ಭಾರತ ವಿಶ್ವಗುರುವನ್ನಾಗಿಸಲು ಶ್ರಮಿಸೋಣ

ಹುಬ್ಬಳ್ಳಿ, ಜ 28: ಸ್ವರ್ಣಾ ಸಮೂಹ ಸಂಸ್ಥೆ ಮುಖ್ಯಸ್ಥ ಡಾ.ಸಿಎಚ್ ವಿಎಸ್‍ವಿ ಪ್ರಸಾದ ನವೀನ್ ಪಾರ್ಕ್ ನಿವಾಸಿಗಳ ಸಂಘದ ವತಿಯಿಂದ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ ಭಾರತವು ವಿಶ್ವದ ಸೂಪರ್ ಪವರ್ ಆಗಿ 3 ಸ್ಥಾನದಲ್ಲಿದೆ. ಶೀಘ್ರದಲ್ಲೇ ನಾವು ನಂ.1 ಆಗಲಿದ್ದೇವೆ ಎಂದು ಹೇಳಿದರು.
ಡಿಸಿಪಿ ರವೀಶ್ ಮಾತನಾಡಿ, ನಮ್ಮ ದೇಶವು ವಿಶ್ವದ ಶ್ರೇಷ್ಠ ಕ್ಷೇತ್ರವನ್ನು ಹೊಂದಿದ್ದು, ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರಜಾಪ್ರಭುತ್ವವನ್ನು ಅತ್ಯಂತ ಸೂಕ್ತವಾದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಎಲ್ಲ ನಾಗರಿಕರಿಗೂ ಯಾವುದೇ ಭೇದಭಾವವಿಲ್ಲದೇ ಸಮಾನ ಹಕ್ಕನ್ನು ಒದಗಿಸಿದ್ದಾರೆ. ಸರಕಾರದ ಪ್ರತಿಯೊಬ್ಬ ಅಧಿಕಾರಿಯು ತನ್ನ ಅಧಿಕಾರವನ್ನು ಬುದ್ಧಿವಂತಿಕೆಯಿಂದ ಬಳಸಬೇಕು. ನಾಗರಿಕರಿಗೆ ಅವರ ಕಷ್ಟಗಳಲ್ಲಿ ಸಹಾಯ ಮಾಡುವ ಒಬ್ಬ ವ್ಯಕ್ತಿ ಇದ್ದಾನೆ ಎಂಬ ವಿಶ್ವಾಸ ನೀಡಬೇಕು ಎಂದರು.
ಅಧ್ಯಕ್ಷ ಎನ್.ಎ. ಚರಂತಿಮಠ, ಉಪಾಧ್ಯಕ್ಷ ಅರವಿಂದ ಕಲಬುರ್ಗಿ, ಅಧ್ಯಕ್ಷ ವೈದ್ಯನಾಥನ್, ನವೀನ್ ಪಾರ್ಕ್ ಮತ್ತು ಸುತ್ತಮುತ್ತಲಿನ ನಿವಾಸಿಗಳು ಇದ್ದರು.