ಭಾರತ ಭದ್ರತೆಗಾಗಿ ಬಿಜೆಪಿ ಪಕ್ಷವನ್ನು ಬೆಂಬಲಿಸಿ

ರಾಯಚೂರು,ಏ.೧೫ – ಭಾರತ ಭದ್ರತೆಗಾಗಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ತೆಲಂಗಾಣದ ಮಾಜಿ ಸಚಿವ ರವೀಂದ್ರನಾಯಕ್ ಘೇರಾವತ್ ಹೇಳಿದರು.
ಅವರಿಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರನ್ನು ವಿಶ್ವವೇ ಮೆಚ್ಚಿದೆ.ಅವರ ನೇತೃತ್ವದಲ್ಲಿ ಅಂತ್ಯದಲ್ಲಿರುವ ವ್ಯಕ್ತಿಗೂ ಸರಕಾರದ ಫಲ ದೊರೆಯಬೇಕೆಂಬುದು ಅವರ ಆಶಯವಾಗಿದೆ.ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಗ್ಯಾಸ್ ಬೆಲೆ ಹೆಚ್ಚಳ, ಪೆಟ್ರೋಲ್ ಲೀಟರ್‌ವೊಂದಕ್ಕೆ ೧೦೦ ರೂ.ಅಧಿಕ ಹಣ ತೆರಬೇಕು.ದಲಿತರ ಅನುದಾನ ಕಡಿತ, ಎಸ್.ಸಿ/ಎಸ್.ಟಿ ಮಕ್ಕಳ ವಿದ್ಯಾರ್ಥಿ ವೇತನ ಸ್ಥಗಿತ ಮಾಡಿರುವುದರ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಇವೆಲ್ಲ ವಿರೋಧಪಕ್ಷಗಳು ಆರೋಪವಷ್ಟೇ ಎಂದು ಉತ್ತರಿಸಿದರು.
ಜಿಲ್ಲೆಯ ೭ ವಿಧಾನಸಭಾ ಕ್ಷೇತ್ರಗಳಲ್ಲಿ ೫ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ.ಸಬ್ ಕಾ ಸಾಥ್ ,ಸಬ್ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಇದು ಬಿಜೆಪಿ ಧ್ಯೇಯ ವಾಕ್ಯವಾಗಿದೆ.ಅದರಂತೆ ಸರಕಾರ ಸರ್ವರ ಏಳಿಗೆಗೆ ಶ್ರಮಿಸುತ್ತಿದೆ. ಭಾರತೀಯ ಜನತಾ ಪಕ್ಷ ಆದಿವಾಸಿ ಮಹಿಳೆಯನ್ನು ರಾಷ್ಟಪತಿ ಹುದ್ದೆ ಪಡೆಯುವಂತೆ ಮಾಡಿದ್ದು ಅದಕ್ಕೂ ಮೊದಲು ದಲಿತರೊಬ್ಬರನ್ನು ರಾಷ್ಟಪತಿಗಳನ್ನಾಗಿಸಿತ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಂಕರಗೌಡ ಹರವಿ, ವಿಷ್ಣುವರ್ಧನ ರೆಡ್ಡಿ, ಶಾಂತಕುಮಾರ, ಕೃಷ್ಣಾ ನಾಯಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.