ಭಾರತ ಪತ್ರಿಕೋದ್ಯಮಕ್ಕೂ ಹಾಗೂ ಕೆನಡಾ ಪತ್ರಿಕೋದ್ಯಮಕ್ಕೂ ಅಜಗಜಾಂತರ ವ್ಯತ್ಯಾಸ

ವಿಜಯಪುರ:ಮಾ.31: ಭಾರತ ಪತ್ರಿಕೋದ್ಯಮಕ್ಕೂ ಹಾಗೂ ಕೆನಡಾ ಪತ್ರಿಕೋದ್ಯಮಕ್ಕೂ ಅಜಗಜಾಂತರ ವತ್ಯಾಸವಿದೆ. ಇಲ್ಲಿರುವ ವ್ಯವಸ್ಥೆ ಹಾಗೂ ಅಲ್ಲಿರುವ ವ್ಯವಸ್ಥೆಗಳೆ ಬೇರೆ ಎಂದು ಬಿ.ವಿ.ನಾಗರಾಜ ಹೇಳಿದರು. ಕೆನಡಾದ ಟೊರಂಟೊನ ಇಂಡಿಯಾ ಆಬ್ಸ್‍ರ್ವರ್ ದಿನಪತ್ರಿಕೆಯ ಸಂಪಾದಕ ಹಾಗೂ ಬಿ.ವಿ.ನಾಗ್ ಕಮ್ಯುನಿಕೇಶನ್‍ನ ಅಧ್ಯಕ್ಷ ಬಿ.ವಿ ನಾಗರಾಜು ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಶ್ರೀ.ಮಲ್ಲಪ್ಪಾ ರಾಮಪ್ಪಾ ಮಾನಕಾರ ದತ್ತಿನಿಧಿ ಉಪನ್ಯಾಸ ಮಾಲಿಕೆಯ ಅಡಿಯಲ್ಲಿ ‘ಭಾರತೀಯ ಮಾಧ್ಯಮ ಮತ್ತು ಕೆನಡಾ ಮಾಧ್ಯಮದ ವಿಮರ್ಶಾತ್ಮಕ ವಿಶ್ಲೇಷಣೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆನಾಡದಲ್ಲಿರುವ ಜೀವನಶೈಲಿ ಮತ್ತು ವ್ಯವಸ್ಥೆಯೇ ಬೇರೆ ಅಲ್ಲಿ ಹೋಗುವ ಮುನ್ನ ನಾನು ಬಹಳ ಯೋಚನೆ ಮಾಡಿ ಆ ನಿರ್ಧಾರವನ್ನು ತೆಗೆದುಕೊಂಡಿದ್ದೆ ಆದರೆ ಅಲ್ಲಿ ಹೋದ ಮೇಲೂ ನಾನು ಪತ್ರಕರ್ತನಾಗಿಯೇ ಉಳಿಯಬೇಕೆಂಬ ಆಶಯ ನನ್ನಲ್ಲಿತ್ತು. ಭಾರತದಲ್ಲಿ ನಾನು ಪತ್ರಕರ್ತನಾಗಿ ಕೆಲಸ ಮಾಡಿದ್ದೆ ಆದರೆ ಕೆನಡಾ ದೇಶದಲ್ಲಿ ಪತ್ರಕರ್ತನಾಗಿ ಕೆಲಸ ಮಾಡುವುದು ಸುಲಭದ ಮಾತಾಗಿರಲಿಲ್ಲ. ನಾನು ಅಲ್ಲಿ ಒಂದು ತಮಿಳು ಪತ್ರಿಕೆ ಸಿಕ್ಕಿತು ಅದನ್ನು ನೋಡಿ ನನಗೆ ಆಶ್ಚರ್ಯವಾಯಿತು. ಅದನ್ನು ನೋಡಿ ಅಲ್ಲಿ ಹೋದ ಮೇಲೆ ಆ ತಮಿಳು ಪತ್ರಿಕೆ ನನ್ನ ಮೇಲೆ ಬೀರಿದ ಪ್ರಭಾವದಿಂದ ನಾನು ಪತ್ರಿಕೆ ಮಾಡಬೇಕು ಎಂದು ನಿರ್ಣಯ ತೆಗೆದುಕೊಂಡೆ. ನನ್ನ ಕುಟುಂಬದ ಸಹಕಾರದಿಂದ ನಾನು ಮುಂದೆ ಇಂಡಿಯಾ ಆಬ್ಸ್‍ರ್ವರ್ ಎಂಬ ಮಾಸಿಕ ಪತ್ರಿಕೆಯನ್ನು ತೆಗೆದೆ. ಇಂದು ಅದನ್ನು ಅತ್ಯಂತ ಯಶಸ್ಸಿನಿಂದ ನಡೆಸುತ್ತಿರುವುದು ಖುಷಿ ತಂದಿದೆ ಎಂದು ಹೇಳಿದರು.
