ಭಾರತ ಬಂದ್ ನೀರಸ :ಪ್ರತಿಭಟನೆಗೆ ಸೀಮಿತ

ರಾಯಚೂರು.ಮಾ.೨೬-ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ,ಕಾರ್ಮಿಕ ವಿರೋಧಿ ಮಸೂದೆಗಳನ್ನು ವಾಪಸ್ ಪಡೆಯಲು ಒತ್ತಾಯಿಸಿ ವಿವಿಧ ಸಂಘಟನೆಗಳು ಭಾರತ ಬಂದ್ ಗೆ ಕೊಟ್ಟಿದು ಜಿಲ್ಲೆಯಲ್ಲಿ ಬಂದ್ ನಿರಾಸವಾಯಿತು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ಕಾರ್ಮಿಕ ವಿರೋಧಿ ಮಸೂದೆಗಳನ್ನು ಹಿಪಡೆಯಲು ಅಖಿಲ ಭಾರತ ಕಿಸಾನ್ ಮೋರ್ಚಾ ಮತ್ತು ಸಂಯುಕ್ತ ಹೋರಾಟ ಕರ್ನಾಟಕ ರಾಜ್ಯ ಸಮಿತಿ ಭಾರತ್ ಬಂದ್ ಗೆಕರೆ ಕೊಟ್ಟಿದ್ದು ಸಂಯುಕ್ತ ಹೋರಾಟ ಜಿಲ್ಲಾ ಸಮಿತಿ ಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಆದರೆ ಜಿಲ್ಲೆಯಲ್ಲಿ ಬಂದ್ ಗೆ ಯಾವುದೇ ಅಂಗಡಿ ಮಾಲೀಕರು,ಸಾರ್ವಜನಿಕರು,ಸಾರಿಗೆಯವರು ಬೆಂಬಲ ನೀಡದೆ ದಿನನಿತ್ಯದ ಕೆಲಸಕ್ಕೆ ತೆರಳಿದರು.
ರೈತವಿರೋಧಿ ಕಾರ್ಪೋರೇಟ್ ಪರ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳು ಹಾಗೂ ವಿದ್ಯುತ್ ಮಸೂದೆ ೨೦೨೦ ಕಾಯ್ದೆ ಕೂಡಲೇ ರದ್ದಾಗಬೇಕು ಕೃಷಿ ಭೂಮಿಗಳನ್ನು ಕಾರ್ಪೋರೇಟ್ ಕಂಪನಿಗಳಿಗೆ ನೀಡುವ ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ೨೦೨೦ ರದ್ದುಪಡಿಸಬೇಕು.ಕೃಷಿ ಮಾರುಕಟ್ಟೆಗಳನ್ನು ಕಾರ್ಪೋರೇಟ್ ಕಂಪನಿಗಳಿಗೆ ಒಪ್ಪಿಸುವ ರಾಜ್ಯ ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿ ೨೦೨೦ ರದ್ದುಪಡಿಸಬೇಕೆಂದು ಒತ್ತಾಯಿಸಿದರು.
ರೈತವಿರೋಧಿ,ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು.ಎಲ್ಲಾ ಕೃಷಿ ಉತ್ಪನ್ನಗಳಿಗೆ ಡಾ. ಎಂ.ಎಸ್ .ಸ್ವಾಮಿನಾಥನ್ ವರದಿ ಶಿಫಾರಸ್ಸು ಅನ್ವಯ ಉತ್ಪಾದನೆ ವೆಚ್ಚದ ಮೇಲೆ ಶೇ ೫೦ ರಷ್ಟು ಲಾಭಂಶ ಸೇರಿಸಿ ಕನಿಷ್ಠ ಬೆಂಬಲ ಬೆಲೆ ಎಂ.ಎಸ್.ಪಿ ಖಾತ್ರಿ ಮಾಡುವ ಕಾನೂನು ರಾಜ್ಯ ಕೇಂದ್ರ ಸರ್ಕಾರಗಳು ಅಂಗೀಕರಿಸಿ ಜಾರಿಗೊಳಿಸಬೇಕು.ರೈತರು,ಕೃಷಿ ಕೂಲಿಕಾರರು ದಲಿತರು , ಅಲ್ಪಸಂಖ್ಯಾತರು , ಹಿಂದುಳಿದವರ್ಗದವರು ಮತ್ತು ಮಹಿಳೆಯರ ಎಲ್ಲಾ ರೀತಿಯ ಸಾಲ ಮನ್ನಾ ಮಾಡಬೇಕು . ಈ ಎಲ್ಲರಿಗೆ ಅಗತ್ಯದಷ್ಟು ಸಾರ್ವಜನಿಕರಿಗೆ ಸಾಲ ದೊರೆಯುವಂತೆ ಮತ್ತು ಪ್ರಕೃತಿವಿಕೋಪಗಳ ಕಾರಣದಿಂದ ನಷ್ಟ ಹೊಂದಿದಾಗಲೆಲ್ಲಾ ಋಣಮುಕ್ತ ಹೊಂದಲು ಕೇರಳ ಮಾದರಿಯಲ್ಲಿ ಋಣಮುಕ್ತ ಕಾಯ್ದೆ ಕಸಬುದಾರರು ಕಾರ್ಮಿಕರು,ಜಾರಿಗೊಳಿಸಬೇಕು.೨೯ ಕಾರ್ಮಿಕ ಕಾನೂನುಗಳನ್ನು ೦೪ ಸಮಿತಿಗಳಾಗಿ ಮಾರ್ಪಡಿಸುವ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆ.ಜಿ.ವೀರೇಶ್, ಸಿ.ಹೆಚ್.ರವಿಕುಮಾರ, ಈ.ರಂಗನಗೌಡ ಹೆಚ್.ಪದ್ಮಾ ,ಜಿಂದಪ್ಪ ವಡ್ಡರು, ಎಸ್.ಮಾರೆಪ್ಪ, ರಾಮಣ್ಣ ಜಾನೇಕಲ್ ಅಸ್ಲಂಪಾಶ, ಡಿ.ಎಸ್.ಶರಣಬಸವ, ರಾಮಬಾಬು, ಶ್ರೀನಿವಾಸ ಕಲವಲದೊಡ್ಡಿ, ಅಂಜಿನಯ್ಯ, ಮಲ್ಲನಗೌಡ ಪಾಟೀಲ್ ಇನ್ನಿತರರು ಉಪಸ್ಥಿತರಿದ್ದರು.