ಭಾರತ ಮುಕ್ತಿ ಮೋರ್ಚಾ ಬೆಂಬಲಿತ ಗ್ರಾ.ಪಂ.ಸದಸ್ಯರಿಗೆ ಸನ್ಮಾನ

ಚಿಂಚೋಳಿ,ಜ.7- ಭಾರತ ಮುಕ್ತಿ ಮೋರ್ಚಾ ಸಂಘಟನೆಯ ಕಾರ್ಯಾಲಯದಲ್ಲಿ ಸಂಘಟನೆಯ ಬೆಂಬಲಿತ ಅಭ್ಯರ್ಥಿಗಳಾದ ಉಮೇಶ ದೋಟಿಕೊಳ .ಬಕ್ಕಮ್ಮಾ ಗಾರಂಪಳ್ಳಿ. ಪ್ರೇಮಲತಾ ತಾಜಲಪೂರ.ತಿಪ್ಪಣ್ಣಾ ಮಾಳಗಿ ತಾಜಲಪೂರ ಗೌತಮ್ ದೋಟಿಕೊಳ ಕಾಶಿರಾಮ್ ದೇಗಲ್ಮಡಿಯವರಿಗೆ ಸಂಘಟನೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ನೂತನ ಗ್ರಾಪಂ ಸದಸ್ಯರು, ಸುಮಾರು ವರ್ಷಗಳಿಂದ ಶೈಕ್ಷಣಿಕ ಸಾಮಜಿಕ ಮೌಡ್ಯತೆಯ ಅಸಮಾನತೆಯನ್ನು ಹೊಗಲಾಡಿಸಲು ತ್ಯಾಗ ಬಲಿಧಾನ ಮಾಡಿದ ಮಾಹಪುರುಷರ ಜೀವನ್ ಸಂಧೇಶ ಅಭಿಯಾನದ ಮುಖಾಂತರ ಪ್ರತಿ-ಹಳ್ಳಿ ಹಳ್ಳಿಗಳಗೆ ಜನಜಾಗ್ರತಿ ಮೂಡಿಸುತ್ತ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುತ್ತ ಬರುತ್ತಿರುವ ಭಾರತ ಮುಕ್ತಿ ಮೋರ್ಚಾ ಸಂಘಟನೆಯನ್ನು ಗ್ರಾಮಸ್ಥರು ಗುರುತಿಸಿ ಆಶಿರ್ವಾದ ನೀಡಿದ್ದಾರೆ ಎಂದರು.
ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ನಡೆದ ಚುನಾವಣೆಯಲ್ಲಿ ವಿಭಿನ್ನ ಪ್ರನಾಳಿಕೆಗಳೊಂದಿಗೆ ಕಣಕ್ಕಿಳಿದು ಜಯಬೇರಿಯಾಗಿದ್ದು, ಸಂಘಟನೆಗಳ ಯುವಕರಿಗೆ ಸ್ಪೂರ್ತಿ ತಂದಿದೆ. ಪ್ರಸ್ತುತ ಚುನಾವಣೆಗಳಲ್ಲಿ ಹಣ.ಹೆಂಡದ ಆಮಿಷಕ್ಕೊಳಗಾಗುವ ಜನರು ನಮ್ಮ ಜನಪರ ಸಮಾಜಪರ ಸೇವೆಯನ್ನು ಕಂಡು ಜನರು ಆರ್ಶಿವಾದ ಮಾಡಿರುವುದು ನಮಗೆ ಸ್ಪೂರ್ತಿ ತಂದಿದೆ ಎಂದರು.
ಈ ಸಂದರ್ಭದಲ್ಲಿ ಶಶಿಕಲಾ ಪವಾರ್ ಸುಭಾಷ್ ಶೀಲವಂತ .ಭಾರತ ಮುಕ್ತಿ ಮೋರ್ಚಾ ಸಂಘಟನೆಯ ಮುಖಂಡರಾದ ಮಾರುತಿ ಗಂಜಗಿರಿ. ಮೌನೇಶ್ ಗಾರಂಪಳ್ಳಿ. ಗೋಪಾಲ್ ಪೂಜಾರಿ. ಉಮೇಶ ಹಲಗಿ. ರಾಜು ಬೇನೂರ್. ರಾಜು ಯಲಕಪಳ್ಳಿ. ವಿಷ್ಣುವರ್ಧನ್ ಚಿಮ್ಮನಕಟ್ಟಿ. ಮತ್ತು ಅನೇಕ ಭಾರತ ಮುಕ್ತಿ ಮೋರ್ಚಾ ಸಂಘಟನೆ ಮುಖಂಡರು ಉಪಸ್ಥಿತರಿದ್ದರು