ಇನ್ನು ಭಾರತ ಪತ್ರಿಕೋದ್ಯಮಕ್ಕೂ ಹಾಗೂ ಕೆನಡಾ ಪತ್ರಿಕೋದ್ಯಮಕ್ಕೂ ಅಜಗಜಾಂತರ ವತ್ಯಾಸವಿದೆ. ಇಲ್ಲಿರುವ ವ್ಯವಸ್ಥೆ ಹಾಗೂ ಅಲ್ಲಿರುವ ವ್ಯವಸ್ಥೆಗಳೆ ಬೇರೆ ಎಂದು ಬಿ.ವಿ.ನಾಗರಾಜ ಹೇಳಿದರು.
ಕೆನಡಾದಲ್ಲಿ ತನಿಖಾವರದಿ ಮಾಡಬೇಂಕೆಂದರೆ ನಾವು ಭಾರತದ ತರಹದಲ್ಲಿ ಮಾಡಲು ಸಾಧ್ಯವಿಲ್ಲ. ಮೊದಲೇ ಎಲ್ಲ ಅಧಿಕೃತ ದಾಖಲಾತಿಗಳನ್ನು ಕಲೆ ಹಾಕಿ ಆಮೇಲೆ ನೀವು ವರದಿ ಮಾಡಬೇಕು ಇಲ್ಲವಾದಲ್ಲಿ ಕಠಿಣ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ.
ಕೆನಡಾದಲ್ಲಿ ಸಮಾಜದ ದುಡ್ಡನ್ನು ಲೂಟಿ ಮಾಡುವಂತವರನ್ನು ಮಾಧ್ಯಮಗಳು ಸುಮ್ಮನೆ ಬಿಡುವುದೇ ಇಲ್ಲ ಅವರು ಮಾಡಿದ ಅಪರಾಧಗಳನ್ನು ಬಹಳಷ್ಟು ಬಿಂಬಿಸುವ ಮೂಲಕ ಅವರ ಅಧಿಕಾರದಿಂದ ಕೆಳಗಿಳಿಯುವಂತೆ ಮಾಡುತ್ತಾರೆ. ಅಂತಹ ವ್ಯವಸ್ಥೆ ಇದೆ ಅಲ್ಲಿ. ಅಂತಹ ಕಟ್ಟು-ನಿಟ್ಟಿನ ವ್ಯವಸ್ಥೆ ನಮ್ಮ ದೇಶದಲ್ಲೂ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಮತ್ತು ಕೆನಡಾದ ಜೀವನಶೈಲಿ ಮತ್ತು ವ್ಯವಸ್ಥೆ ಬಗ್ಗೆ ತಿಳಿಸಿದ ಅವರು, ಇಲ್ಲಿಯ ತರಹ ರಾಜಕೀಯ ವ್ಯವಸ್ಥೆ ಅಲ್ಲಿ ಇಲ್ಲ. ಅಲ್ಲಿ ಎಲ್ಲವೂ ವ್ಯವಸ್ಥೆಗೆ ಅನುಗುಣವಾಗಿ ನಡೆಯುತ್ತದೆ. ಅಲ್ಲಿಯ ರಾಜಕೀಯ ನಾಯಕರು ಅಂತ ಇರೊಲ್ಲ ಅವರು ಸಹ ಅತ್ಯಂತ ಸಾಮಾನ್ಯರಂತೆ ಕೆಲಸಗಾರರಂತೆ ಬದುಕುತ್ತಾರೆ. ಇಲ್ಲಿಯ ತರಹ ಅವರ ಹಿಂದೆ ಜನರ ಹಿಂಡು, ಅಭಿಮಾನಿಗಳ ಹಿಂಡು ಇಂತಹ ಸ್ಥಿತಿ ಇರುವುದಿಲ್ಲ. ಮತ್ತು ಅರ್ಜಿಗಳನ್ನು ಅಲ್ಲಿ ಒಂದು ಯೋಜನೆ ಫಲಾನುಭವಿಗಳು ಅದನ್ನು ಪಡೆಯಬೇಕೆಂದರೆ ಅರ್ಜಿಗಳನ್ನು ಹಇಡಿದುಕೊಂಡು ಸಂಬಂಧಪಟ್ಟವರತ್ತ ಬಂದು ದುಂಬಾಲು ಬೀಳುವ ಸ್ಥಿತಿ ಇಲ್ಲ. ಅಲ್ಲಿ ಯಾರಿಗೂ ಯಾರೂ ಸಲಾಂ ಹೊಡೆಯುವುದೇ ಇಲ್ಲ. ಎಲ್ಲ ಕೆಲಸಗಳನ್ನು ಸರಕಾರ ಬಹಳಷ್ಟು ಗಮನ ಕೊಟ್ಟು ಅದನ್ನು ವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತವೆ. ಹೀಗಾಗಿ ಅಲ್ಲಿಯ ಪತ್ರಿಕಗೆಳಿಗೆ ಬಹಳ ಕೆಲಸ ಇರುವುದಿಲ್ಲ. ಬರದರೆ ಸರಕಾರದ ಯೋಜನೆಗಳ ಬಗ್ಗೆ, ಅದರ ಮಾಹಿತಿಗಳ ಬಗ್ಗೆ ಬರೆಯುವುದಷ್ಟೇ ಕೆಲಸ. ಇನ್ನು ಯಾರಾದರೂ ಅನ್ಯಾಯಕ್ಕೊಳಗಾಗಿದ್ದರೆ ಅವರ ಬಗ್ಗೆ ಬೆಳಕು ಚೆಲ್ಲಿದರೆ ಸಾಕು ತತಕ್ಷಣವೇ ಅದರ ಬಗ್ಗೆ ಜಾಗೃತರಾಗಿ ಕ್ರಮ ಕೈಗೊಳ್ಳುವಂತಹ ಒಂದು ಉತ್ತಮ ಸರಕಾರಿ ವ್ಯವಸ್ಥೆ ಅಲ್ಲಿದೆ. ಇನ್ನು ಕೋವಿಡ್ ಸಮಯದಲ್ಲಿ ಅಲ್ಲಿ ಯಾರು ನಮಗೆ ಕಷ್ಟ ಎಂದು ಹೇಳುವ ಪರಿಸ್ಥಿತಿಯೇ ಬರಲಿಲ್ಲ. ಪ್ರತಿ ತಿಂಗಳು ಸರಕಾರ 2000 ಡಾಲರ್ ಚೆಕನ್ನು ಮನೆ-ಮನೆಗೆ ತಲುಪಿಸಿತ್ತು ಇಂತಹ ಒಂದು ಅತ್ಯುತ್ತಮ ಆಡಳಿತ ವ್ಯವಸ್ಥೆ ಕೆನಡಾದಲ್ಲಿದೆ. ಅಂತಹ ವ್ಯವಸ್ಥೆ ಎಲ್ಲ ದೇಶಗಳಲ್ಲೂ ಬರಬೇಕು ಎಂದರು.
