ಭಾರತ ಪ್ರವಾಸ ಕೈಬಿಡಿ ಅಮೆರಿಕಾ ಸಲಹೆ

ನವದೆಹಲಿ, ಏ. ೨೦- ಭಾರತದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕಾ ತನ್ನ ನಾಗರಿಕರಿಗೆ ಭಾರತಕ್ಕೆ ಭೇಟಿ ನೀಡದಿರುವಂತೆ ಸಲಹೆ ಮಾಡಿದೆ.
ಭಾರತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ. ಹಾಗಾಗಿ ಆದಷ್ಟು ಭಾರತ ಪ್ರಯಾಣವನ್ನು ತಪ್ಪಿಸಿ ಎಂದು ಅಮೆರಿಕಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಸಲಹೆ ಮಾಡಿದೆ.
ಅಮೆರಿಕಾದ ನಾಗರಿಕರು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದರೂ ಭಾರತ ಭೇಟಿಯಿಂದ ರೂಪಾಂತರ ವೈರಸ್ ತಗಲುವ ಅಪಾಯ ಹೆಚ್ಚಿದೆ. ಹಾಗಾಗಿ ಆದಷ್ಟು ಭಾರತಕ್ಕೆ ತೆರಳುವುದನ್ನು ಸದ್ಯಕ್ಕೆ ಕೈಬಿಡಿ ಎಂದು ಅಮೆರಿಕಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ನಾಗರಿಕಿರಗೆ ಕಿವಿ ಮಾತು ಹೇಳಿದೆ.
ಭಾರತ ಪ್ರಯಾಣ ಅತಿ ಅನಿವಾರ್ಯ ಎಂದಾದರೆ ಪ್ರಯಾಣಕ್ಕೂ ಮೊದಲು ಸಂಪೂರ್ಣವಾದಲಸಿಕೆ ಪಡೆಯಿರಿ. ಸುರಕ್ಷತಾ ಕ್ರಮಗಳನ್ನು ಪಾಲಿಸಿ ಭಾರತಕ್ಕೆ ಭೇಟಿ ನೀಡಿ ಎಂದು ಸಿಡಿಸಿ ತಿಳಿಸಿದೆ.
ಬ್ರಿಟನ್ ದೇಶವೂ ಸಹ ಭಾರತದಿಂದ ಬರುವ ಪ್ರಯಾಣಿಕರ ಮೇಲೆ ನಿರ್ಬಂಧ ಹೇರಿದೆ. ಬ್ರಿಟನ್ ಭಾರತವನ್ನು ಕೆಂಪುಪಟ್ಟಿಗೆ ಸೇರಿಸಿದ್ದು,
ಭಾರತದಿಂದ ಬ್ರಿಟನ್ ಅಥವಾ ಐರೀಷ್ ಪ್ರಜೆಗಳನ್ನು ಹೊರತುಪಡಿಸಿ ಬೇರೆ ಯಾರೂ ಬ್ರಿಟನ್‌ಗೆ ಬರುವುದನ್ನು ಇಂಗ್ಲೆಡ್ ಸರ್ಕಾರ ನಿಷೇಧ ಹೇರಿದೆ.