ಭಾರತ-ಪಾಕ್ ನಡುವೆ ಸದ್ಯಕ್ಕೆ ಕ್ರಿಕೆಟ್ ಟೂರ್ನಿ ಇಲ್ಲ: ರಮೀಜ್ ರಾಜಾ

ಲಾಹೋರ್, ಸೆ.13- ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಸದ್ಯಕ್ಕೆ ಕ್ರಿಕೆಟ್ ಟೂರ್ನಿ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಪಾಕ್ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷ ರಮೀಜ್ ರಾಜಾ, ಆತುರದ ನಿರ್ಧಾರ ಕೈಗೊಳ್ಳವುದಿಲ್ಲ ಎಂದಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ದೇಶೀಯ ಕ್ರಿಕೆಟ್ ನತ್ತ ಗಮನಗರಿಸುವುದಾಗಿ ಅವರು ತಿಳಿಸಿದ್ದಾರೆ.
ಪಿಸಿಬಿ ಅಧ್ಯಕ್ಷರ ಹುದ್ದೆಗೆ ಸರ್ವಾನುಮತದಿಂದ ಆಯ್ಕೆಯಾದ ನಂತರ ಇಂದು ರಮೀಜ್ ರಾಜಾ ಅಧಿಕಾರ ವಹಿಸಿಕೊಂಡರು.
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್ ಆರಂಭಿಸುವುದು ಸದ್ಯಕ್ಕೆ ಸಾಧ್ಯವಿಲ್ಲ. ರಾಜಕೀಯದ ಮಧ್ಯೆ ಕ್ರಿಕೆಟ್ ನಲುಗಿ ಹೋಗಿದೆ ಎಂದು‌ ಸುದ್ದಿಗಾರರಿಗೆ ತಿಳಿಸಿದರು.
ಪಾಕ್ ಕ್ರಿಕೆಟ್ ತಂಡಕ್ಕೆ ಸದ್ಯದಲ್ಲೇ ಮುಖ್ಯ ತರಬೇತುದಾರರನ್ನು ನೇಮಕ ಮಾಡಲಾಗುವುದು ಎಂದು ಅವರು ತಿಳಿಸಿದರು.