ಇದೇ ಸಂರ್ಭದಲ್ಲಿ ಕೆನಡಾದ ಟೊರಂಟೊನ ಸಂವಹನ ತಜ್ಞೆ ಹಾಗೂ ಬಿ.ವಿ.ನಾಗರಾಜ್ ಅವರ ಪತ್ನಿ ಗೀತಾ ನಾಗರಾಜು ಮಾತನಾಡಿ, ಭಾರತವನ್ನು ನಾವು ಬಿಟ್ಟು ಹೋದ ಮೇಲೆ ಸುರುವಾತಿನಲ್ಲಿ ನಮಗೆ ಬಹಳವೇ ಕಷ್ಟವಾಯಿತು. ಆದರೆ ನಾಗರಾಜು ಅವರು ಪತ್ರಿಕೆಯನ್ನು ಪ್ರಾರಂಭಿಸಲು ನಿರ್ಧರಿಸಿದರು. ಅವರ ಜೊತೆಗೆ ನಾವು ಕೈ-ಜೊಡಿಸಿ ಅವರಿಗೆ ಸಹಕಾರ ನೀಡುತ್ತಾ ಬಂದೆವು. ಮತ್ತು ಕೆನಡಾದಲ್ಲಿ ಪತ್ರಿಕೆಯನ್ನು ತೆಗೆಯುವುದು ಸುಲಭದ ಮಾತಲ್ಲ. ಆದರೆ ನಾಗರಾಜ್ ಅವರುÁ ಸಾಹಸಕ್ಕೆ ಕೈ ಹಾಕಿ ಯಶಸ್ಸು ಹೊಂದಿ ಇಂದು ಒಂದು ರೆಡಿಯೋನ್ನು ಕೂಡ ನಾವು ನಡೆಸುತ್ತಿದ್ದೇವೆ ಎಂದು ಹೇಳಿದರು.
ಆದರೆ ನಾನು ಅಲ್ಲಿ ನೋಡಿದ್ದು ಅಲ್ಲಿರುವ ಮಕ್ಕಳು ತಮ್ಮ ಪಾಲಕರಿಗೆ ಬಹಳ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಇಲ್ಲಿ ನಾವೆಲ್ಲದಕ್ಕೂ ಪಾಲಕರ ಮೇಲೆ ಅವಲಂಬಿತವಾಗಿರುತ್ತೇವೆ ಆದರೆ ಅಲ್ಲಿ ಹಾಗಿಲ್ಲ. ಎಲ್ಲವನ್ನೂ ಮಕ್ಕಳು ತಾವೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಹಾದಿ ಹುಡುಕುತ್ತಾರೆ. ತಮ್ಮ ಜೀವನದ ಆಧಾಯವನ್ನು ತಾವೆ ಗಳಿಸಿ ಜೊತೆಗೆ ಪಾಲಕರಿಗೂ ಕೊಡುತ್ತಾರೆ ಮತ್ತು ಅವರಿಗೆ ದುಡ್ಡಿನ ಬೆಲೆ ಬಗ್ಗೆ, ಜೀವನದ ಬಗ್ಗೆ ಅತ್ಯುತ್ತಮವಾಗಿ ಅರಿತುಕೊಂಡಿರುತ್ತಾರೆ. ಅಂತಹ ವ್ಯವಸ್ಥೆ ಇದೆ ಕೆನಡಾ ಜೀವನಶೈಲಿಯಲ್ಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ಯಶಸ್ಸಿನ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬುವುದನ್ನು ನಾವು ಕೇಳಿರುತ್ತೇವೆ ಆದರೆ ಇಂದು ಆ ಮಾತಿಗೆ ಸಾಕ್ಷಿ ಎಂಬಂತೆ ಬಿ.ವಿ.ನಾಗರಾಜ್ ಅವರನ್ನು ಮತ್ತು ಅವರ ಪತ್ನಿ ಗೀತಾ ನಾಗರಾಜ್ ಅವರನ್ನು ನಾವಿಂದು ನೋಡುತ್ತಿದ್ದೇವೆ ಎಂದು ಹೇಳಿದರು.
