿಯಾಗಿ ಸ್ವಾಗತಕೋರಿ ಮಾತನಾಡಿದರು. ಸಂವಿಧಾನ ಸಮಿತಿ ಅನೇಕ ದೇಶಗಳ ಸಂವಿಧಾನವನ್ನು ಅಧ್ಯಯನ ನಡೆಸಿ, ದೇಶಕ್ಕೆ ಹೊಂದುವಂತೆ ಸಂವಿಧಾನ ರಚಿಸಿದೆ. ಸಂವಿಧಾನ ಧ್ಯೇಯದಲ್ಲಿ ನಾವು ಬದುಕು ಕಟ್ಟಿಕೊಂಡಿದ್ದೇವೆ. ಅದರ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾಗಿದೆ. ಪ್ರತಿಯೊಬ್ಬರು ಸಂವಿಧಾನದ ಬಗ್ಗೆ ಅರಿತುಕೊಳ್ಳಬೇಕು.
ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ರಥಯಾತ್ರೆ ಹಾಗೂ ಸ್ತಬ್ಧಚಿತ್ರ ಮೆರವಣಿಗೆ ಆಯೋಜಿಸಲಾಗಿದೆ. ನಾಗಡದಿನ್ನಿ ಗ್ರಾಮದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದ್ದು ನಾಲ್ಕದಿನ ತಾಲೂಕಿನಲ್ಲಿ ಸಂಚಾರ ನಡೆಸಲಿದೆ. ಅಲ್ಲದೆ ನಾಲ್ಕು ರಾತ್ರಿ, ನಾಲ್ಕುಕಡೆ ವಾಸ್ತವ್ಯ ಇರುವುದು. ಈ ಅವಧಿಯಲ್ಲಿ ಜನರಿಗೆ ಸಂವಿಧಾನದ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುವುದು. ಎಲ್ಲರೂ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂವಿಧಾನದ ಮಹತ್ವ ಅರಿತುಕೊಳ್ಳಬೇಕು ಎಂದರು.
ನಾಗಡದಿನ್ನಿ ಗ್ರಾಪಂ ಅಧ್ಯಕ್ಷೆ ಮೈತ್ರಾವತಿ ತಿಪ್ಪಲದಿನ್ನಿ, ತಾ.ಪಂ. ಇಒ ಬಸವರಾಜ ಹಟ್ಟಿ, ಬಿಇಒ ಎಚ್.ಸುಖದೇವ, ಪಿಡಿಒ ಬಸಯಸ್ವಾಮಿ, ಪರಿಶಿಷ್ಟ ಪಂಗಡ ಇಲಾಖೆ ಅಧಿಕಾರಿ ಮಂಜುಳಾಅಸುಂಡಿ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಜ್ ಕುಮಾರ್ ದೋಣಿ, ಮಾನಪ್ಪ ಬಡಿಗೇರ್. ಸಿಡಿಪಿಒ ಮಾದವನಂದ, ಟಿಎಚ್‌ಒ ಡಾ.ಬನದೇಶ್ವರ, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ಮಹಾಂತೇಶ ಭವಾನಿ, ಮಲ್ಲೇಶಪ್ಪ ಹುನಗುಂದ ಭಾಡ, ಮರಲಿಂಗಪ್ಪ ವಕೀಲರು ಕೋಳೂರು. ಮಾನಪ್ಪ ಮೇಸ್ತ್ರಿ. ರಂಗನಾಥ್ ಕೊಂಬಿನ. ಪ್ರಶಾಂತ್ ಸೂರ್ಯವಂಶಿ ಮಾನ್ವಿ. ಮೋಹನ್ ಬಲಿದ್. ಗ್ರಾಮ ಪಂಚಾಯತ್ ಸದಸ್ಯರು. ಆಶಾ ಅಂಗನವಾಡಿ ಕಾರ್ಯಕರ್ತರು. ಮುಖಂಡರು. ಇತರರಿದ್ದರು.
ಅದ್ದೂರಿ ಸ್ವಾಗತ: ನಾಗಡದಿನ್ನಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆಯನ್ನು ತಾಲೂಕು ಆಡಳಿತ, ತಾಪಂ ಹಾಗೂ ಗ್ರಾಪಂಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಸಕಲ ವಾಧ್ಯ ಮೇಳ, ಕಲಾತಂಡಗಳು ಮೆರಗು ತಂದವು. ಮಹಿಳೆಯರು ಕುಂಭಕಳಸ ಹಿಡಿದು ಭಾಗವಹಿಸಿದ್ದರು. ರಥದ ಮುಂದೆ ಯುವತಿಯರು ಕುಂಭಹೊತ್ತು ಸಾಗಿದರು. ಯುವಕರು, ಮಹಿಳೆಯರು, ಶಾಲಾ ಮಕ್ಕಳು ಜಯಘೋಷ ಮೊಳಗಿಸಿದರು. ಮಕ್ಕಳು ವಿವಿಧ ಹಾಡಿಗೆ ನೃತ್ಯ ಮಾಡಿಗಮನ ಸೆಳೆದರು. ಯುವಕರು ರಥಯಾತ್ರೆಗೆ ಪುಷ್ಪಾರ್ಚನೆ ಸಲ್ಲಿಸಿದರು.
ನಾಗಡದಿನ್ನಿಯಲ್ಲಿ ಸಂವಿಧಾನ ಜಾಗೃತಿ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ನಾಗಡದಿನ್ನಿ ಗ್ರಾ.ಪಂ. ಅಧ್ಯಕ್ಷೆ ಮೈತ್ರಾವತಿ ತಿಪ್ಪಲದಿನ್ನಿ, ತಾ.ಪಂ. ಇ.ಒ. ಬಸವರಾಜ ಹಟ್ಟಿ, ಬಿಇಒ ಎಚ್.ಸುಖದೇವ, ಪಿಡಿಒ ಬಸಯಸ್ವಾಮಿ, ಪರಿಶಿಷ್ಟ ಪಂಗಡ ಇಲಾಖೆ ಅಧಿಕಾರಿ ಮಂಜುಳಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಜ್ ಕುಮಾರ್ ದೋಣಿ ಇದ್ದರು.