ಭಾರತ ವೈವಿಧ್ಯತೆಯಲ್ಲಿ ಏಕತೆ

ಕಲಬುರಗಿ,ಆ.01: ಭಾರತವು ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ಸುಂದರವಾದ ರಾಷ್ಟ್ರವಾಗಿದೆ ಎಂದು ಉತ್ತರ ಪ್ರದೇಶದ ಎನ್‍ಆರ್‍ಈಸಿ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕ, ಇತಿಹಾಸ ಸಂಶೋಧಕ ಡಾ.ಮಮ್ಮದ್ ಅಕ್ರಮ ಲಾರಿ ಅವರು ಅಭಿಪ್ರಾಯ ಪಟ್ಟರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಇತಿಹಾಸ ವಿಭಾಗದವತಿಯಿಂದ ಮಂಗಳವಾರ ‘ದ ಬ್ಯೂಟಿ ಆಫ್ ಇಂಡಿಯ ಇನ್ ಇಟ್ಸ್ ಕಲ್ಚರ್’ ಎಂಬ ವಿಷಯದ ಮೇಲೆ ಒಂದು ದಿನದ ರಾಷ್ಟ್ರಮಟ್ಟದ ವಿಚಾರಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಭಾರತದ ಸಂಸ್ಕøತಿಯು ಅಗಾಧವಾಗಿ ವೈವಿಧ್ಯಮಯವಾಗಿದೆ ಮತ್ತು ಅನೇಕರಿಗೆ ಆಶ್ಚರ್ಯಕರವಾದ ಬಹಳಷ್ಟು ಅಂಶಗಳನ್ನು ಹೊಂದಿದೆ. ನೂರಾರು ವಿಭಿನ್ನ ಪ್ರಕಾರದ ಭಾಷೆಗಳು, ವಿಭಿನ್ನ ರೀತಿಯ ಜನಾಂಗೀಯ ವೇಷಭೂಷಣಗಳು ಕಂಡು ಬರುತ್ತವೆ. ಭಾರತದ ಸಂಸ್ಕøತಿಯು ಸಂಪೂರ್ಣವಾಗಿ ಅನನ್ಯ ಮತ್ತು ಇತರ ರಾಷ್ಟ್ರಗಳಿಂತ ಭಿನ್ನವಾಗಿದೆ. ನಮ್ಮ ದೇಶದಲ್ಲಿ ತುಂಬಾ ವೈವಿಧ್ಯತೆಯಿದೆ. ಪ್ರತಿ ಹೆಜ್ಜೆಯಲ್ಲೂ ವಿಭಿನ್ನ ಭಾಷೆ ಮಾತನಾಡುವ ಜನರಿದ್ದು ಭಾವನೆಗಳು ಒಂದೆ ಆಗಿವೆ. ನಮ್ಮ ಸಂಪ್ರದಾಯಗಳು ಮತ್ತು ಸಂಸ್ಕøತಿಗಳು ನಮ್ಮ ಜೀವನದಲ್ಲಿ ನಿಜವಾಗಿಯೂ ಪ್ರಮುಖ ಪಾತ್ರವನ್ನು ವಹಿಸುತ್ತವೆ ಮತ್ತು ಅದಕ್ಕಾಗಿಯೇ ಅವುಗಳನ್ನು ಸಂರಕ್ಷಿಸಬೇಕು ಮತ್ತು ಗೌರವಿಸಬೇಕು. ಎಲ್ಲಾ ಜಾತಿಯ ವಿವಿಧ ಹಬ್ಬಗಳ ಆಚರಣೆ ಬೇರೆ ಯಾವುದೇ ರಾಷ್ಟ್ರದಲ್ಲಿ ನೋಡಲು ಸಾಧ್ಯವಿಲ್ಲ. ಭಾರತದಲ್ಲಿ ಬೌದ್ಧರು, ಹಿಂದೂಗಳು, ಮುಸ್ಲಿಮರು, ಜೈನರು, ಸಿಬ್ಬರು ಧರ್ಮದಗಳು ಜನರು ವಾಸಿಸುತ್ತಿದ್ದು ನಾವೆಲ್ಲರೂ ಭಾರತೀಯುರು ಎಂಬ ಭಾವನೆ ಇದೆ. ಇಂತಹ ಸುಂದರವಾದ ದೇಶ ಇಡೀ ಜಗತ್ತಿನಲ್ಲಿ ಯಾವ ದೇಶವು ಇಲ್ಲ ಎಂದು ತಮ್ಮ ಭಾಷಣದುದ್ದಕ್ಕೂ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುರೇಶಕುಮಾರ ನಂದಗಾಂವ ಮಾತನಾಡಿ, ಭಾರತವು ಶ್ರೀಮಂತ ರಾಷ್ಟ್ರವಾಗಿದ್ದು, ವಿಭಿನ್ನವಾದ ಸಂಸ್ಕøತಿಯನ್ನು ಹೊಂದಿದೆ. ಹಲವಾರು ಧರ್ಮಗಳು, ಜಾತಿ ಜನಾಂಗದವರು ಇದ್ದರು ಎಲ್ಲರೂ ಒಂದೇ ಎನ್ನುವ ಸಂಸ್ಕøತಿ ಕಂಡು ಬರುತ್ತದೆ. ಇಲ್ಲಿಯ ಆಚರಣೆಗಳು, ಸಂಪ್ರದಾಯಗಳು ನೆರೆಹೊರೆ ರಾಷ್ಟ್ರಗಳ ಮೇಲೆ ಪ್ರಭಾವ ಬೀರಿದೆ. ಶ್ರೇಷ್ಠ ಧಾರ್ಮಿಕ ಆಚರಣೆಗಳು, ಭಾಷೆಗಳು, ಪದ್ಧತಿ ಮತ್ತು ಸಂಪ್ರದಾಯಗಳು ಅನನ್ಯತೆಗೆ ಸಾಕ್ಷಿಯಾಗಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಶ್ರೀಮತಿ ಜಾನಕಿ ಹೊಸುರ ಮಾತನಾಡಿ, ಭಾರತೀಯ ಸಂಸ್ಕøತಿಯು ಎಲ್ಲ ದೇಶಗಳಿಗಿಂತ ವಿಭಿನ್ನವಾಗಿದೆ. ಈ ಸಂಸ್ಕøತಿ, ಪರಂಪರೆಯನ್ನು ಇತಿಹಾಸ ವಿಷಯ ತಿಳಿಸುತ್ತದೆ. ಇತಿಹಾಸ ಅಂದರೆ ವಿಶಿಷ್ಟವಾದ ವಿಷಯಗಳನ್ನು ಹೊಂದಿರುವಂತದ್ದು ಎಂದು ಹೇಳಿದರು.
ವೇದಿಕೆ ಮೇಲೆ ಶರಣಬಸವೇಶ್ವರ ದೇವಸ್ಥಾನದ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕಿ ಡಾ.ನೀಲಾಂಬಿಕಾ ಶೇರಿಕಾರ, ಮಹಾವಿದ್ಯಾಲಯದ ನ್ಯಾಕ್ ಮತ್ತು ಐಕ್ಯೂಎಸಿ ಸಂಯೋಜಕಿ ಡಾ.ಪುಟ್ಟಮಣಿ ದೇವಿದಾಸ ಇದ್ದರು.
ವಿಭಾಗದ ಪ್ರಾಧ್ಯಾಪಕ ಸಂತೋಷ ಪೂಜಾರಿ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರೆ, ಮುಖ್ಯಸ್ಥೆ ಶ್ರೀಮತಿ ಸಂತೋಷಿ ಹಿಪ್ಪರಗಿ ನಿರೂಪಿಸಿ, ವಂದಿಸಿದರು. ಮಹಾವಿದ್ಯಾಲಯದ ಹಾಗೂ ವಿವಿಧ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ನಂತರ ದ ಕಲ್ಚರಲ್ ಇಂಪಾರ್ಟೆನ್ಸ್ ಆಫ್ ಕಲ್ಯಾಣ ಕರ್ನಾಟಕ ಎಂಬ ವಿಷಯ ಗೋಷ್ಠಿಯಲ್ಲಿ ಹಿರಿಯ ಪ್ರಾಧ್ಯಾಪಕ ಡಾ.ಶಂಭುಲಿಂಗ ವಾಣಿ ಮಾತನಾಡಿದರು.