ಒಟ್ಟಾವ, ಸೆ.೨೦- ಖಲಿಸ್ತಾನ್ ನಾಯಕನ ಹತ್ಯೆ ವಿವಾದದ ಹಿನ್ನೆಲೆಯಲ್ಲಿ ಭಾರತಕ್ಕೆ ಪ್ರಯಾಣ ಬೆಳೆಸುವಾಗ ಎಚ್ಚರಿಕೆ ವಹಿಸಿ ಅದರಲ್ಲಿಯೂ ಜಮ್ಮು ಕಾಶ್ಮೀರ ಮತ್ತು ಮಣಿಪುರಕ್ಕೆ ಭೇಟಿ ನೀಡದಂತೆ ತನ್ನ ನಾಗರಿಕರಿಗೆ ಕೆನಡಾ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ದೇಶಾದ್ಯಂತ ಭಯೋತ್ಪಾದಕ ದಾಳಿಯ ಬೆದರಿಕೆಯಿಂದಾಗಿ ಭಾರತದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಿ ಎಂದು ಕೆನಡಾದ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸಂದೇಶದಲ್ಲಿ ಈ ವಿಷಯ ತಿಳಿಸಿದೆ.
ಕೆನಡಾ ಸರ್ಕಾರ ,ತನ್ನ ಪ್ರಯಾಣದ ಸಲಹೆ ಪರಿಷ್ಕರಿಸಿದ್ದು ಇದು ಭಾರತ ಮತ್ತು ಕೆನಡಾ ಸರ್ಕಾರಗಳ ನಡುವೆ ಗದ್ದಲಕ್ಕೆ ಕಾರಣವಾಗಿದೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಮಣಿಪುರ ಸೇರಿದಂತೆ ಹಲವಾರು ಪ್ರದೇಶಗಳಿಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ತನ್ನ ನಾಗರಿಕರಿಗೆ ಸಲಹೆ ನೀಡಿದೆ.
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಉದ್ವಿಗ್ನವಾಗಿದೆ. ಹಿಂಸಾತ್ಮಕ ಪ್ರತಿಭಟನೆಗಳು, ನಾಗರಿಕ ಅಶಾಂತಿ ಮತ್ತು ಭಯೋತ್ಪಾದನೆ ಮತ್ತು ಉಗ್ರಗಾಮಿ ಕೃತ್ಯಗಳ ಹೆಚ್ಚಿನ ಅಪಾಯಗಳಿವೆ.
ಉಗ್ರಗಾಮಿಗಳು ಮತ್ತು ಭದ್ರತಾ ಪಡೆಗಳ ನಡುವೆ ಹಿಂಸಾತ್ಮಕ ಘರ್ಷಣೆಗಳು ನಿಯಮಿತವಾಗಿ ನಡೆಯುತ್ತಿವೆ. ಭದ್ರತಾ ಪಡೆಗಳ ವಿರುದ್ಧ ಭಯೋತ್ಪಾದಕ ದಾಳಿಗಳು ಕಾರಣವಾಗಿವೆ. ನಾಗರಿಕ ಸಾವುನೋವುಗಳಿಗೆ ಕಾರಣವಾಗಿವೆ ಹೀಗಾಗಿ ವಹಿಸಿ ಎಂದು ಕೆನಡಾ ಸರ್ಕಾರ ತಿಳಿಸಿದೆ.
“ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಮಣಿಪುರದಲ್ಲಿ ಹಲವಾರು ಉಗ್ರಗಾಮಿ ಮತ್ತು ದಂಗೆಕೋರ ಗುಂಪುಗಳು ಸಕ್ರಿಯವಾಗಿವೆ. ನಿಯಮಿತವಾಗಿ ಸ್ಥಳೀಯ ಸರ್ಕಾರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಿವೆ. ಹೀಗಾಗಿ ಎಚ್ಚರಿಕೆ ವಹಿಸಿ ಎಂದು ಸೂಚಿಸಿದೆ.
ಹಲವಾರು ಉಗ್ರಗಾಮಿ ಮತ್ತು ದಂಗೆಕೋರ ಗುಂಪುಗಳು ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಮಣಿಪುರದಲ್ಲಿ ಸಕ್ರಿಯವಾಗಿವೆ. ಅಪರಾಧ ಚಟುವಟಿಕೆಗಳನ್ನು ಬಳಸಬಹುದು. ರಾಜ್ಯದಲ್ಲಿನ ಜನಾಂಗೀಯ ಉದ್ವಿಗ್ನತೆಗಳು ಸಂಘರ್ಷ ಮತ್ತು ನಾಗರಿಕ ಅಶಾಂತಿಗೆ ಕಾರಣವಾಗಬಹುದು ಎಂದು ಸಲಹೆ ನೀಡಿದೆ.
ಹತ್ಯೆಯಲ್ಲಿ ಭಾರತದ ಕೈವಾಡ ಆರೋಪ
ಈ ವರ್ಷದ ಜೂನ್‌ನಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳಿಂದ ಹತ್ಯೆಗೀಡಾದ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಆರೋಪಿಸಿದ್ದಾರೆ.
ಕೆನಡಾದ ಆರೋಪವನ್ನು ಭಾರತ ತಳ್ಳಿ ಹಾಕಿದೆ.
“ಅಸಂಬದ್ಧ” ಮತ್ತು “ಆಧಾರರಹಿತ” ಎಂದು ಕರೆದಿದ್ದರೂ, ಎರಡೂ ಕಡೆಯವರು ತನ್ನ ರಾಜತಾಂತ್ರಿಕರನ್ನು ರಾಷ್ಟ್ರೀಯ ರಾಜಧಾನಿಗಳಿಂದ ಹೊರಹಾಕಿರುವುದು ಬಿಗುವಿನ ವಾತಾವರಣಕ್ಕೆ ಕಾರಣವಾಗಿದೆ.