ಇಸ್ಲಮಾಬಾದ್, ಜೂ.೨೮- ಏಕ ದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ- ಪಾಕಿಸ್ತಾನದ ನಡುವೆ ಅಕ್ಟೋಬರ್ ೧೫ ರಂದು ಗುಜರಾತ್ ನ ಅಹಮದಾಬಾದ್ ನಲ್ಲಿ ನಿಗಧಿಯಾಗಿರುವ ಪಂದ್ಯದಲ್ಲಿ ಭಾಗವಹಿಸುವ ಬಗ್ಗೆ ಸರ್ಕಾರದ ಅನುಮತಿ ಅಗತ್ಯವಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.೧,೩೨,೦೦೦ ಪ್ರೇಕ್ಷಕರು ಕುಳಿತುಕೊಳ್ಳುವ ವಿಶ್ವದ ಅತಿದೊಡ್ಡ ಕ್ರೀಡಾಂಗಣಗಳಲ್ಲಿ ಒಂದಾದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಅಕ್ಟೋಬರ್ ೧೫ ರಂದು ಭಾರತ ಆತಿಥ್ಯ ವಹಿಸುವ ಏಕದಿನ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಗುಂಪು ಪಂದ್ಯ ನಿಗಧಿ ಪಡಿಸಲಾಗಿದೆ.ಏಕ ದಿನ ವಿಶ್ವಕಪ್ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಇಲ್ಲಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಪಿಸಿಬಿ ಈ ಪ್ರತಿಕ್ರಿಯೆ ನೀಡಿದೆ.
ಭಾರತಕ್ಕೆ ಯಾವುದೇ ಪ್ರವಾಸ ಕೈಗೊಳ್ಳುವ ಮುನ್ನ ಪಾಕಿಸ್ತಾನದ ಸರ್ಕಾರದ ಅನುಮತಿಯ ಅಗತ್ಯವಿದೆ. ಮಾರ್ಗದರ್ಶನಕ್ಕಾಗಿ ಸರ್ಕಾರದೊಂದಿಗೆ ಸಂಪರ್ಕ ಹೊಂದಿದ್ದೇವೆ. ಪಾಕಿಸ್ತಾನ ಸರ್ಕಾರ ಹೇಗೆ ಹೇಳುತ್ತದೆಯೋ ಅದನ್ನು ಪಾಲಿಸುತ್ತೇವೆ ಎಂದಿದ್ದಾರೆ.ಕರಡು ವೇಳಾಪಟ್ಟಿಯನ್ನು ನಮ್ಮೊಂದಿಗೆ ಹಂಚಿಕೊಂಡಾಗ ಮತ್ತು ಪ್ರತಿಕ್ರಿಯೆ ಕೋರಿದಾಗ ಒಂದೆರಡು ವಾರಗಳ ಹಿಂದೆ ಐಸಿಸಿಗೆ ಹೇಳಿದ್ದಕ್ಕೆ ಈ ಸ್ಥಾನ ಸ್ಥಿರವಾಗಿದೆ, ”ಎಂದು ಪಿಸಿಬಿ ವಕ್ತಾರರು ಹೇಳಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಭಾರತಕ್ಕೆ ತೆರಳಲು ನಾವಂತೂ ಸಿದ್ದರಿದ್ದೇವೆ.ಆದರೆ ಪಾಕಿಸ್ತಾನದ ಸರ್ಕಾರದ ಅನುಮತಿ ನೀಡಿದ ನಂತರವೇ ಮುಂದಿನ ಹೆಜ್ಜೆ. ಇಲ್ಲದಿದ್ದರೆ ಸರ್ಕಾರ ಹೇಗೆ ನಡೆಯಬೇಕು ಎಂದು ಹೇಳುತ್ತದೆಯೋ ಹಾಗೆ ಮಾಡುತ್ತೇವೆ ಎಂದಿದ್ದಾರೆ
ಕ್ರಿಕೆಟ್ ತಂಡದ ಎಲ್ಲಾ ಸದಸ್ಯರು ತಮ್ಮ ದೇಶದ ನಿಯಮಗಳು ಮತ್ತು ಕಾನೂನುಗಳಿಗೆ ಬದ್ಧರಾಗಿರಬೇಕು ಮತ್ತು ನಾವು ಅದನ್ನು ಗೌರವಿಸುತ್ತೇವೆ. ಆದರೂ ಪಾಕಿಸ್ತಾನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ ಎಂದು ಐಸಿಸಿ ವಕ್ತಾರರು ತಿಳಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯವನ್ನು ಚೆನ್ನೈನಿಂದ ಬೆಂಗಳೂರಿಗೆ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಬೆಂಗಳೂರಿನಿಂದ ಚೆನ್ನೈಗೆ ಮರು ನಿಗದಿಪಡಿಸುವಂತೆ ಪಿಸಿಬಿ ಐಸಿಸಿ ಮತ್ತು ಬಿಸಿಸಿಐಗೆ ಕೇಳಿಕೊಂಡಿತ್ತು. ಸ್ಪಿನ್ನರ್‌ಗಳಿಗೆ ಸಹಾಯ ಮಾಡುವ ಚೆಪಾಕ್‌ನ ಇತಿಹಾಸವನ್ನು ಗಮನಿಸಿದರೆ, ಅದು ತಂಡವನ್ನು ಗುಣಮಟ್ಟದ ಸ್ಪಿನ್ನರ್‌ಗಳನ್ನು ಹೊಂದಲು ಬಿಡುತ್ತದೆ ಎಂಬ ಕಳವಳವನ್ನು ಪಾಕಿಸ್ತಾನ ತಂಡದ ಆಡಳಿತ ಹೊರಹಾಕಿದೆ ಎನ್ನಲಾಗಿದೆ.