ಭಾರತ ನೈಜ ಮಿತ್ರ ರಾಷ್ಟ್ರ: ಬಾಂಗ್ಲಾ ಪ್ರಧಾನಿ


ನವದೆಹಲಿ ಡಿಸೆಂಬರ್ ೧೭. ಭಾರತ ನಮ್ಮ ನೈಜ ಮಿತ್ರ ರಾಷ್ಟ್ರ ಎಂದು ಬಣ್ಣಿಸಿರುವ ಬಾಂಗ್ಲಾ ದೇಶದ ಪ್ರಧಾನಿ ಶೇಕ್ ಹಸೀನಾ ಅವರು, ೧೯೭೧ ರಲ್ಲಿ ಬಾಂಗ್ಲಾದೇಶದ ವಿಮೋಚನೆಗಾಗಿ ನಡೆದ ಯುದ್ಧ ದಲ್ಲಿ ನೀಡಿದ ಬೆಂಬಲಕ್ಕೆ ಭಾರತಕ್ಕೆ ನಾವು ಋಣಿಯಾಗಿದ್ದೇವೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ವಿರುದ್ಧ ೧೯೭೧ ರಲ್ಲಿ ನಡೆದ ಯುದ್ಧದ ವಿಜಯೋತ್ಸವದ ಆಚರಣೆ ಅಂಗವಾಗಿ ನಿನ್ನೆ ನಡೆದ ವಿಜಯ್ ದಿವಸ್ ನಂತರ ಇಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ನಡೆದ ವರ್ಚುಯಲ್ ಸಮಾವೇಶದಲ್ಲಿ ಬಾಂಗ್ಲಾ ಪ್ರಧಾನಿ ವಚಾರವನ್ನು ತಿಳಿಸಿದ್ದಾರೆ.
ಭಾರತ ನಮ್ಮ ನಿಜವಾದ ಮಿತ್ರ ರಾಷ್ಟ್ರವಾಗಿದೆ.ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಭಾರತದ ೩ ದಶಲಕ್ಷ ಯೋಧರು ಹುತಾತ್ಮರಾಗಿದ್ದಾರೆ. ಹುತಾತ್ಮರಾದ ಯೋಧರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅವರ ಕುಟುಂಬ ಸದಸ್ಯರಿಗೆ ಗೌರವ ನಮನ ಸಲ್ಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ನಮ್ಮ ದೇಶಕ್ಕಾಗಿ ಬೆಂಬಲ ನೀಡಿದ ಭಾರತದ ಜನತೆಗೆ ನಾನು ಋಣಿಯಾಗಿದ್ದೇನೆ ಎಂದು ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶ ನಮ್ಮ ನೆರೆ ಹೊರೆ ಮೊದಲ ನೀತಿಯ ಪ್ರಮುಖ ಆಧಾರ ಸ್ತಂಭವಾಗಿದೆ ಹೇಳಿದ್ದಾರೆ.