‘ಭಾರತ ರತ್ನ’ ಹಜಾರಿಕಾ ೯೬ನೇ ಜನ್ಮ ಹುಟ್ಟುಹಬ್ಬಕ್ಕೆ ಗೂಗಲ್ ನಮನ

ಹೈದರಾಬಾದ್, ಸೆ. ೮- ದೇಶದ ಸುಪ್ರಸಿದ್ಧ ಗಾಯಕರಾದ ದಿ. ಭೂಪೆನ್ ಹಜಾರಿಕಾ ಅವರ ೯೬ನೇ ಹುಟ್ಟುಹಬ್ಬವನ್ನು ಕಲಾತ್ಮಕವಾಗಿ ಡೂಡಲ್ ಗೂಗಲ್ ನಮನ ಸಲ್ಲಿಸಿದೆ.
ಅಸ್ಸಾಮಿ ಸಿನೆಮಾ ಮತ್ತು ಜಾನಪದ ಸಂಗೀತ ಕ್ಷೇತ್ರಕ್ಕೆ ಹಜಾರಿಕಾ ನೀಡಿರುವ ವಿಶೇಷ ಕೊಡುಗೆಗಳನ್ನು ಕಲಾತ್ಮಕವಾಗಿ ಗೂಗಲ್ ಪ್ರದರ್ಶಿಸಿದೆ. ಈ ಡೂಡಲ್‌ಅನ್ನು ಮುಂಬೈ ಮೂಲದ ಅತಿಥಿ ಕಲಾವಿದ ರುತುರಾಜ ಮಾಲಿ ಆಕರ್ಷಕವಾಗಿ ರಚಿಸಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ಭೂಪೆನ್ ಹಜಾರಿಕಾ ಅಸ್ಸಾಮಿ ಸಂಗೀತ ಮಾಂತ್ರಿಕ ಮಾತ್ರವಲ್ಲ, ಈಶಾನ್ಯ ರಾಜ್ಯಗಳ ಜಾನಪದ ಕಲಾ ಕ್ಷೇತ್ರಕ್ಕೆ ಹಾಗು ಸಾಮಾಜಿಕ ಬದಲಾವಣೆಗೆ ಅತ್ಯಂತ ವಿಭಿನ್ನ ಮತ್ತು ವಿಶಿಷ್ಟವಾದ ಕೊಡುಗೆಗಳನ್ನು ಕೊಟ್ಟವರು. ನೂರಾರು ಸಿನೆಮಾಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಇದೇ ಕಾರಣಕ್ಕೆ ಗೂಗಲ್ ಇಂದು ತನ್ನ ಡೂಡಲ್‌ನಲ್ಲಿ ಹಜಾರಿಕಾ ಅವರು ಹಾರ್ಮೋನಿಯಂ ಹಿಡಿದು ನುಡಿಸುವಂತೆ ತೋರಿಸುವ ಮೂಲಕ ಸಂಗೀತ ಪ್ರಿಯರ ಮನಗೆದ್ದಿದೆ.
ಹಜಾರಿಕಾ ಸೆಪ್ಟೆಂಬರ್ ೮, ೧೯೨೬ ರಲ್ಲಿ ಅಸ್ಸಾಂ ಸಾದಿಯಾ ಎಂಬಲ್ಲಿ ನೀಲಕಂಠ ಮತ್ತು ಶಾಂತಿಪ್ರಿಯ ಹಜಾರಿಕಾ ದಂಪತಿಗೆ ಮಗನಾಗಿ ಜನಿಸದರು ಇವರ ತಂದೆ ಮೂಲತ: ಅಸ್ಸಾಂನ ಶಿವಸಾಗರ ಜಿಲ್ಲೆಯ ನಜಿರಾ ಪಟ್ಟಣದವರು. ತಾಯ್ನಾಡು ಅಸ್ಸಾಂ. ಸಾಕಷ್ಟು ಬುಡಕಟ್ಟು ಪಂಗಡಗಳು, ದೇಶೀಯ ಗುಂಪುಗಳಾದ ಬೋಡೋ, ಕರ್ಬಿ, ಮಿಸಿಂಗ್ ಹಾಗು ಸೊನೊವಾಲ್-ಕಚಾರಿಸ್ ಮುಂತಾದವುಗಳಿಗೆ ಹೆಸರುವಾಸಿಯಾದ ಅಸ್ಸಾಂ ರಾಜ್ಯದವರು ಆಗಿದ್ದರು.
ಹಜಾರಿಕಾ ತಮ್ಮ ಬಾಲ್ಯದಲ್ಲಿ ರಾಜ್ಯದಲ್ಲಿ ಹರಿಯುವ ಬೃಹತ್ ನದಿ ಬ್ರಹ್ಮಪುತ್ರ ಕುರಿತಾದ ಜಾನಪದ ಸಂಗೀತ, ಕಥೆಗಳನ್ನು ಕೇಳಿ, ಆನಂದಿಸಿಯೇ ಬೆಳೆದವರು. ೬ ದಶಕಗಳ ಕಾಲ ಸಂಗೀತ ಸಾಧಕನಿಗೆ. ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ದಾದಾ ಸಾಹೆಬ್ ಪಾಲ್ಕೆ ಪ್ರಶಸ್ತಿ, ಪದ್ಮಶ್ರಿ ಮತ್ತು ಪದ್ಮಭೂಷಣ ಪ್ರಶಸ್ತಿಗಳು ಲಭಿಸಿವೆ. ೨೦೧೯ ರಲ್ಲಿ ಭಾರತ ಸರ್ಕಾರ ಮರಣೋತ್ತರವಾಗಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ’ಭಾರತ ರತ್ನ’ವನ್ನೂ ನೀಡಿ ಪುರಸ್ಕರಿಸಲಾಗಿದೆ