ಭಾರತ ಶೀಘ್ರ ೩ನೇ ಆರ್ಥಿಕ ದೇಶ: ಮೋದಿ ವಿಶ್ವಾಸ

ನವದೆಹಲಿ,ಸೆ.೨೬ “ದೇಶವನ್ನು ೨೦೪೭ ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವಾಗಲು ಸಂಕಲ್ಪತೊಡಲಾಗಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಕೆಲವು ವರ್ಷಗಳಲ್ಲಿ, ವಿಶ್ವದಲ್ಲಿಯೇ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಧಾರ್ ಕಾರ್ಡ್‌ಗಳು, ಡಿಜಿಟಲ್ ಲಾಕರ್‌ಗಳು ಮತ್ತು ಇಕೆವೈಸಿ ದಾಖಲಾತಿಗಳ ಸಂಕೀರ್ಣತೆ ತೊಡೆದುಹಾಕಲಾಗಿದೆ. ತಂತ್ರಜ್ಞಾನದ ಅವಳಡಿಕೆಯಿಂದ ಭ್ರಷ್ಟಾಚಾರ ಕಡಿಮೆಯಾಗಿದೆ ಮತ್ತು ವಿಶ್ವಾಸಾರ್ಹತೆ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ಸೇರ್ಪಡೆಗೊಂಡವರಿಗೆ ಸುಮಾರು ೫೧,೦೦೦ ನೇಮಕಾತಿ ಪತ್ರಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿತರಿಸಿ ಮಾತನಾಡಿದರು.
“ಕಳೆದ ೯ ವರ್ಷಗಳಲ್ಲಿ, ಯೋಜನೆಗಳು ದೊಡ್ಡ ಗುರಿ ಸಾಧಿಸಲು ದಾರಿ ಮಾಡಿಕೊಟ್ಟಿವೆ. ನೀತಿಗಳು ಹೊಸ ಮನಸ್ಥಿತಿ, ವಿಷಯ ಮಾನಿಟರಿಂಗ್, ಮಿಷನ್ ಮೋಡ್ ಅನುಷ್ಠಾನ ಮತ್ತು ಸಾಮೂಹಿಕ ಭಾಗವಹಿಸುವಿಕೆ ಆಧರಿಸಿವೆ. ೯ ವರ್ಷಗಳಲ್ಲಿ ಸರ್ಕಾರ ಮಿಷನ್ ಮೋಡ್‌ನಲ್ಲಿ ನೀತಿ ಜಾರಿಗೆ ತಂದಿದೆ ಎಂದಿದ್ದಾರೆ.
ತಂತ್ರಜ್ಞಾನದೊಂದಿಗೆ ಬೆಳೆದ ಪೀಳಿಗೆಯ ಭಾಗವಾಗಿದ್ದೀರಿ….ನಿಮ್ಮ ಕೆಲಸದಲ್ಲಿ ತಂತ್ರಜ್ಞಾನವನ್ನು ಬಳಸಬೇಕಾಗಿದೆ” ದೇಶ ಐತಿಹಾಸಿಕ ಸಾಧನೆಗಳು ಮತ್ತು ನಿರ್ಧಾರಗಳಿಗೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಕೆಲವು ದಿನಗಳ ಹಿಂದೆ, ದೇಶದ ಅರ್ಧದಷ್ಟು ಜನಸಂಖ್ಯೆಯು ನಾರಿ ಶಕ್ತಿ ವಂದನ್ ಕಾಯ್ದೆಯ ರೂಪದಲ್ಲಿ ದೊಡ್ಡ ಶಕ್ತಿಯನ್ನು ಪಡೆದುಕೊಂಡಿದೆ. ಕಳೆದ ೩೦ ವರ್ಷಗಳಿಂದ ಬಾಕಿ ಉಳಿದಿದ್ದ ಮಹಿಳಾ ಮೀಸಲಾತಿ ಮಸೂದೆ ಇದೀಗ ದಾಖಲೆ ಮತಗಳಿಂದದ ಉಭಯ ಸನಗಳಲ್ಲಿ ಅಂಗೀಕಾರವಾಗಿದೆ. ಹೊಸ ಸಂಸತ್ತಿನ ಮೊದಲ ಅಧಿವೇಶನದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಒಂದು ರೀತಿಯಲ್ಲಿ ದೇಶದ ಹೊಸ ಭವಿಷ್ಯ ಹೊಸ ಸಂಸತ್ತಿನಲ್ಲಿ ಪ್ರಾರಂಭವಾಗಿದೆ” ಎಂದು ಹೇಳಿದ್ದಾರೆ.
“ರೋಜ್‌ಗಾರ್ ಮೇಳದ ಅಡಿಯಲ್ಲಿ ಇಂದು ನೇಮಕಾತಿ ಪತ್ರಗಳನ್ನು ಸ್ವೀಕರಿಸಿದ ಹೊಸದಾಗಿ ಸೇರ್ಪಡೆಗೊಂಡ ಎಲ್ಲಾ ನೇಮಕಾತಿ ಪಡೆದ ಅಭ್ಯರ್ಥಿಗಳನ್ನು ಅಭಿನಂಧಿಸುವುದಾಗಿ ತಿಳಿಸಿದ್ದಾರೆ.
ಲಕ್ಷಾಂತರ ಯುವಕರು ಸರ್ಕಾರಿ ಸೇವೆಗಳಿಗೆ ಸೇರಿದಾಗ, ನೀತಿಗಳ ಅನುಷ್ಠಾನದ ವೇಗ ಮತ್ತು ಪ್ರಮಾಣವೂ ಹೆಚ್ಚಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಜಿಡಿಪಿ ಬೆಳವಣಿಗೆ ಹೆಚ್ಚಳ
ಜಾಗತಿಕ ಆರ್ಥಿಕತೆಯ ತೊಂದರೆಗಳ ನಡುವೆ ಭಾರತದ ಜಿಡಿಪಿ ವೇಗವಾಗಿ ಬೆಳೆಯುತ್ತಿದೆ. ಉತ್ಪಾದನೆ ಮತ್ತು ರಫ್ತುಗಳಲ್ಲಿ ಭಾರಿ ಹೆಚ್ಚಳವಾಗಿದೆ. ದೇಶ ತನ್ನ ಆಧುನಿಕ ಮೂಲಸೌಕರ್ಯದಲ್ಲಿ ಮಾಡುತ್ತಿರುವ ಹೂಡಿಕೆಯ ಮೊತ್ತವನ್ನು ಹಿಂದೆಂದೂ ಮಾಡಲಾಗಿಲ್ಲ” ಎಂದು ಹೇಳಿದ್ದಾರೆ.
ಕಳೆದ ಒಂಬತ್ತು ವರ್ಷಗಳಲ್ಲಿ, ತಾಂತ್ರಿಕ ಪರಿವರ್ತನೆ ಮೂಲಕ ಆಡಳಿತ ಹೇಗೆ ಸರಾಗಗೊಳಿಸಬಹುದು ಎಂಬುದನ್ನು ನೋಡಿದ್ದೀರಿ. ಮೊದಲು ರೈಲು ನಿಲ್ದಾಣಗಳ ಬುಕ್ಕಿಂಗ್ ಕೌಂಟರ್‌ಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು. ತಂತ್ರಜ್ಞಾನ ಅವಳಡಿಕೆಯಿಂದ ಸಮಸ್ಯೆ ನಿವಾರಿಸಿದೆ ಎಂದಿದ್ದಾರೆ.