ಭಾರತ- ಪಾಕ್ ಅರ್ಥಪೂರ್ಣ ಚರ್ಚೆಗೆ ಬೈಡನ್ ಬೆಂಬಲ

ವಾಷಿಂಗ್ಟನ್,ಮಾ.೧೦-ಭಾರತ ಮತ್ತು ಪಾಕಿಸ್ತಾನದ ನಡುವೆ ರಚನಾತ್ಮಕ ಮಾತುಕತೆ ಮತ್ತು ಅರ್ಥಪೂರ್ಣ ಮಾತುಕತೆಯನ್ನು ಅಮೇರಿಕ ಬೆಂಬಲಿಸಲಿದೆ ಎಂದು ಅಧ್ಯಕ್ಷ ಜೋ ಬೈಡನ್ ಆಡಳಿತ ತಿಳಿಸಿದೆ.
ಆ ಮಾತುಕತೆಯ ಸ್ವರೂಪ ನಿರ್ಧರಿಸುವುದು ನವದೆಹಲಿ ಮತ್ತು ಇಸ್ಲಾಮಾಬಾದ್‌ಗೆ ಬಿಟ್ಟದ್ದು, ಅವರಿಬ್ಬರೂ ಮಾತುಕತೆಗೆ ಒಪ್ಪಿದರೆ ಅರ್ಥಪೂರ್ಣ ಮಾತುಕತೆಗೆ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಅಮೇರಿಕಾ ಹೇಳಿದೆ.
ಅಮೇರಿಕಾದ ರಾಜ್ಯ ವಕ್ತಾರ ನೆಡ್ ಪ್ರೈಸ್, ಪ್ರತಿಕ್ರಿಯಿಸಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆಗೆ ಮಧ್ಯ ಪ್ರವೇಶಿಸುವುದಿಲ್ಲ. “ಎರಡೂ ದೇಶಗಳು ಮಾತುಕತೆ ನಡೆಸುವ ಸ್ವತಂತ್ರ ಹೊಂದಿದ್ಧಾರೆ ಎಂದಿದ್ದಾರೆ,
ಭಾರತ- ಪಾಕಿಸ್ತಾನದ ನಡುವಿನ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಅವರಿಬ್ಬರು ಸಮ್ಮತಿಸಿದೆ ಜವಾಬ್ದಾರಿ ಸ್ಥಾನದಲ್ಲಿ ನಿಂತು ಸಾಹಾರ್ಧ ಮಾತುಕತೆಗಾಗಿ ಇಬ್ಬರನ್ನೂ ಬೆಂಬಲಿಸುವುದಾಗಿ ಅವರು ತಿಳಿಸಿದ್ದಾರೆ.
“ಎರಡು ಪಾಲುದಾರರ ನಡುವೆ ಮಧ್ಯಸ್ಥಿಕೆ ವಹಿಸಲು ಅಮೇರಿಕಾ ಅಧಿಕಾರ ಹೊಂದಿದೆ. ಪಾಕಿಸ್ತಾನ ಮತ್ತು ಭಾರತ ಪಾಲುದಾರರು, ಆದ್ದರಿಂದ ಏಕೆ ಮಧ್ಯಸ್ಥಿಕೆ ವಹಿಸಬಾರದು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಭಾರತ ಮತ್ತು ಪಾಕಿಸ್ತಾನ ಪರಸ್ಪರ ತೊಡಗಿಸಿಕೊಳ್ಳುವ ವಿಧಾನಗಳು ಅಥವಾ ಮಾರ್ಗವನ್ನು ನಿರ್ಧರಿಸಲು ಅಮೇರಿಕಾಗೆ ಅಧಿಕಾರ ಇಲ್ಲ ಎಂದಿದ್ದಾರೆ.
ರಚನಾತ್ಮಕ ಮಾತುಕತೆಯನ್ನು ನಾವು ಬೆಂಬಲಿಸುತ್ತೇವೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ಅರ್ಥಪೂರ್ಣ ರಾಜತಾಂತ್ರಿಕತೆ, ದೀರ್ಘಾವಧಿಯ ಸಂಘರ್ಷಗಳನ್ನು ಪರಿಹರಿಸಲು ಮೊದಲ ನಿದರ್ಶನದಲ್ಲಿ ಇದೇನು ಅಲ್ಲ ಎಂದಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಮತ್ತೊಂದು ದೀರ್ಘಕಾಲದ ವಿವಾದ ಪರಿಹರಿಸಲು ರಾಜತಾಂತ್ರಿಕತೆ ಬೆಂಬಲಿಸುತ್ತೇವೆ. ಆದರೆ ಅಂತಿಮವಾಗಿ, ಭಾರತ ಮತ್ತು ಪಾಕಿಸ್ತಾನದ ಮೇಲೆ ನಿರ್ಧರಿತವಾಗಿವೆ ಎಂದು ತಿಳಿಸಿದ್ದಾರೆ.