ಭಾರತ- ಬಾಂಗ್ಲಾ ಇಂಧನ ಮಾರ್ಗ ಲೋಕಾರ್ಪಣೆ

ನವದೆಹಲಿ/ ಢಾಕಾ.ಮಾ.೧೮-ಭಾರತ ಬಾಂಗ್ಲಾದೇಶ ನಡುವಿನ ಇಂಧನ ಪೂರೈಕೆಯ “ಪೈಪ್‌ಲೈನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಇಂದು ಸಂಜೆ ಚಾಲನೆ ನೀಡಲಿದ್ದಾರೆ.
ಉಭಯ ದೇಶಗಳ ಪ್ರಧಾನಿಗಳು ಒಟ್ಟಾರೆ ೩೭೭ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಪೈಪ್ ಲೈನ್ ಅನ್ನು ವರ್ಚುವಲ್ ಮೂಲಕ ಸೇವೆಗೆ ಸಮರ್ಪಿಸಲಿದ್ದಾರೆ.
ಬಾಂಗ್ಲಾದೇಶದ ಭಾಗದಲ್ಲಿ ಬರುವ ಪೈಪ್ ಭಾಗವನ್ನು ಹಾಕಲು ೨೮೫ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇಂದು ಉಭಯ ದೇಶಗಳ ಪ್ರಧಾನಿಗಳು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ.
ಎರಡೂ ದೇಶಗಳ ನಡುವಿನ ಮೊದಲ ಗಡಿಯಾಚೆಗಿನ ಪೈಪ್‌ಲೈನ್ ಆಗಿದ್ದು, ಅಂದಾಜು ೩೭೭ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.ಒಟ್ಟು ವೆಚ್ಚದಲ್ಲಿ ಬಾಂಗ್ಲಾದೇಶದ ಭಾಗದಲ್ಲಿ ೨೮೫ ಕೋಟಿ ರೂ.ಗಳ ವೆಚ್ಚವನ್ನು ಒಳಗೊಂಡಿದೆ.
“ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಭಾರತ-ಬಾಂಗ್ಲಾದೇಶ ಸ್ನೇಹ ಪೈಪ್‌ಲೈನ್ ಅನ್ನು ಸಂಜೆ ಉದ್ಘಾಟಿಸಲಿದ್ದಾರೆ ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಬಾಂಗ್ಲಾದೇಶದ ಭಾಗದಲ್ಲಿ ಸುಮಾರು ೨೮೫ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಪೈಪ್‌ಲೈನ್‌ನ ವೆಚ್ಚವನ್ನು ಭಾರತ ಸರ್ಕಾರ ಭರಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಪೈಪ್‌ಲೈನ್ ವರ್ಷಕ್ಕೆ ಒಂದು ಮಿಲಿಯನ್ ಮೆಟ್ರಿಕ್ ಟನ್ ಹೈಸ್ಪೀಡ್ ಡೀಸೆಲ್ ಅನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಉತ್ತರ ಬಾಂಗ್ಲಾದೇಶದ ಏಳು ಜಿಲ್ಲೆಗಳಿಗೆ ಆರಂಭದಲ್ಲಿ ಹೆಚ್ಚಿನ ವೇಗದ ಡೀಸೆಲ್ ಪೂರೈಸಲು ಸಹಕಾರಿಯಾಗಲಿದೆ ಎಂದಿದೆ.
“ಭಾರತ-ಬಾಂಗ್ಲಾದೇಶ ಸ್ನೇಹ ಪೈಪ್‌ಲೈನ್‌ನ ಕಾರ್ಯಾಚರಣೆಯು ಸುಸ್ಥಿರ, ವಿಶ್ವಾಸಾರ್ಹ, ವೆಚ್ಚ-ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಮೋಡ್ ಅನ್ನು ಭಾರತದಿಂದ ಬಾಂಗ್ಲಾದೇಶಕ್ಕೆ ಸಾಗಿಸಲಿದೆ. ಮತ್ತು ಉಭಯ ದೇಶಗಳ ನಡುವೆ ಇಂಧನ ಭದ್ರತೆಯಲ್ಲಿ ಸಹಕಾರ ಇನ್ನಷ್ಟು ಹೆಚ್ಚಳವಾಗಲಿದೆ.