ಭಾರತ ಬಂದ್ ಪೂರ್ವಭಾವಿ ಸಭೆ

ಧಾರವಾಡ, ಸೆ 24: ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಸೆಪ್ಟಂಬರ್ 27 ಭಾರತ್ ಬಂದ್ ಯಶಸ್ವಿಗೊಳಿಸುವಂತೆ ಧಾರವಾಡದಲ್ಲಿ ಸಂಯುಕ್ತ ಹೋರಾಟಕರ್ನಾಟಕ ಧಾರವಾಡದ ವತಿಯಿಂದ ಪೂರ್ವಭಾವಿಸಭೆ ನಡೆಯಿತು.
ಸಭೆಯಲ್ಲಿ ಸೆ.27 ಭಾರತ್ ಬಂದ್ ಹಿನ್ನೆಲೆಯಲ್ಲಿ ಧಾರವಾಡ ಬಂದ್ ಯಶಸ್ವಿಗೋಳಿಸಲು ಸಭೆಯಲ್ಲಿ ಸೇರಿದ್ದ ರೈತ, ದಲಿತ, ಕಾರ್ಮಿಕ, ಕನ್ನಡ ಪರ ವಿದ್ಯಾರ್ಥಿ-ಯುವಜನ ಮಹಿಳಾ ಸಂಘಟನೆಗಳ ನಾಯಕರಗಳು ಧಾರವಾಡ ಜನತೆಯಲ್ಲಿ ಧಾರವಾಡ ಬಂದ್ ಯಶಸ್ವಿಗೊಳಿಸಲು ಮನವಿ ಮಾಡಲು ನಿರ್ಧರಿಸಿದರು.
ಸಭೆಯ ಅಧ್ಯಕ್ಷ ಮಂಡಳಿಯನ್ನು ಜನಾಂದೋಲನ ಮಹಾ ಮೈತ್ರಿಯ ನಾಯಕರು ಮತ್ತು ಸಿಎಫ್‍ಡಿಯ ಅಖಿಲ ಭಾರತ ಅಧ್ಯಕ್ಷರಾದ ಎಸ್.ಆರ್.ಹಿರೇಮಠ ರೈತ ಸೇನಾ ಕರ್ನಾಟಕದ ರಾಜ್ಯ ಅಧ್ಯಕ್ಷರಾದ ಎಸ್.ಆರ್.ಅಂಬಲಿ ವಹಿಸಿದ್ದರು.
ಸಭೆಯಲ್ಲಿ ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಲ್ಮೇಶ ಲಿಗಾಡೆ, ರೈತ ಕೃಷಿ ಕಾರ್ಮಿಕ ಸಂಘಟನೆಯ (ಆರ್‍ಕೆಎಸ್) ಜಿಲ್ಲಾಧ್ಯಕ್ಷÀ ಲಕ್ಷ್ಮಣ ಜಡಗಣ್ಣವರ, ಸಿಟಿಜನ್ ಫಾರ್ ಡೆಮಾಕ್ರಸಿಯ ರಾಜ್ಯ ಕಾರ್ಯದರ್ಶಿ ಡಾ.ವೆಂಕನಗೌಡ ಪಾಟೀಲ, ಭಾರತರತ್ನ ಡಾ.ಬಾಬಾಸಾಹೇಬ ಅಂಬೇಡ್ಕಡ್ ಲೀಡ್‍ಕರ್ ಸಂಘದ ಅಧ್ಯಕ್ಷ ಅಶೋಕ ಬಂಡಾರಿ, ಆಟೋ ಚಾಲಕರ ಸಂಘದ ಅಧ್ಯಕ್ಷ ಜೀವನ್ ವುತ್ಕುರಿ, ಎಐಯುಟಿಯುಸಿ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ, ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಐ.ಈಳಿಗೇರ, ಎಐಟಿಯುಸಿ ಜಿಲ್ಲಾ ಮುಖಂಡರಾದ ಜಿ.ಎಚ್.ಕರಿಯಣ್ಣವರ, ಎಐಡಿ ವಾಯ್ ಒ ನ ಜಿಲ್ಲಾ ಅಧ್ಯಕ್ಷ ಭವಾನಿಶಂಕರ ಗೌಡರ ,ಎಐಡಿಎಸ್‍ಒ ಜಿಲ್ಲಾ ಅಧ್ಯಕ್ಷ ಮಹಾಂತೇಶ ಬಿಳೂರು, ಎ ಐ ಎಮ್ ಎಸ್ ಎಸ್ ಜಿಲ್ಲಾ ಉಪಾಧ್ಯಕ್ಷರಾದ ಗಂಗಾ ಕೋಕರೆ, ಕರ್ನಾಟಕ ರಾಜ್ಯ ರೃತ ಸಂಘದ ರವಿರಾಜ ಕಾಂಬ್ಳೆ ,ಶರಣು ಗೋನವಾರ ಮುಂತಾದವರು ಭಾಗವಹಿಸಿದ್ದರು.