ಇಂದಿನ ಈ ಉಪನ್ಯಾಸ ಬಹಳಷ್ಟು ಅರ್ಥಪೂರ್ಣವಾಗಿ ಜರಗಿದ್ದು, ಬಿ.ವಿ.ನಾಗರಾಜ್ ಅವರು ಕೆನಡಾ ಜೀವನ ಮತ್ತು ಅಲ್ಲಿರುವ ಮಾಧ್ಯಮದ ಸ್ಥಿತಿಗತಿ ಬಗ್ಗೆ ಅಚ್ಚುಕಟ್ಟಾಗಿ ವಿವರಿಸಿದ್ದಾರೆ.
ಭಾರತಕ್ಕೂ ಮತ್ತು ಕೆನಡಾದ ಎರಡು ದೇಶಗಳ ಮಧ್ಯೆ ಇರುವ ವತ್ಯಾಸಗಳನ್ನು ತಿಳಿಸಿ ಮತ್ತು ಅಲ್ಲಿ ಮತ್ತು ಇಲ್ಲಿರುವ ಮಾಧ್ಯಮಗಳಗಳ ಕುರಿತು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿದ್ದಾರೆ ಅದರ ಪ್ರಯೋಜನ ಮತ್ತು ಸದುಪಯೋಗವನ್ನು ನಿವೆಲ್ಲ ಪಡೆದುಕೊಳ್ಳಿ ಎಂದು ಆಶಿಸುತ್ತೇನೆ ಎಂದರು.
ಅಲ್ಲಿ ಬಿ.ವಿ.ನಾಗರಾಜ್ ಮತ್ತು ಅವರ ಪತ್ನಿ ಗೀತಾ ನಾಗರಾಜ್ ಅವರು ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳುವ ಮೂಲಕ ತಾವೇ ಒಂದು ರೆಡಿಯೋವನ್ನು ತೆಗೆದು ಪ್ರತಿನಿತ್ಯ ಕನ್ನಡ ಕಾರ್ಯಕ್ರಮಗಳನ್ನು ಈ ದಂಪತಿ ನೀಡುತ್ತಿರುವುದು ವಿಶೇಷ ಮತ್ತು ಹೆಮ್ಮೆ ಎಂದು ಹೇಳಿದರು.
ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿಭಾಗದ ವಿದ್ಯಾರ್ಥಿನಿಯರು ಹೋರ ತಂದ 100ನೇ ಮಹಿಳಾ ಧ್ವನಿ ವಿಶೇಷ ಸಂಚಿಕೆಯನ್ನು ಮುಖ್ಯ ಅತಿಥಿಗಳು ಬಿಡುಗಡೆಗೊಳಿಸಿದರು. ಸಂಪನ್ಮೂಲ ವ್ಯಕಿಗಳಾಗಿ ಆಗಮಿಸಿದ್ದ ಬಿ.ವಿ ನಾಗರಾಜು ಹಾಗೂ ಮುಖ್ಯ ಅತಿಥಿ ಗೀತಾ ನಾಗರಾಜು ಇವರಿಗೆ ವಿಭಾಗದ ಪರವಾಗಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಸಹಾಯಕ ಪ್ರಾಧ್ಯಾಪಕಿ ಡಾ.ತಹಮೀನಾ ಕೋಲಾರ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಸಂದೀಪ ನಾಯಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಶೋಧನಾ ವಿದ್ಯಾರ್ಥಿನಿ ಫಿಲೋಮಿನಾ ಪರಿಚಯಿಸಿದರು. ದೀಪಾ ತಟ್ಟಿಮನಿ ನಿರೂಪಿಸಿದರು. ಮತ್ತು ಸುಷ್ಮಾ ಪವಾರ ವಂದಿಸಿದರು