ಭಾರತ ರತ್ನ ಅಂಬೇಡ್ಕರ ಜಯಂತ್ಯೋತ್ಸವ

ಇಂಡಿ: ಎ.15:ಪಟ್ಟಣದ ಪಂಚಶೀಲ ನಗರದ ಮುಖ್ಯ ರಸ್ತೆಯಲ್ಲಿ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರವರ ಜಯಂತೋತ್ಸವ ಆಚರಿಸಲಾಯಿತು,

ಈ ಸಂಧರ್ಬದಲ್ಲಿ ದಲಿತ ಸಮನ್ವಯ ಸಮಿತಿ ತಾಲೂಕಾ ಅಧ್ಯಕ್ಷ ಶಿವಾನಂದ ಮೂರಮನ್ ಮಾತನಾಡಿ ವಿಶ್ವದ ಎಲ್ಲಾ ರಾಷ್ಟ್ರಗಳಿಗಿಂತ ನಮ್ಮ ದೇಶದ ಸಂವಿಧಾನ ವಿಶಿಷ್ಠವಾಗಿದ್ದು ಬೃಹತ್ ಸಂವಿಧಾನವಾಗಿದೆ. ಸ್ವತಂತ್ರ ಪೂರ್ವದಲ್ಲಿ ನಮ್ಮ ದೇಶದಲ್ಲಿ ಹಾಗೂ ಸಮಾಜದಲ್ಲಿ ಸೇವೆ ಸೌಲಭ್ಯಗಳು ಹಕ್ಕುಗಳು ಒಂದೇ ಜಾತಿ ಜನಾಂಗಕ್ಕೆ ಸೀಮಿತವಾಗಿದ್ದವು ಆದರೆ ಸ್ವಾತಂತ್ರ್ಯ ಬಂದ ನಂತರ ಡಾ.ಬಿ.ಆರ್ ಅಂಬೇಡ್ಕರವರ ದೂರದೃಷ್ಠಿಯಿಂದ ಹಾಗೂ ಸಮಾಜಮುಖಿ ಚಿಂತನೆಯಿಂದ ಸಂವಿಧಾನ ರೂಪಗೊಂಡಿತ್ತು.

ಎಲ್ಲಾ ಧರ್ಮ ಜಾತಿ ಜನಾಂಗಕ್ಕೆ ಉದ್ಯೋಗ ,ಹಕ್ಕು, ಮೀಸಲಾತಿ, ಸಮಾನತೆ ಸಂವಿಧಾನದಿಂದಲೆ ನೀಡಲಾಯಿತು. ಈ ನಿಟ್ಟಿನಲ್ಲಿ ಯುವಕರು ಡಾ.ಬಿ.ಆರ್ ಅಂಬೇಡ್ಕರವರ ರಚಿಸಿರುವ ಸಂವಿಧಾನದ ಮಹತ್ವ ಅರಿತು ಸಂವಿಧಾನದ ಹಕ್ಕುಗಳನ್ನು ಸದುಪಯೋಗ ಪಡೇಯಬೇಕು ಎಂದು  ಹೇಳಿದರು.
  ಪಿ.ಎಸ್ ಆಯ್ ಶಿರೂರ, ಪುರಸಭೆ ಸದಸ್ಯ ವಿಜಯಕುಮಾರ ಮೂರಮನ್,  ಡಾ. ರಾಜಶೇಖರ ಕೊಳೇಕರ್,ನಾಗೇಶ ತಳಕೇರಿ, ವಿಶ್ರಾಂತ ಉಪನ್ಯಾಸಕ ಚನ್ನಪ್ಪ ಹಿಟ್ನಳ್ಳಿ,  ಕೃಷ್ಣಾ ಸಿಂದಗಿ, ವಿಶ್ರಾಂತ ಸೈನಿಕ ಗಾಯಕವಾಡ, ಹರೀಶ ಹಿಟ್ನಳ್ಳಿ, ರಾಹುಲ್ ಮನಗೂಳಿ, ಮಂಜು ರೇವಣ್ಣವರ್,ಉಪನ್ಯಾಸಕ  ಸುನೀಲ ಡಾಂಗೆ,  ಮಲಕಪ್ಪ ಬಜೇಂತ್ರಿ, ಶ್ರೀಮಂತ ಬನಸೋಡೆ, ಅಶೋಕ ಗೋಣಸಗಿ, ಸಂಜು ಪೋದ್ದಾರ ಸೇರಿದಂತೆ ಪಂಚಶೀಲ ನಗರದ ಯುವಕರು ,ಗಣ್ಯರು ಹಿರಿಯರು ಇದ್ದರು.