ಭಾರತ ವಿಶ್ವಗುರುವಿನ ಸ್ಥಾನದಲ್ಲಿದೆ : ಶುಭಾಂಗಿ ಬಳತೆ

?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಭಾಲ್ಕಿ:ಜು.4: ಭಾರತ ದೇಶವು ವಿಶ್ವ ಗರುಸ್ಥಾನದಲ್ಲಿದೆ, ಗುರುವಿನ ಮೇಲೆ ನಂಬಿಕೆ ಇಡುವ ದೇಶ ನಮ್ಮ ಭಾರತವಾಗಿದೆ ಎಂದು ಉದ್ಯಮಿ ಶುಭಾಂಗಿ ಬಳತೆ ಹೇಳಿದರು.

ಪಟ್ಟಣದ ಜ್ಞಾನ ಜ್ಯೋತಿ ಶಿಕ್ಷಣ ಸಂಸ್ಥೆಯ ಭಾಲ್ಕೇಶ್ವರ ಶಾಲೆಯಲ್ಲಿ ನಡೆದ ಗುರುಪೂರ್ಣಿಮೆ, ವನಮಹೋತ್ಸವ ಹಾಗು ಸಮವಸ್ತ್ರ ವಿತರಣಾ ದಿನದ ನಿಮಿತ್ಯ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಪಂಚದ ಎಲ್ಲಾ ದೇಶಗಳಲ್ಲಿಯೂ ಭಾರತ ದೇಶ ಋಷಿಮುನಿಗಳ ದೇಶವಾಗಿದ್ದು, ಗುರುವಿಗೆ ಮಹತ್ವದ ಸ್ಥಾನ ನೀಡುವ ದೇಶವಾಗಿದೆ. ಹೀಗಾಗಿ ಇಂದು ಭಾರತ ವಿಶ್ವ ಗುರುವಾಗಿ ಹೊರಹೊಮ್ಮುತ್ತಲಿದೆ ಎಂದು ಹೇಳಿದರು. ಕಾರ್ಯನಿತರ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಮಾತನಾಡಿ, ಶಿಕ್ಷಕರು, ವಿದ್ಯಾರ್ಥಿಗಳಿಗೆ ನಿಜವಸ್ತುವಿನ ಜ್ಞಾನ ಮಾಡಿಸಿಕೊಡಬೇಕು. ಶಿಕ್ಷಕರು ಹೇಳಿದ ಪ್ರತಿಯೊಂದು ಮಗು ನಿಜವೆಂದು ತಿಳಿಯುತ್ತದೆ. ಹೀಗಾಗಿ ಯಾವುದೇ ತಪ್ಪು ಗ್ರಹಿಕೆಗೆ ಆಸ್ಪದ ಕೊಡದೇ, ನಿಜ ಸಂಗತಿಯನ್ನೇ ವಿದ್ಯಾರ್ಥಿಗಳಮುಂದೆ ಪ್ರತಿಪಾದಿಸಬೇಕು ಎಂದು ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಸಿದ್ರಾಮಯ್ಯಾ ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಶಿಕ್ಷಕ ಬಾಲಾಜಿ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇವೇಳೆ ವನಮಹೋತ್ಸವ ನಿಮಿತ್ಯ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೇ ಶಿಕ್ಷಕ ಶಿಕ್ಷಕಿಯರಿಗೆ ವಿದ್ಯಾರ್ಥಿಗಳು ಪಾದಪುಜೆ ಮಾಡಿ ಸಸಿ ವಿತರಿಸಿದರು.

ಕಾರ್ಯಕ್ರಮದಲ್ಲಿ ಶರಣಯ್ಯಾ ಸ್ವಾಮಿ, ಉಪನ್ಯಾಸಕ ಎಸ್.ರಾಠೋಡ್, ಸುವರ್ಣಾ ಬಿರಾದಾರ, ರಾಜೇಶ್ವರಿ ಸ್ವಾಮಿ, ಉಷಾ ಖಂಡ್ರೆ, ಉಮಾ ಪಾಟೀಲ, ಮಧು ಜಲದೆ, ಸಂಗೀತಾ ಭಾಲ್ಕೆ ಉಪಸ್ಥಿತರಿದ್ದರು.

ಸೋಪಾನರಾವ ಬಿರಾದಾರ ಸ್ವಾಗತಿಸಿದರು. ಶಿವಕಾಂತಾ ರುದನೂರೆ ನಿರೂಪಿಸಿದರು. ರೆವಣಪ್ಪ ಮೂಲಗೆ ವಂದಿಸಿದರು.