ಭಾರತ ವಿಶ್ವ ಗುರುವಾಗುವ ದಿನ ದೂರವಿಲ್ಲ : ಪಾಟೀಲ

???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಭಾಲ್ಕಿ: ಜ.9:ಭಾರತ ದೇಶವು ವಿಶ್ವಗುರುವಾಗ ದಿನ ದೂರವಿಲ್ಲ. ವಿಶ್ವಗುರು ಬಸವಣ್ಣನವರ ಸಮತಾವಾದ ತತ್ವ ಮತ್ತು ಸ್ತ್ರೀ ಪೂಜ್ಯನೀಯ ರಾಜ ಶಿವಾಜಿ ಮಹಾರಾಜರ ಇತಿಹಾಸ ಜಗತ್ತಿಗೆ ಸಾರಿದಾಗ ಭಾರತ ವಿಶ್ವಗುರುವಾಗಿ ಹೊರಹೊಮ್ಮುವುದು ಎಂದು ರಾಷ್ಟ್ರ ಗೌರವ ಸಮಿತಿಯ ಸಂಚಾಲಕ ಜನಾರ್ಧನ ಪಾಟೀಲ ಹೇಳಿದರು.
ಪಟ್ಟಣದ ಕನಸೆ ಆಡತ್ ಕಚೇರಿಯಲ್ಲಿ ರವಿವಾರ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಮಹಾತ್ಮಾ ಬಸವೇಶ್ವರರ ಸಮಾತಾವಾದ ಕರ್ನಾಟಕಕ್ಕೆ ಸೀಮಿತವಾಗಿದೆ. ಬಸವಣ್ಣನವರು ವಿಶ್ವಗುರುವಾಗಿದ್ದಾರೆ. ಅವರ ತತ್ವಗಳು ಹಿಂದಿ ಭಾಷೆಯಲ್ಲಿ ಪ್ರಚುರ ಪಡಿಸಿ ದೇಶದ 14 ರಾಜ್ಯಗಳಲ್ಲಿ ಪ್ರಚಾರ ನಡೆಸಲಾಗುವುದು. ಈ ನಿಟ್ಟಿನಲ್ಲಿ ರಾಷ್ಟ್ರ ಗೌರವ ಅಭಿಯಾನ ಕರ್ನಾಟಕದ ಬೀದರನಿಂದಲೇ ಆರಂಭಿಸಲಾಗುವುದು. ಬೀದರನಿಂದ ಹೊರಟ ರಾಷ್ಟ್ರ ಗೌರವ ಅಭಿಯಾನ ದೆಹಲಿಯಲ್ಲಿ ಸಮಾವೇಶ ಗೊಳ್ಳುವುದು.
ರಾಷ್ಟ್ರ ಗೌರವ ಅಭಿಯಾನದ ಮೂಲ ಉದ್ದೇಶ ವರ್ತಮಾನ ಸಮಾಜಕ್ಕೆ ಮಹಾತ್ಮಾ ಬಸವೇಶ್ವರರ ಸಮಾತಾವಾದ ಸಂದೇಶ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಸಾರುವುದಾಗಿದೆ. ಈ ಅಭಿಯಾನಕ್ಕೆ ಯಾವುದೆ ರಾಜಕೀಯ ಸಂಭಂಧವಿಲ್ಲ, ಜನ ಸಂಯೋಗದಿಂದಲೇ ಅಭಿಯಾನ ಪ್ರಾರಂಭಿಸಲಾಗುವುದು. ಈ ಅಭಿಯಾನವು 2 ವರ್ಷಗಳ ಕಾಲ ನಿರಂತರವಾಗಿ ನಡೆಯಲಿದೆ. 21 ಭಾಷೆಗಳಲ್ಲಿ ಬಸವಣ್ಣನವರ ಸಂದೇಶ ಮೂಡಿಸಲಾಗುವುದು. ಅಭಿಯಾನವು 14 ರಾಜ್ಯಗಳಲ್ಲಿ 7000 ಕಿ.ಮೀ ವರೆಗೆ ಸಂಚರಿಸಲಿದೆ. ರಾಷ್ಟ್ರ ಗೌರವ ಸಮಿತಿಯ ರಾಷ್ಟ್ರೀಯ ಕಾರ್ಯಾಲಯ ಬೀದರನಲ್ಲಿ ಉದ್ಘಾಟಿಸಲಾಗುವುದು. ಇದಕ್ಕೆ ನೂತನ ಅಧ್ಯಕ್ಷರಾಗಿ ಭಾಲ್ಕಿಯ ಸಮಾಜ ಸೇವಕ ಯಾದವರಾವ ಕನಸೆಯವರನ್ನು ಆಯ್ಕೆಮಾಡಲಾಗಿದೆ. ಸಮಿತಿಯಲ್ಲಿ ಬೀದರಿನ ರಮೇಶ ಮಠಪತಿ, ಕಂಟೆಪ್ಪ ಗಂದಿಗುಡಿ, ಲಕ್ಷ್ಮಣರಾವ ಭೊಷಲೆ, ಸೋಮನಾಥಪ್ಪ ಅಷ್ಟೂರೆ, ಮಾತೆ ಮಹಾದೇವಿ ಪರಿವಾರದ ಗಂಗಾ ಮಾತಾಜಿ, ಬೆಂಗಳೂರಿನ ಮರಾಠಾ ಸಮಾಜದ ಮಂಜುನಾತ ಮಹಾರಾಜ ಇರುವರು. ಈ ಎಲ್ಲರ ಸಹಯೋಗದೊಂದಿಗ ಬಸವಣ್ಣನವರ ತತ್ವಗಳನ್ನು ರಾಷ್ಟ್ರದ ಎಲ್ಲಾ ಭಾಷೆಗಳಿಗೂ ಅನುವಾದಿಸಿ, ರಾಷ್ಟ್ರದಾದ್ಯಂತ ಬಸವ ತತ್ವ ಪ್ರಚಾರ ಪಡಿಸಲಾಗುವುದು. ಈ ನಿಟ್ಟಿನಲ್ಲಿ ರಾಷ್ಟ್ರ ಗೌರವ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಇದೇವೇಳೆ ರಾಷ್ಟ್ರ ಗೌರವ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕವಾದ ಯಾದವರಾವ ಕನಸೆಯವರಿಗೆ ಸಮಿತಿಯ ವತಿಯಿಂದ ಬಸವಣ್ಣನವರ ಭಾವಚಿತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಯಾದವರಾವ ಕನಸೆ, ಲಕ್ಷ್ಮಣರಾವ ಭೊಸಲೆ ಉಪಸ್ಥಿತರಿದ್ದರು.