ಭಾರತ ಸಂವಿಧಾನದ ಆಶಯಗಳು ವಚನಗಳ ಸಂದೇಶಗಳೇ ಆಗಿವೆ

ಕಲಬುರಗಿ:ಜ.5:ಭಾರತದ ಸಂವಿಧಾನದದಲ್ಲಿ ವಚನಗಳ ಸಂದೇಶಗಳನ್ನು ನೇರವಾಗಿ ಸೇರಿಸಿರುವುದಕ್ಕೆ ಪುರಾವೆಗಳಿಲ್ಲ. ಆದರೆ ವಚನಗಳ ಸಂದೇಶವೇ ಭಾರತದ ಸಂವಿಧಾನವಾಗಿದೆ. ಬಸವಣ್ಣನವರು ಮಹಾನ್ ಮಾನವತಾ ವಾದಿಗಳು. ಸಕಲ ಜೀವಿಗಳ ಲೇಸನ್ನು ಬಯಸಿದವರು. ಜನಕಲ್ಯಾಣಕ್ಕಾಗಿ ಶ್ರಮಿಸಿದವರು. ಸಮಾನತೆಯನ್ನು ಸಾರಿದವರು. ಕಾಯಕ-ದಾಸೋಹ, ದಯೆ, ಕರುಣೆ, ಮೌಲ್ಯಗಳನ್ನು ಬಿತ್ತಿದವರು. ಸಂವಿಧಾನವು ಈ ಅಂಶಗಳನ್ನು ಒಳಗಳಗೊಂಡಿದೆ ಎಂದು ನ್ಯಾಯಮೂರ್ತಿ ನಾಗಮೋನದಾಸ ಅವರು ಅಭಿಪ್ರಾಯಪಟ್ಟರು.

ಕಲಬುರಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಲಿಂ. ಶ್ರೀ ಸೋಮನಾಥಪ್ಪ ಬಸವಣ್ಣಪ್ಪ ಖೂಬಾ ಸ್ಮರಣಾರ್ಥ ಅರಿವಿನ ಮನೆ 652 ನೆಯ ದತ್ತಿ ಉಪನ್ಯಾಸದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಭಾರತದ ಸಂವಿಧಾನವನ್ನು ಪಾಲಿಸುವುದು ಎಂದರೆ ಅದು ವಚನಗಳ ಸಂದೇಶಗಳನ್ನು ಪಾಲಿಸಿದಂತೆಯೇ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತವು ಪ್ರಜಾಪ್ರಭುತ್ವಗಣರಾಜ್ಯವಾಗಿದೆ. ಭಾರತದ ಸಂವಿಧಾನವು 1950 ಜನೆವರಿ 26 ರಂದು ಜಾರಗಿ ಬಂದಿತು. ಸಂವಿಧಾನ ರಚನಾ ಸಮಿತಿಯ ಮೇಲೆ ನಾಲ್ಕು ಪ್ರಮುಖ ಅಂಶಗಳು ಪ್ರಭಾವ ಬೀರಿದವು. ಮೊದಲನೆಚಿiÀುದಾಗಿ ರಾಷ್ಟ್ರೀಯ ಚಳುವಳಿಯ ಗುರಿಗಳು, ಎರಡನೆಚಿiÀುದಾಗಿ ಜಗತ್ತಿನ ಮಹಾನ್‍ಕ್ರಾಂತಿಯ ಮಾಹಾನ್ ಘೋಷಣೆಗಳು, ಮೂರನೆಯದಾಗಿ ಇತರ ದೇಶಗಳಲ್ಲಿ ಜಾರಿಯಲ್ಲಿರುವ ಸಂವಿಧಾನಗಳು, ನಾಲ್ಕನೆಯದಾಗಿ ನಮ್ಮದೇಶದ ಮಹಾನ್ ದಾರ್ಶನಿಕ ಸಂದೇಶಗಳು.

