ಭಾರತ ಬೆಳಗಿದ ಬಾಬಾ ಸಾಹೇಬ್ ವಿಶೇಷ ಕಾರ್ಯಕ್ರಮ 11 ರಂದು:ಸುರೇಶ ಲೇಂಗಟಿ

ಕಲಬುರ್ಗಿ,ಎ,09: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಕಮಲಾಪುರ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ 132 ನೇ ಜಯಂತಿ ನಿಮಿತ್ತ
ಭಾರತ ಬೆಳಗಿದ ಬಾಬಾ ಸಾಹೇಬ್ ವಿಶೇಷ ಕಾರ್ಯಕ್ರಮ ದಿನಾಂಕ 11-04-2023; ರಂದು ಮಹಾಗಾಂವ ಕ್ರಾಸ್ ನಲ್ಕಿರುವ ಚಾಣುಕ್ಯ ಪ್ರಾಥಮಿಕ ಶಾಲೆಯಲ್ಲಿ ; ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ತಿಳಿಸಿದ್ದಾರೆ.ಮಹಾಗಾಂವ ಕ್ರಾಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಶರಣಪ್ಪ ಮಾಳಗಿ ವಿಶೇಷ ಉಪನ್ಯಾಸ ನೀಡಲಿದ್ದು, ಕಸಾಪ ಅಧ್ಯಕ್ಷ ಸುರೇಶ ಲೇಂಗಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ ಪೆÇ್ರ.ಯಶವಂತರಾಯ ಅಷ್ಟಗಿ ಕಸಾಪ ಜಿಲ್ಲಾ ಘಟಕದ ಪದಾಧಿಕಾರಿಗಳಾದ
ರಾಜೇಂದ್ರ ಮಾಡಬೂಳ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.
ಡಾ.ಅಂಬೇಡ್ಕರ್ ಅವರ 132 ನೇ ಜಯಂತೋತ್ಸವ ಸಮಿತಿಯ ತಾಲೂಕು ಅಧ್ಯಕ್ಷರಾದ ಶರಣು ಗೌರೆ, ವಿದ್ಯಾಧರ ಮಾಳಗೆ,ಕಾಳಗಿ ಕಸಾಪ ತಾಲೂಕು ಅಧ್ಯಕ್ಷ ಸಂತೋಷ ಕುಡ್ಡಳ್ಳಿಮಹಾಗಾಂವ ಕ್ರಾಸ್ ಚಾಣುಕ್ಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಸಿದ್ದರಾಜ ಲೇಂಗಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಹಾಗಾಂವ ಕಸಾಪ ವಲಯ ಅಧ್ಯಕ್ಷ ಅಂಬಾರಾಯ ಮಡ್ಡೆ,ಕಸಾಪ ಗೌರವ ಕಾರ್ಯದರ್ಶಿಗಳಾದ ರವೀಂದ್ರ ಬಿಕೆ ,ಪ್ರಶಾಂತ ಮಾನಕರ,ಆನಂದ ವಾರಿಕ್ , ಚೇತನ ಮಹಾಜನ ಕಸ್ತೂರಿಬಾಯಿ ರಾಜೇಶ್ವರ, ನೇತ್ರಾವತಿ ರಾಂಪೂರೆ ಮಲ್ಲಿನಾಥ ಅಂಬಲಗಿ, ತುಳಸಿಬಾಯಿ ರಾಠೋಡ ಸಂಜುಕುಮಾರ ನಾಟೀಕಾರ, ಫಯಾಜ್ ಕಮಲಾಪುರ ಇತರರು ಭಾಗವಹಿಸಲಿದ್ದಾರೆ.