ಭಾರತದ ಸ್ವಾತಂತ್ರದ ಹೋರಾಟ ಕೇವಲ ರಾಜಕೀಯ ಹೋರಾಟವಾಗಿರದೆ ಅದು ಆರ್ಥಿಕ ಸಮಾಜಿಕ ಹೋರಾಟವೂ ಆಗಿತ್ತು. ರಾಜಕೀಯ ಅಧಿಕಾರ ಪ್ರಜೆಗಳ ಕೈಗೆ ಬರಬೇಕೆಂದು ಪ್ರಜಾಪ್ರಭುತ್ವ ವ್ಯವಸ್ಥೆ ಆಯ್ಕೆಮಾಡಿಕೊಳ್ಳಲಾಯಿತು. ಭಾರತವನ್ನು ಜಾತ್ಯತೀತ ರಾಷ್ಟ್ರವೆಂದು ಘೋಷಿಸಲಾಯಿತು. ಭಾರತದ ಸ್ವಾತಂತ್ರ ಹೋರಾಟದ ಗುರಿ ಸಮಸಮಾಜ ನಿರ್ಮಾಣಮಾಡುವುದಾಗಿತ್ತು. ಸಾಮಾಜಿಕ ನ್ಯಾಯ ಒದಗಿಸಬೇಕು, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಜಾತ್ಯತೀತ, ಬಹುತ್ವ, ಕಲ್ಯಾಣರಾಜ್ಯದ ಕನಸು ಇವು ಸಂವಿಧಾನದ ಗುರಿಗಳಾಗಿದ್ದವು. ಅಮೇರಿಕ, ಐರ್ಲೆಂಡ್, ಕೆನಡಾ, ಇಂಗ್ಲೆಂಡ ಸಂವಿಧಾನಗಳು ನಮ್ಮ ಸಂವಿಧಾನದ ಮೇಲೆ ಪ್ರಭಾವ ಬೀರಿದವು. ಬುದ್ಧ ಬಸವ ಗಾಂಧಿ ಅಂಬೇಡ್ಕರ ಅವರ ಸಿದ್ಧಾಂತಗಳು ಕೂಡ ಸಂವಿಧಾನದ ಮೇಲೆ ಪ್ರಭಾವ ಬೀರಿವೆ.

ಬಸವಣ್ಣನವರ ಆದರ್ಶ ವ್ಯಕ್ತಿತ್ವ ಕುರಿತು ಮಡಿವಾಳ ಮಾಚಿದೇವರು ಹೀಗೆ ಹೇಳಿದ್ದಾರೆ. ಬಸವಣ್ಣ ನಡೆಪರುಷ, ಬಸವಣ್ಣ ನುಡಿ ಪರುಷ, ಬಸವಣ್ಣನ ದೃಷ್ಟಿ ಪರುಷ ಎಂದು. ಪ್ರಮುಖ ಮೌಲ್ಯಗಳಾದ ಮಾನವ ಹಕ್ಕುಗಳು ವಚನಗಳಲ್ಲಿವೆ. ಸಮಾನತೆ, ಜಾತಿ, ಲಿಂಗಭೇದ, ವರ್ಣಭೇದ ನಿರಾಕರಣೆ ಇದೆ. ಕ್ರೌರ್ಯ ನಿರಾಕರಣೆಯೇ ಯುದ್ಧದಲ್ಲಿ ತಟಸ್ಥ ನಿಲವು ಹೊಂದುವ ಭಾರತದ ನೀಲವಾಗಿದೆ. ಪ್ರೀತಿ, ಭಕ್ತಿ, ಮೌಲ್ಯಗಳ ಜೊತೆ ಪ್ರತಿಯೊಬ್ಬರಿಗೂ ಆಹಾರದ ಹಕ್ಕನ್ನು ಶರಣರು ಪ್ರತಿಪಾಧಿಸಿದರು. ಕಳಬೇಡ ಕೊಲಬೇಡವೆಂಬ ವಚನ ಮಾನವ ಹಕ್ಕುಗಳನ್ನು ಸಾರುತ್ತದೆ. ‘ಇವನಾರವ ಇನಾರವ ಎಂದೆನಿಸದಿರಯ್ಯ’ ಎಂಬುದು ಮಾನವ ಸಮಾನತೆಯ ಹಕ್ಕಾಗಿದೆ.

ಪ್ರಜಾಪ್ರಭುತ್ವದ ತತ್ತ್ವ ಅನುಭವ ಮಂಟಪದಲ್ಲಿ ಮಹಿಳೆಯರು ಹಾಗೂ ಎಲ್ಲಾ ಜಾತಿಯವರನ್ನು ಒಟ್ಟಿಗೆ ಕೂಡಿಸಿ ಚರ್ಚೆ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರದ ಹಕ್ಕಾಗಿದೆ. ಇದು ಇಂದಿನ ಸಂಸತ್ತಿಗೆ ಸಮಾನವಾಗಿದೆ. ಅನುಭವ ಮಂಟಪದಲ್ಲಿ ವೈಜ್ಞಾನಿಕ ಚರ್ಚೆಗಳಾದವು. ಅವುಗಳೇ ವಚನಗಳಾದವು. ಈ ಸಂಗತಿಗಳು ಸಂವಿಧಾನದಲ್ಲಿವೆ. 1973ರಲ್ಲಿ ಕೇಶವಾನಂದ ಭಾರತಿ ತೀರ್ಪಿನಲ್ಲಿ ಸಂವಿಧಾನದ ಮೂಲತತ್ತ್ವಗಳನ್ನು ರಚಿಸಿದರು. ಈ ತತ್ತ್ವಗಳು ವಚನಗಳ ಸಂದೇಶಗಳಾಗಿವೆ. ಸಂವಿಧಾನದ ಮೂಲಭೂತ ಹಕ್ಕುಗಳಾದ ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ವೃತ್ತಿ ಮತ್ತು ಓಡಾಡುವ ಸ್ವಾತಂತ್ರ್ಯ ಇವು ವಚನಗಳಲ್ಲಿ ನಾವು ಕಾಣುತ್ತೇವೆ.

ಭಾರತದಲ್ಲಿ 4600 ಕ್ಕೂ ಹೆಚ್ಚು ಜಾತಿಗಳಿವೆ. ವಂಶದ ವೃತ್ತಿತೊರೆಯದಂತಹ ಪರಸ್ಥಿತಿ ಇತ್ತು. ವೃತ್ತಿಗಳಿಂದ ಜಾತಿಗಳು ಬಂದಿವೆ, ಆದ್ದರಿಂದ ಜಾತಿನಿರಾಕರಣೆ ಮಾಡಬೇಕೆಂದು ಶರಣರು ಹೇಳಿದರು. ಇದು ಸಂವಿಧಾನದ ಸಿದ್ಧಾಂತವಾಗಿದೆ. ಮೊಲೆಮುಡಿ ಬಂದಡೆ ಹೆಣ್ಣೆಂಬರು, ಗಡ್ಡ ಮೀಸೆ ಬಂದಡೆ ಗಂಡೆಂಬರು ಒಳಗೆ ಸುಳಿದಾಡುವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ ಎನ್ನುವ ಮೂಲಕ ಮಹಿಳಾ ಸಮಾನತೆ ಸಾರಿದರು. ಇದು ಸಂವಿಧಾನದ ಸಿದ್ಧಾಂತವಾಗಿದೆ. ಕಾಯಕ-ದಾಸೋಹದಿಂದ ಪ್ರತಿಯೋಬ್ಬರು ಕನಿಷ್ಟ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವಂತಾಯಿತು. ಇದು ಸಂವಿಧಾನದ ಸಿದ್ಧಾಂತವಾಗಿದೆ. ವಚನಕಾರರು ಮೂಢನಂಬಿಕೆಗಳ ವಿರೋಧಿಗಳಾಗಿದ್ದರು. ಇದುಕೂಡ ಸಂವಿಧಾನದ ಸಿದ್ಧಾಂತ ಆಗಿದೆ ಎಂದು ನಾಗಮೋಹನದಾಸ ಅಭಿಪ್ರಾಯ ಪಟ್ಟರು.

ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮಕ್ಕೆ ಡಾ.ವಿಲಾಸವತಿ ಖೂಬಾ ಅವರು ಸ್ವಾಗತಿಸಿದರÉ ಡಾ. ವೀರಣ್ಣದಂಡೆ ಅವರು ಅತಿಥಿಗಳನ್ನು ಪರಿಚಯಸಿದರು. ಡಾ. ಜಯಶ್ರೀದಂಡೆ, ದತ್ತಿ ದಾಸೋಹಿಗಳಾದ ಶ್ರೀ ರಾಜೇಂದ್ರ ಖೂಬಾ ಉಪಸ್ಥಿತರಿದ್ದರು. ಡಾ. ಆನಂದ ಸಿದ್ಧಾಮಣಿ ಕಾರ್ಯಕ್ರಮ ನಿರೂಪಿಸಿದರು.